BBK-11: ಕಿಚ್ಚನ ಹೆಸರು ತೆಗೆದು ಹಾಕಿದ ವಾಹಿನಿ; ಬಿಗ್ ಬಾಸ್‌ಗೆ ಸುದೀಪ್ ಅನುಮಾನ?
Team Udayavani, Sep 10, 2024, 10:47 AM IST
ಬೆಂಗಳೂರು: ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕನ್ನಡ -11 (Bigg Boss Kannada -11) ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿ ಅಧಿಕೃತವಾಗಿ ಹೊಸ ಸೀಸನ್ ಹೊಸ ಲೋಗೋವನ್ನು ಪರಿಚಯಿಸಿತು.
ಪ್ರತಿ ವರ್ಷಕ್ಕಿಂತ ಈ ವರ್ಷದ ಬಿಗ್ ಬಾಸ್ ಆರಂಭಕ್ಕೆ ಹೆಚ್ಚಿನ ಕುತೂಹಲವಿದೆ. ಅದಕ್ಕೆ ಮುಖ್ಯ ಕಾರಣವೆಂದರೆ ಈ ಬಾರಿ ನಿರೂಪಕನ ವಿಚಾರದಲ್ಲಿ ಹುಟ್ಟಿಕೊಂಡಿರುವ ಪ್ರಶ್ನೆ. ಕಿಚ್ಚ ಸುದೀಪ್ (Kiccha Sudeep) ಅವರು ಈ ಬಾರಿ ಬಿಗ್ ಬಾಸ್ ನಡೆಸಿಕೊಡುವುದು ಅನುಮಾನವೆನ್ನಲಾಗುತ್ತಿದೆ.
ಆದರೆ ಈ ಗೊಂದಲದ ನಡುವೆಯೇ ವಾಹಿನಿ ರಿವೀಲ್ ಮಾಡಿದ್ದ ಹೊಸ ಲೋಗೋ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರ ಹೆಸರನ್ನು ಹ್ಯಾಷ್ ಟ್ಯಾಗ್ ಆಗಿ ಬಳಸಲಾಗಿತ್ತು. ಇದರಿಂದ ಕಿಚ್ಚ ಅವರೇ ಶೋ ನಡೆಸಿಕೊಡಲಿದ್ದಾರೆ ಎನ್ನುವ ಮಾತು ಮತ್ತೆ ಮುನ್ನೆಲೆಗೆ ಬಂದಿತ್ತು.
ಆದರೆ ಇದೀಗ ಈ ಲೋಗೋ ವಿಡಿಯೋದಿಂದ ಕಿಚ್ಚ ಸುದೀಪ್ ಅವರ ಹೆಸರನ್ನು ತೆಗೆಯಲಾಗಿದೆ. ಹಾಗಾಗಿ ಅವರು ಶೋ ನಡೆಸಿಕೊಡುವ ಬಗೆಗಿನ ಚರ್ಚೆ ಮತ್ತೆ ಶುರುವಾಗಿದೆ.
ಇತ್ತೀಚೆಗೆ ಕಿಚ್ಚ ಸುದ್ದಿಗೋಷ್ಟಿಯಲ್ಲಿ ಬಿಗ್ ಬಾಸ್ ಬಗ್ಗೆ ಮಾತನಾಡುತ್ತಾ, “ಕಳೆದ 10 ಸೀಸನ್ ನಾನು ಬಿಗ್ ಬಾಸ್ ನಡೆಸಿಕೊಟ್ಟಿದ್ದೇನೆ ಅನ್ನೋದು ಮಾತ್ರ ಎಲ್ಲರಿಗೂ ಗೊತ್ತು. ಆದರೆ ಅದರ ಹಿಂದಿನ ಕಷ್ಟ ಎಲ್ಲರಿಗೂ ಗೊತ್ತಿಲ್ಲ. ಬಿಗ್ ಬಾಸ್ ಸೀಸನ್ -11 ಕ್ಕೆ ಬೇರೆಯವರೂ ಬರಲಿ ಅಂತಾ ಕಾಯ್ತಾ ಇದೀನಿ. ಬಿಗ್ ಬಾಸ್‌ನ 10 ಸೀಸನ್‌ಗಳನ್ನು ನಾನು ಡೆಡಿಕೇಟ್ ಮಾಡಿದ್ದೀನಿ. ಕಳೆದ 10 ಸೀಸನ್‌ಗಳನ್ನು ನಾನು ನಡೆಸಿಕೊಂಡು ಬಂದಿದ್ದೀನಿ. ನಾನು ಬಿಗ್ ಬಾಸ್ ನಡೆಸಿಕೊಡ್ತೀನಿ ಅಂತಾ ಎಲ್ಲರಿಗೂ ಗೊತ್ತಿದೆ. ಆದರೆ ನಾನು ಹೇಗೆ ನಡೆಸಿಕೊಡುತ್ತಿದ್ದೆ ಅಂತಾ ಯಾರಿಗಾದರೂ ಗೊತ್ತಿದ್ಯಾ? ಬಿಗ್ ಬಾಸ್‌ಗಾಗಿ ನಾನು ಎಲ್ಲಿದ್ದರೂ ಬರಬೇಕಾಗುತ್ತದೆ. ಬಿಗ್ ಬಾಸ್ ನಡೆಸಬೇಕಾದರೆ ಅದರ ಹಿಂದಿನ ಸ್ಥಿತಿ ಹೇಗಿರುತ್ತದೆ ಅಂತಾ ನನಗೆ ಗೊತ್ತಿದೆ ” ಎಂದು ಹೇಳಿದ್ದರು.
ಇತ್ತ ಜಿಯೋ ಸಿನಿಮಾ ಬಿಗ್ ಬಾಸ್ ಕನ್ನಡ ಸೀಸನ್ -11ರ ಟೀಸರ್ ಶೀಘ್ರದಲ್ಲಿ ಬರಲಿದೆ ಎಂದು ಹಾಕಿಕೊಂಡಿದೆ.
ಕಿಚ್ಚ ಸುದೀಪ್ ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಬಿಗ್ ಬಾಸ್ ಗಾಗಿ ಟೈಮ್ ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಬಿಗ್ ಬಾಸ್ ಕನ್ನಡ ಸೀಸನ್ -11 ನಿರೂಪಕರ ಹೆಸರಿನಲ್ಲಿ ರಮೇಶ್ ಅರವಿಂದ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಇನ್ನಷ್ಟೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Martin: ಕಿರುತೆರೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.