BBK-11: ಮೊದಲ ದಿನವೇ ಬಿಗ್ ಮನೆಯಲ್ಲಿ ಚಿನ್ನಾಭರಣ ಕಳಚಿಟ್ಟ ‘ಗೋಲ್ಡ್ ಸುರೇಶ್’
Team Udayavani, Sep 30, 2024, 9:04 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Bigg Boss Kannada-11) ಗ್ರ್ಯಾಂಡ್ ಪ್ರಿಮಿಯರ್ ನಲ್ಲಿ ಈ ಬಾರಿಯ ಸ್ಪರ್ಧಿಗಳನ್ನು ರಿವೀಲ್ ಮಾಡಲಾಗಿದೆ.
ಒಟ್ಟು 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ. ಕೆಲವರು ಸ್ವರ್ಗದ ಮನೆಯಲ್ಲಿ ಇನ್ನು ಕೆಲವರು ನರಕದ ಮನೆಯಲ್ಲಿ ದಿನ ಕಳೆದಿದ್ದಾರೆ. ಹೊರ ಪ್ರಪಂಚದಲ್ಲಿ ಹಾಯಾಗಿದ್ದ ಸ್ಪರ್ಧಿಗಳು ಮೊದಲ ದಿನವೇ ಬಿಗ್ ಬಾಸ್ ಮನೆಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ತಮ್ಮ ಇಷ್ಟದಂತೆ ಬದುಕಿ ಬಂದಿರುವ ಮಂದಿ ಬಿಗ್ ಬಾಸ್ ಲೈಫ್‌ಗೆ ಹೊಂದಿಕೊಳ್ಳುವ ಯತ್ನದಲ್ಲಿ ಎಂದು ಇಂದು ರಾತ್ರಿ (ಸೆ.30ರಂದು) ಪ್ರಸಾರವಾಗುವ ಪ್ರೋಮೊದಲ್ಲಿ ತೋರಿಸಲಾಗಿದೆ.
View this post on Instagram
ಲಾಯರ್ ಜಗದೀಶ್ ಅವರು ಚೈತ್ರಾ ಕುಂದಾಪುರ ಫೀಮೇಲ್ ಡಾನ್, ತಾನು ಮೇಲ್ ಡಾನ್ ಎಂದು ಹೇಳಿರುವುದನ್ನು ತೋರಿಸಲಾಗಿದೆ. ಇನ್ನೊಂದೆಡೆ ʼಗೋಲ್ಡ್ ಸುರೇಶ್ʼ ಅವರು ಎಲ್ಲ ಚಿನ್ನವನ್ನು ತೆಗೆದಿಟ್ಟಿರುವವುದನ್ನು ತೋರಿಸಲಾಗಿದೆ.
ಇನ್ನು ʼಸತ್ಯʼವಾಗಿ ಹೊರ ಜಗತ್ತಿಗೆ ಪರಿಚಿತರಾಗಿರುವ ಗೌತಮಿ ಜಾಧವ್ ಅವರು ತಮ್ಮ ಸೀರಿಯಲ್ ಹೇರ್ ಸ್ಟೈಲ್ ಬಿಟ್ಟು ನೈಜ ಹೇರ್ ಸ್ಟೈಲ್ ನ್ನು ರಿವೀಲ್ ಮಾಡಿದ್ದಾರೆ. ಗೌತಮಿಯ ಹೊಸ ಅಧ್ಯಾಯ ಇಲ್ಲಿ ಶುರುವಾಗುತ್ತಿದೆ ಎಂದು ಹೇಳಿದ್ದಾರೆ.
ಸ್ವರ್ಗದಲ್ಲಿರುವ ಸ್ಪರ್ಧಿಗಳು ಇವರು.. ಸ್ವರ್ಗದ ಮನೆಯಲ್ಲಿ ಒಟ್ಟು 10 ಮಂದಿ ಇದ್ದಾರೆ. ಭವ್ಯಾಶ್ರೀ, ಯಮುನಾ, ಧನರಾಜ್, ಗೌತಮಿ, ಧರ್ಮ ಕೀರ್ತಿರಾಜ್, ಜಗದೀಶ್, ತ್ರಿವಿಕ್ರಮ್, ಹಂಸಾ, ಐಶ್ವರ್ಯಾ, ಮಂಜು ಅವರು ಸ್ವರ್ಗದ ನಿವಾಸಿಗಳಾಗಿದ್ದಾರೆ.
ನರಕದ ನಿವಾಸಿಗಳು: ಇನ್ನು ನರಕದ ಮನೆಯಲ್ಲಿ ಒಟ್ಟು 7 ಮಂದಿ ಇದ್ದಾರೆ. ಅನುಷಾ ರೈ, ಶಿಶಿರ್, ಮಾನಸ, ಗೋಲ್ಡ್ ಸುರೇಶ್, ಚೈತ್ರಾ, ಮೋಕ್ಷಿತಾ, ರಂಜಿತ್ ಅವರು ನರಕದ ನಿವಾಸಿಗಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.