

Team Udayavani, Jan 30, 2025, 1:06 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Bigg Boss Kannada-11) ಮುಕ್ತಾಯ ಕಂಡ ಬಳಿಕ ಸ್ಪರ್ಧಿಗಳು ಸಂದರ್ಶನ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ.
ವಿನ್ನರ್ ಹನುಮಂತು, ರನ್ನರ್ ಅಪ್ ತ್ರಿವಿಕ್ರಮ್, ರಜರ್ ಸೇರಿದಂತೆ ಬಹುತೇಕ ಎಲ್ಲ ಬಿಗ್ ಬಾಸ್ ಸ್ಪರ್ಧಿಗಳು ಸಂದರ್ಶನ ನೀಡುವುದರಲ್ಲಿ ನಿರತರಾಗಿದ್ದಾರೆ. ಫಿನಾಲಿಸ್ಟ್ ಆಗಿದ್ದ ಮೋಕ್ಷಿತಾ ಪೈ (Mokshita Pai) ಸಂದರ್ಶನವೊಂದರಲ್ಲಿ ತನ್ನ ಮೇಲೆ ಕೇಳಿ ಬಂದಿದ್ದ ಕಿಡ್ನಾಪ್ ಆರೋಪದ ಬಗ್ಗೆ ಮಾತನಾಡಿದ್ದಾರೆ.
ʼಪಾರುʼ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿದ್ದ ಸಂದರ್ಭದಲ್ಲಿ ಅವರ ಮೇಲೆ ʼಮಕ್ಕಳ ಕಳ್ಳಿʼ ಎನ್ನುವ ಆರೋಪ ಹೊರಗಡೆ ಹರಿದಾಡಿತ್ತು.
2014ರಲ್ಲಿ ಬಾಲಕಿಯೊಬ್ಬಳನ್ನು ಗೆಳೆಯನ ಜೊತೆಗೂಡಿ ಅಪಹರಣ ಮಾಡಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅವರು ಜೈಲಿಗೂ ಹೋಗಿ ಬಂದಿದ್ದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು.
ಇದೀಗ ಮೋಕ್ಷಿತಾ ಅವರು ಈ ಬಗ್ಗೆ ಮಾತನಾಡಿದ್ದಾರೆ. “ನಿರಾಪರಾಧಿ ಅಂತ ಸಾಬೀತಾಗಿದೆ. ಇದಾದ ಮೇಲೂ ಮತ್ತೆ ಅದೇ ವಿಚಾರವನ್ನು ಇಟ್ಟುಕೊಂಡು ಟ್ರೋಲ್ ಮಾಡುತ್ತಾರೆ ಅಂಥದ್ರೆ ಮತ್ತೇನೂ ಹೇಳೋಕೆ ಆಗಲ್ಲ. ಇದು ಮುಗಿದು ಹೋಗಿರುವ ವಿಚಾರ. ಅದನ್ನು ನಾನಿಲ್ಲಿ ಮತ್ತೆ ಕೆದಕಿ ಮಾತನಾಡೋಕೆ ಹೋಗಲ್ಲ. ನಿರಾಪರಾಧಿ ಅಂತ ಸಾಬೀತಾಗಿದೆ. ಈ ಬಗ್ಗೆ ನಾನು ಮಾತನಾಡಲ್ಲ. ಮತ್ತೆ ಏನಾದ್ರು ಹೇಳಿ ಕಾನೂನು ಮೂಲಕ ತೊಂದರೆ ಕೊಡೋಕೆ ನಾನು ಹೋಗಲ್ಲ” ಎಂದಿದ್ದಾರೆ.
ಟ್ರೋಲ್ ಮಾಡಿದವರ ಮೇಲೆ ನಾನು ಕಾನೂನು ಕ್ರಮಕೈಗೊಳ್ಳಲ್ಲ. ಆ ನೋವು ಏನು ಅಂಥ ನನಗೆ ಗೊತ್ತಿದೆ. ಅದನ್ನು ನಾನು ಅನುಭವಿಸಿದ್ದೀನಿ. ವೀವ್ಸ್‌ಗೋಸ್ಕರ ಇದನ್ನು ಮಾಡಿದ್ದಾರೆ. ಪಾಪ ಮಾಡ್ಕೊಂಡು ಇರಲಿ. ನಾನೇನು ಕ್ರಮ ತೆಗೆದುಕೊಳ್ಳಲ್ಲವೆಂದಿದ್ದಾರೆ.
ಇನ್ನು ಮೋಕ್ಷಿತಾ ಅವರು ಬಿಗ್ ಬಾಸ್‌ನಿಂದ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಅಂಗವಿಕಲರ ಆಶ್ರಮಕ್ಕೆ ದಾನವಾಗಿ ನೀಡಿದ್ದಾರೆ. ಆಶ್ರಮಕ್ಕೆ ತೆರಳಿ ತನ್ನ ತಮ್ಮನ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿ ದಾನ ಮಾಡಿದ್ದಾರೆ.
Television actor: ಕಿರುತೆರೆ ನಟ ಬಾಳಪ್ಪ ವಿರುದ್ಧ ಮತ್ತೊಂದು ಕೇಸ್
Bro Gowda: ನಿಶ್ಚಿತಾರ್ಥ ಮಾಡಿಕೊಂಡ ʼಲಕ್ಷ್ಮೀ ಬಾರಮ್ಮʼ ಖ್ಯಾತಿಯ ಬ್ರೋ ಗೌಡ: ಹುಡುಗಿ ಯಾರು?
Controversy: ಅಶ್ಲೀಲ ಹೇಳಿಕೆ: 2ನೇ ಬಾರಿಗೆ ರಣವೀರ್ ಅಲಹಾಬಾದಿಯಾಗೆ ಪೊಲೀಸರ ಸಮನ್ಸ್
Zee Entertainers Comedy Awards 2025: ಜೀ ಕನ್ನಡದಲ್ಲಿ ‘ಕಾಮಿಡಿ’ ಸಮಾಗಮ!
TRP: ಟಿಆರ್ಪಿಯಲ್ಲಿ ದಾಖಲೆ ಬರೆದ ʼಬಿಗ್ ಬಾಸ್ʼ ಫಿನಾಲೆ ಸಂಚಿಕೆ; ಪಡೆದ ಟಿವಿಆರ್ ಎಷ್ಟು?
Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು
Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು
Bollywood Movie: ಕರಣ್ ಜೋಹರ್ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ
Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ
ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ
You seem to have an Ad Blocker on.
To continue reading, please turn it off or whitelist Udayavani.