BBK11: ಬಿಗ್ ಬಾಸ್ ಮನೆಯಲ್ಲಿ ಸವಾಲಿಗೆ ಸವಾಲು.. ತಲೆ ಬೋಳಿಸಿಕೊಂಡ ರಜತ್
Team Udayavani, Dec 3, 2024, 9:21 AM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ (Bigg Boss Kannada-11) ಶಾಕಿಂಗ್ ಎಲಿಮಿನೇಷನ್ ನಡೆದ ಬಳಿಕ ಟಾಸ್ಕ್‌ನಲ್ಲಿ ಭಾಗಿಯಾಗಿ ಸ್ಪರ್ಧಿಗಳು ದೊಡ್ಮನೆ ಆಟವನ್ನು ಮುಂದುವರೆಸಿದ್ದಾರೆ.
ಈ ವಾರ ಬಿಗ್‌ಬಾಸ್ ಮನೆ ಸುದ್ದಿ ವಾಹಿನಿಗಳಾಗಿ ಬದಲಾಗಿದೆ. ಎರಡು ತಂಡಗಳಾಗಿ ಸ್ಪರ್ಧಿಗಳನ್ನು ವಿಂಗಡಿಸಲಾಗಿದೆ. ಒಂದೊಂದು ಸುದ್ದಿ ವಾಹಿನಿಗೆ ಹೆಸರನ್ನು ನೀಡಲಾಗಿದೆ. ಸುರೇಶ್, ತ್ರಿವಿಕ್ರಮ್ , ಭವ್ಯ, ಐಶ್ವರ್ಯ, ಗೌತಮಿ ಹಾಗೂ ಮಂಜಣ್ಣ ಒಂದು ತಂಡದಲ್ಲಿದ್ದರೆ, ಇನ್ನೊಂದು ತಂಡದಲ್ಲಿ ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ ಹಾಗೂ ಚೈತ್ರಾ ಅವರಿದ್ದಾರೆ.
ನಿನ್ನೆ ಸುದ್ದಿ ಓದುವುದು ಹಾಗೂ ಅಡುಗೆ ಮಾಡುವ ವಿಭಿನ್ನ ಟಾಸ್ಕ್ ನೀಡಲಾಗಿತ್ತು. ಯಾವ ತಂಡ ಚೆನ್ನಾಗಿ ಆಡಿದೆ ಎನ್ನುವ ನಿರ್ಧಾರವನ್ನು ಜನರು ವೋಟ್ ಮಾಡುವ ಮೂಲಕ ನಿರ್ಧರಿಸಲಿದ್ದಾರೆ.
ಇಂದು ಎಸ್ / ನೋ ಟಾಸ್ಕ್ ನೀಡಲಾಗಿದೆ. ಇದರಲ್ಲಿ ಎದುರಾಳಿ ತಂಡದವರು ಹಾಕಿದ ಸವಾಲನ್ನು ಸ್ಪರ್ಧಿಗಳು ಸ್ವೀಕರಿಸಬೇಕು.
ಶಿಶಿರ್ ಅವರು ಐಶ್ವರ್ಯಾ ಅವರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಹೇಳಿದ್ದಾರೆ. ಐಶ್ವರ್ಯಾ ಅವರು ಸವಾಲು ಸ್ವೀಕರಿಸಿ ಕಷ್ಟಪಟ್ಟು ಹಾಗಲಕಾಯಿ ತಿಂದಿದ್ದಾರೆ. ಇನ್ನು ಗೌತಮಿ ಅವರಿಗೆ ಮೆಣಸಿನ ಕಾಯಿ ತಿನ್ನುವ ಸವಾಲು ನೀಡಲಾಗಿದೆ. ಗೌತಮಿ ಇದಕ್ಕೆ ಒಪ್ಪಿ ಮೆಣಸಿನ ಕಾಯಿ ತಿಂದಿದ್ದಾರೆ. ಆದರೆ ಆ ಬಳಿಕ ಖಾರ ನೆತ್ತಿಗೇರಿ ಕೆಮ್ಮುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ತ್ರಿವಿಕ್ರಮ್ ಶಿಶಿರ್ ಅವರು ರಜತ್ ಅವರನ್ನು ಬೆನ್ನು ಮೇಲೆ ನಿಲ್ಲಿಸಿ ಪ್ಲ್ಯಾಂಕ್ ಮಾಡಬೇಕೆಂದು ಸವಾಲು ಹಾಕಿದ್ದಾರೆ. ಇದಕ್ಕೆ ಚೈತ್ರಾ ಅವರಿಗೆ ಡಿಸ್ ಲೊಕೆಟ್ ಆಗಿದೆ ಎಂದು ಸುರೇಶ್ ಅವರ ಹೇಳಲು ಹೋಗಿದ್ದಾರೆ. ಈ ಮಧ್ಯ ತ್ರಿವಿಕ್ರಮ್ ಅವರು ನಾವು ಮಾಡಿ ತೋರಿಸುತ್ತೇವೆ ಎಂದಾಗ ಚೈತ್ರಾ ಮುಚ್ಚಿಕೊಂಡು ಕೂರಬೇಕು ಎಂದಿದ್ದಾರೆ.
ಹ್ಞೂಂ ಅಂತೀಯಾ? ಊಹ್ಞೂಂ ಅಂತೀಯಾ?
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 #BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/FrcQkeZz4x
— Colors Kannada (@ColorsKannada) December 3, 2024
ಚೈತ್ರಾ ಅವರ ಮಾತನ್ನು ಕೇಳಿ ತ್ರಿವಿಕ್ರಮ್ ಗರಂ ಆಗಿದ್ದಾರೆ. ಯಾರಿಗೆ ಹೇಳ್ತಾ ಇರೋದು ಹೋಗೋ ಬಾ ಅಂಥ ಕರೆಯಬೇಡ. ನೀನು ಕಲಿತ ಕಲ್ಚರ್ ಅದು ನನಗೆ ಆ ಕಲ್ಚರ್ ಇಲ್ಲ ಎಂದಿದ್ದಾರೆ. ನಾನು ಕರೆಯುತ್ತೇನೆ ಎಂದು ಮಾತಿಗೆ ಮಾತು ಬೆಳೆಸಿದ್ದಾರೆ.
ಮಂಜು ರಜತ್ ಅವರು ತಲೆ ಬೋಳಿಸಬೇಕೆನ್ನುವ ಸವಾಲು ಕೊಟ್ಟಿದ್ದಾರೆ. ಈ ಸವಾಲನ್ನು ರಜತ್ ಸ್ವೀಕರಿಸಿ ತಲೆ ಬೋಳಿಸಲು ಮುಂದಾಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಈ ಸಂಚಿಕೆ ಮಂಗಳವಾರ (ಡಿ.3ರಂದು) ರಾತ್ರಿ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಂಜು ಜತೆಗಿನ ಸ್ನೇಹಕ್ಕೆ ಅಂಕಲ್- ಆಂಟಿ ಲವ್ ಸ್ಟೋರಿ ಟ್ರೋಲ್: ಗೌತಮಿ ಹೇಳಿದ್ದೇನು?
TV Actor: ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ಕಿರುತೆರೆ ನಟ
ಟ್ರೋಲ್ ಪೇಜ್ಗಳ ವಿರುದ್ಧ ದೂರು ನೀಡಿದ ಬಿಗ್ ಬಾಸ್ ಸ್ಪರ್ಧಿ ರಜತ್ ಪತ್ನಿ: ಆಗಿದ್ದೇನು?
BB18: ಜನಪ್ರಿಯ ಶೋ ಗೆದ್ದು ದೊಡ್ಮನೆಗೆ ಬಂದಿದ್ದ ಕರಣ್‌ವೀರ್‌ಗೆ ಬಿಗ್‌ಬಾಸ್ ಟ್ರೋಫಿ
Kiccha Sudeep: ಬಿಗ್‌ಬಾಸ್ ನಿರೂಪಕನಾಗಿ ನನ್ನ ಕೊನೆಯ ಫಿನಾಲೆ.. ಕಿಚ್ಚ ಭಾವನಾತ್ಮಕ ಪೋಸ್ಟ್