Bigg Boss Kannada: ಕಿಚ್ಚನ ಬಳಿಕ ಈ ಸ್ಟಾರ್‌ಗಳು ಆಗ್ತಾರಾ ಕಿರುತೆರೆಯ ʼಬಿಗ್ ಬಾಸ್ʼ..?
Team Udayavani, Oct 14, 2024, 12:37 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ 11ನೇ ಸೀಸನ್ ಸಾಗುತ್ತಿದೆ. ಕಳೆದ 10 ಸೀಸನ್ ಗಳಲ್ಲಿ ಬಿಗ್ ಬಾಸ್ ನಿರೂಪಕ ಯಾರಾಗ್ತಾರೆ ಎನ್ನುವ ಪ್ರಶ್ನೆಯೇ ಮೂಡಿರಲಿಲ್ಲ. ಆದರೆ 11ನೇ ಸೀಸನ್‌ನಲ್ಲಿ ಮುಂದೆ ಬಿಗ್ ಬಾಸ್ ಯಾರು ನಡೆಸಿಕೊಡುತ್ತಾರೆ ಎನ್ನುವ ಪ್ರಶ್ನೆ ಈಗಿನಿಂದಲೇ ಕಾಡಲು ಶುರುವಾಗಿದೆ.
ಕರ್ನಾಟಕದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ದೊಡ್ಡಮಟ್ಟದಲ್ಲಿ ಯಶಸ್ವಿಯಾಗಲು ಪ್ರಮುಖ ಕಾರಣವೆಂದರೆ ಅದು ಕಿಚ್ಚ ಸುದೀಪ್ (Kiccha Sudeep) ಎಂದು ಕಣ್ಮುಚ್ಚಿ ಹೇಳಬಹುದು. ಅಷ್ಟರಮಟ್ಟಿಗೆ ಬಾದ್ ಷಾ ಕಿರುತೆರೆ ವೀಕ್ಷಕರ ಮನೆ- ಮನವನ್ನು ಗೆದ್ದುಕೊಂಡು ಬಿಟ್ಟಿದ್ದಾರೆ.
ಆದರೆ ಕಿಚ್ಚ ಸುದೀಪ್ ಅವರು ನಿರೂಪಕನಾಗಿ ಬಿಗ್ ಬಾಸ್ -12 ನನ್ನ ಕೊನೆಯ ಸೀಸನ್ ವೆಂದು ಹೇಳಿರುವುದು ಸಾವಿರಾರು ವೀಕ್ಷಕರ ಹೃದಯ ಚೂರಾಗುವಂತೆ ಮಾಡಿದೆ.
ಕಿಚ್ಚ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ʼಬಿಗ್ ಬಾಸ್ ಕನ್ನಡʼದ ರೂವಾರಿ ಮುಂದೆ ಯಾರು ಆಗುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಈ ಕೆಳಗಿನ ಹೆಸರುಗಳು ನಿರೂಪಕರ ರೇಸ್ ನಲ್ಲಿ ಮುಂಚೂಣಿಯಾಗಿ ಕೇಳಿ ಬರುತ್ತಿದೆ.
ಗೋಲ್ಡನ್ ಸ್ಟಾರ್ ಗಣೇಶ್: ‘ಸೂಪರ್ ಮಿನಿಟ್’ ಸೇರಿದಂತೆ ಎರಡು ಮೂರು ಶೋಗಳನ್ನು ಹೋಸ್ಟ್ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) , ಸಿನಿಮಾ ಮಾತ್ರವಲ್ಲದೆ ಕಿರುತೆರೆ ವೀಕ್ಷಕರನ್ನು ರಂಜಿಸಿ ಮನಗೆದ್ದಿದ್ದಾರೆ.
ತನ್ನ ಹಾಸ್ಯ ಶೈಲಿನಿಂದ ಕಿರುತೆರೆಯಲ್ಲಿ ನಿರೂಪಕನಾಗಿ ಶೈನ್ ಆಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಬಿಗ್ ಬಾಸ್ ಮನೆಯ ವ್ಯಕ್ತಿತ್ವಗಳ ಆಟಕ್ಕೆ ನಿರೂಪಕನಾಗಿ ಬರುವ ಸಾಧ್ಯತೆಯಿದೆ.
ಶಿವರಾಜ್ ಕುಮಾರ್: ಸಿನಿಮಾರಂಗದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಎಷ್ಟೇ ಬ್ಯುಸಿಯಾಗಿದ್ದರೂ ಕಿರುತೆರೆಯಲ್ಲಿ ವಾರದ ಕೊನೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಖ್ಯ ತೀರ್ಪುಗಾರರಾಗಿ ಕಳೆದ ಕೆಲ ವರ್ಷದಿಂದ ʼಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಎನ್ನುವ ರಿಯಾಲಿಟಿ ಶೋನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ʼಬಿಗ್ ಬಾಸ್ʼ ನ ಕಿಚ್ಷ ಸುದೀಪ್ ಅವರ ಸ್ಥಾನಕ್ಕೆ ಶಿವಣ್ಣ ಬಂದರೆ ಆ ಸ್ಥಾನಕ್ಕೊಂದು ತೂಕ, ಘನತೆ ಬರುತ್ತದೆ ಎನ್ನವುದು ವೀಕ್ಷಕರ ಅಭಿಪ್ರಾಯವಾಗಿದೆ.
ರಮೇಶ್ ಅರವಿಂದ್: ಚಂದನವನದಲ್ಲಿ ಹತ್ತಾರು ವರ್ಷಗಳಿಂದ ತನ್ನ ನಟನೆಯಿಂದ ಗುರುತಿಸಿಕೊಂಡಿರುವ ಚಿರಯುವಕ ರಮೇಶ್ ಅರವಿಂದ್ (Ramesh Aravind), ಇತ್ತೀಚೆಗಿನ ವರ್ಷದಲ್ಲಿ ಕಿರುತೆರೆ ಲೋಕದಲ್ಲಿ ನಿರೂಪಕರಾಗಿ ಜನಮನದ ಪ್ರೀತಿ- ಪ್ರೋತ್ಸಾಹವನ್ನು ಗಳಿಸಿದವರಲ್ಲಿ ಒಬ್ಬರು. ʼಕೋಟ್ಯಧಿಪತಿʼ ಸೇರಿದಂತೆ ವೀಕೆಂಡ್ ವಿತ್ ರಮೇಶ್ʼ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಮಿಂಚಿರುವ ಅವರು ʼಬಿಗ್ ಬಾಸ್ʼ ನಿರೂಪಣೆಗೆ ಸೂಕ್ತವೆನ್ನುವುದು ಅನೇಕರ ಅಭಿಪ್ರಾಯವಾಗಿದೆ.
ರಮೇಶ್ ಅರವಿಂದ್ ನಿರೂಪಣೆಯ ಜತೆಗೆ ತನ್ನ ಸ್ಪೂರ್ತಿದಾಯಕ ಮಾತಿನಿಂದಲೂ ಅನೇಕರನ್ನು ಸೆಳೆದ ನಿರೂಪಕರಲ್ಲಿ ಒಬ್ಬರಾದ ಕಾರಣ ಅವರು ದೊಡ್ಮನೆ ಸ್ಪರ್ಧಿಗಳ ವ್ಯಕ್ತಿತ್ವವನ್ನು ತಿದ್ದಲು ಸೂಕ್ತರಾಗುತ್ತಾರೆ ಎನ್ನುವುದು ವೀಕ್ಷಕರ ಮನದಾಳದ ಮಾತಾಗಿದೆ.
ಬಿಗ್ ಬಾಸ್ ಸೀಸನ್ -11 ಆರಂಭದಲ್ಲಿ ನಿರೂಪಕರ ರೇಸ್ ನಲ್ಲಿ ರಮೇಶ್ ಅರವಿಂದ್ ಅವರ ಹೆಸರು ಕೂಡ ಕೇಳಿಬಂದಿತ್ತು.
ವಿಜಯ್ ರಾಘವೇಂದ್ರ: ʼಚಿನ್ನಾರಿ ಮುತ್ತಾʼ ವಿಜಯ್ ರಾಘವೇಂದ್ರ (Vijay Raghavendra) ಬಿಗ್ ಬಾಸ್ ಸೀಸನ್ -1 ನಲ್ಲಿ ವಿಜೇಯರಾಗಿದ್ದರು. ದೊಡ್ಮನೆ ಆಟ ಹೇಗಿರುತ್ತದೆ ಎನ್ನುವುದರ ಅನುಭವ ಅವರಿಗಿದೆ. ಕಿರುತೆರೆಯಲ್ಲಿ ಡ್ಯಾನ್ಸ್ ಕಾರ್ಯಕ್ರಮವೊಂದರ ಜಡ್ಜ್ ಆಗಿರುವ ಅವರು ʼಬಿಗ್ ಬಾಸ್ʼ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದರೆ ಹೇಗೆ ಎನ್ನುವ ಮಾತುಗಳು ಕೇಳಿ ಬರುತಿದೆ.
ರಿಷಬ್ ಶೆಟ್ಟಿ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಸದ್ಯ ʼಕಾಂತಾರ ಪಾರ್ಟ್-1ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆಯಲ್ಲಿ ರಿಷಬ್ ಕಾಣಿಸಿಕೊಂಡದ್ದು ಕಡಿಮೆ. ಆದರೆ ಬಿಗ್ ಬಾಸ್ ನಲ್ಲಿ ಅವರು ಹೋಸ್ಟ್ ಆಗಿ ಬರುತ್ತಾರೆ ಎನ್ನುವ ಮಾತು ಬಿಗ್ ಬಾಸ್ ಸೀಸನ್ -11 ಆರಂಭದವರೆಗೂ ಕೇಳಿಬಂದಿತ್ತು. ತಮ್ಮ ಸಿನಿಮಾದಲ್ಲಿ ಬ್ಯುಸಿಯಾಗಿರುವ ರಿಷಬ್ ಬಿಗ್ ಬಾಸ್ ನಡೆಸಿಕೊಡುವುದು ಅನುಮಾನವಾದರೂ, ಅವರ ಹೆಸರು ನಿರೂಪಕರ ರೇಸ್‌ನಲ್ಲಿದೆ.
ಡಾಲಿ ಧನಂಜಯ್: ನಟ ರಾಕ್ಷಸ ಡಾಲಿ ಧನಂಜಯ್ (Dolly Dhananjay) ನಟನೆಯಿಂದ ಎಷ್ಟು ಜನಪ್ರಿಯರೋ, ತನ್ನ ಸರಳ ವ್ಯಕ್ತಿತ್ವದಿಂದಲೂ ಅವರು ಅಪಾರ ಅಭಿಮಾನಿಗಳಿಗೆ ಆತ್ಮೀಯರಾಗಿದ್ದಾರೆ. ಮಿತಿಯಾದ ಮಾತು, ಸಜ್ಜನಿಕೆಯ ನಡವಳಿಕೆಯಿಂದ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ಬಿಗ್ ಬಾಸ್ ಸೀಸನ್ -12ರ ನಿರೂಪಕರಾಗಿ ಕಾಣಿಸಿಕೊಳ್ಳಬೇಕೆಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
ಬಿಗ್ ಬಾಸ್ ಸೀಸನ್ -11ರ ಮುಕ್ತಾಯ ಬಳಿಕ ಮುಂದಿನ ಸೀಸನ್‌ಗೆ ಯಾರು ಹೋಸ್ಟ್ ಆಗಲಿದ್ದಾರೆ. ಕಿಚ್ಚ ʼಬಿಗ್ ಬಾಸ್ʼ ಖದರ್‌ಗೆ ಯಾರು ಸರಿಸಾಟಿ ಆಗುತ್ತಾರೆ ಎನ್ನುವುದನ್ನು ಮುಂದಿನ ದಿನದಲ್ಲೇ ಕಾದುನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.