BBK-11: ಬಿಗ್‌ಬಾಸ್ ಮನೆಯಲ್ಲಿ ಆ ʼಡೌಟ್ʼನಿಂದಲೇ ಶುರುವಾಯಿತು ಜಗಳ
Team Udayavani, Oct 1, 2024, 3:52 PM IST
ಬೆಂಗಳೂರು: ಬಿಗ್ ಬಾಸ್(Bigg Boss Kannada-11) ಆರಂಭಗೊಂಡು ಒಂದು ದಿನ ಕಳೆದಿದೆ. ಆದರೆ ಈ ಒಂದು ದಿನದಲ್ಲಿ ಸ್ಪರ್ಧಿಗಳು ಅನೇಕ ಸಲಿ ಕಿತ್ತಾಡಿಕೊಂಡಿದ್ದಾರೆ.
ಈ ಬಾರಿ ಸ್ವರ್ಗ ಹಾಗೂ ನರಕ ಎಂಬ ಎರಡು ಮನೆಗಳಿವೆ. ನರಕದಲ್ಲಿನ 7 ಮಂದಿ, ಸ್ವರ್ಗದಲ್ಲಿನ 10 ಮಂದಿ ತಂಡದಂತೆ ಇದ್ದಾರೆ. ಆದರೆ ಈ ತಂಡಗಳ ಒಳಗೆಯೇ ಹೊಂದಾಣಿಕೆಯಿಲ್ಲದೆ ಮಾತಿಗೆ ಮಾತು ಬೆಳೆಯುತ್ತಿದೆ.
ಮೊದಲ ದಿನ ಯಮುನಾ, ಜಗದೀಶ್ ಹಾಗೂ ಚೈತ್ರಾ ಕುಂದಾಪುರ ಅವರ ಧ್ವನಿಯೇ ಹೆಚ್ಚಾಗಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದೆ. ಉಳಿದ ಸ್ಪರ್ಧಿಗಳ ನಡುವೆಯೋ ಸಣ್ಣ ಸಣ್ಣ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ.
ಇದನ್ನೂ ಓದಿ: BBK11: ಬಿಗ್‌ಬಾಸ್ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್ ಸುರೇಶ್ ಬಳಿ ಇರುವುದೇನು?
ನರಕ ನಿವಾಸಿಗಳಾಗಿರುವ ಮಾನಸ ಹಾಗೂ ಚೈತ್ರಾ ಅವರ ನಡುವೆ ಧ್ಯಾನದ ವಿಚಾರಕ್ಕೆ ಜಗಳ ನಡೆದಿದೆ.
ನನಗೆ ಈ ಧ್ಯಾನ ಮಾಡುತ್ತಾರೆ ಅಲ್ವಾ ಅವರ ಮೇಲೆ ಒಂಚೂರು ಡೌಟ್ ಇರುತ್ತೆ. ಇದು ಮಾಡುತ್ತಾ ಇದ್ದಾರ ಅಲ್ವಾ ಅಂಥ ಹೇಳಿ ಮಾನಸ ಅವರು ನಕ್ಕಿದ್ದಾರೆ.
ಇದನ್ನು ಕೇಳಿದ ಚೈತ್ರಾ ಅವರು “ನಿಮ್ಮದ್ದೆಷ್ಟು ಇದೆ ನೀವು ನೋಡ್ಕೊಳ್ಳಿ ಅನುಮಾನ ಅಂಥ ಜಡ್ಜ್ ಮೆಂಟ್ ಕೊಡ್ಬೇಡಿ. ಮಾತನಾಡಕ್ಕೂ ಒಂದು ಲೆವೆಲ್ ಬೇಕು. ನಾನು ಏನು ಮಾಡಿದರೂ ಅದು ತಪ್ಪು ಅದು ತಪ್ಪು ಅನ್ನೋಕೆ ಇವರು ಯಾರು ಹೇಳೋಕೆ” ಎಂದು ಚೈತ್ರಾ ಪ್ರಶ್ನೆ ಮಾಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ನರಕಕ್ಕೆ ಕಿಚ್ಚು ಹಚ್ಚಿದ ‘ಡೌಟ್’
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30 #BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/UO2S2XuC4a
— Colors Kannada (@ColorsKannada) October 1, 2024
ನನಗೆ ಜ್ಞಾನವಿಲ್ಲ ಅಲ್ಪ ಜ್ಞಾನಿ ನಾನು. ಜ್ಞಾನವಿಲ್ಲ ಅಂದ್ರೆ ಮಾತನಾಡಬಾರದು ಎಂದು ಹೇಳಿ ಮಾನಸ ಅವರ ಚೈತ್ರಾ ಗರಂ ಆಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಇದಲ್ಲದೆ ಇಂದು ಉಳಿದ ಸ್ಪರ್ಧಿಗಳ ನಾಮಿಷೇನ್ ಪ್ರಕ್ರಿಯೆ ನಡೆಯಲು ಟಾಸ್ಕ್ ನೀಡಲಾಗುತದೆ. ಈ ನಡುವೆ ನರಕ – ಸ್ವರ್ಗದ ಸ್ಪರ್ಧಿಗಳಾದ ಯಮುನಾ ಹಾಗೂ ಶಿಶಿರ್ ನಡುವೆ ಮಾತಿನ ಚಕಮಕಿ ನಡೆಯುವುದನ್ನು ಮತ್ತೊಂದು ಪ್ರೋಮೊದಲ್ಲಿ ತೋರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಭಾವುಕರಾದ ಸ್ಪರ್ಧಿಗಳು.!
BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ
BBK11: ನಿನ್ನೆ ಅಣ್ಣಾ ಎಂದು ಅತ್ತಿದ್ದ ಚೈತ್ರಾ, ಇಂದು ಶಿಶಿರ್ ಬೆನ್ನಿಗೆ ಚೂರಿ ಹಾಕಿದ್ರಾ?
BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
BBK11: ಜೋಡಿ ಹಕ್ಕಿ ಅನುಷಾ-ಧರ್ಮ ನಡುವೆ ವಾಗ್ವಾದ.. ನಾನು ನಾಲಾಯಕ್ ಎಂದ ಕ್ಯಾಡ್ಬರಿಸ್ ಹೀರೋ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.