BBK11: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಹೊಡೆದಾಟ; ಅರ್ಧದಲ್ಲೇ ನಿಂತೋಯಿತು ಟಾಸ್ಕ್
Team Udayavani, Oct 24, 2024, 11:04 PM IST
ಬೆಂಗಳೂರು: ಬಿಗ್ ಬಾಸ್ (Bigg Boss Kannada Season 11)ಮನೆ ರಾಜಕೀಯ ರಣರಂಗವಾದ ಹಿನ್ನೆಲೆಯಲ್ಲಿ ವಾದ – ವಾಗ್ವಾದಗಳು ಜೋರಾಗಿಯೇ ನಡೆದಿದೆ.
ಚೈತ್ರಾ ಅವರನ್ನು ತಿವಿಕ್ರಮ್ ಅವರು ಕ್ಯಾಪ್ಟನ್ ರೂಮ್ ಗೆ ಕರೆದುಕೊಂಡು ಹೋಗಿದ್ದು, ಇದಕ್ಕೆ ಐಶ್ವರ್ಯಾ ಅವರು ನೀವು ಅವರನ್ನು ಕ್ಯಾಪ್ಟನ್ ರೂಮ್ ಗೆ ಕರೆದುಕೊಂಡು ಹೋಗುವಂತಿಲ್ಲ ಎಂದಿದ್ದಾರೆ ಮೈ ಕೈ ಮುಟ್ಟಿ ಮಾತಾಡ್ಬೇಡಿ ನನಗೆ ಕೈ ಕಾಲು ನೆಟ್ಟಗೆ ಇದೆ ಎಂದು ಐಶ್ವರ್ಯಾ ವಿರುದ್ಧ ಚೈತ್ರಾ ಗರಂ ಆಗಿದ್ದಾರೆ.
ಕಿರುಚಾಡಿ ಮಾತನಾಡಿದ ಐಶ್ವರ್ಯಾ ಅವರು ಗಂಟಲಿಗೆ ಆ್ಯಸಿಡಿ ಹಾಕಿಕೊಳ್ಳಲಿ, ಸ್ವಲ್ಪ ವಿಕ್ಸ್ ಹಚ್ಚಿಕೊಳ್ಳಲಿ ಭವ್ಯಾ ಅವರು ಸಹ ಸ್ಪರ್ದಿಯೊಂದಿಗೆ ಹೇಳಿ ವ್ಯಂಗ್ಯವಾಡಿದ್ದಾರೆ.
ಪೋಸ್ಟರ್ ರಣರಂಗ ಟಾಸ್ಕ್ ನಲ್ಲಿ ತಳ್ಳಾಟ- ಕೂಗಾಟ:
ಪೋಸ್ಟರ್ ಸಾಮಗ್ರಿಯನ್ನು ಸಂಗ್ರಹಿಸಿ ಪೋಸ್ಟರ್ ಅಂಟಸುವ ಟಾಸ್ಕ್ ನಲ್ಲಿ ಹನುಮಂತು ಅವರು ಸುಸ್ತಾಗಿ ಅಸ್ವಸ್ಥರಾಗಿದ್ದಾರೆ. ಇನ್ನೊಂದು ಕಡೆ ಹಂಸಾ ಅವರು ತಿವಿಕ್ರಮ್ ನನ್ನನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.
ತಳ್ಳಾಟದ ನಡುವೆ ಮಂಜು ಹಾಗೂ ತಿವಿಕ್ರಮ್ ದೈಹಿಕವಾಗಿ ಕಿತ್ತಾಡಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ದೂಡಿಕೊಂಡು ಕೂಗಾಡಿಕೊಂಡಿದ್ದಾರೆ. ಈ ವೇಳೆ ಸುರೇಶ್ ಅವರಿಗೂ ಏಟಾಗಿದೆ.
ಮತ್ತೊಂದು ಸುತ್ತಿನ ಟಾಸ್ಕ್ ನಲ್ಲೂ ಕಿತ್ತಾಟ ನಡೆದಿದೆ. ತಿವಿಕ್ರಮ್ ಮಂಜು ಅವರನ್ನು ಎತ್ತಾಕಿ ಎರಡು ಮೂರು ಕೆಳಗೆ ಹಾಕಿದ್ದಾರೆ. ಈ ವೇಳೆ ಇಬ್ಬರು ನೆಲದಲ್ಲಿ ಉರುಳಾಡಿ ಹೊಡೆದಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಹಂಸಾ ಹಾಗೂ ಸುರೇಶ್ ಅವರಿಬ್ಬರೂ ಸಹ ಕಿತ್ತಾಡಿಕೊಂಡಿದ್ದಾರೆ.
ಇದು ಡಿಫೆಂಡ್ ಮಾಡೋದಲ್ಲ. ಎಂತಹ ನಾಟಕ ಮಾಡುತ್ತಾನೆ ಅವನು. ಥೂ ನಿಮ್ ಯೋಗ್ಯತೆಗೆ. ಇದು ಡಬ್ಲ್ಯೂ ಡಬ್ಲ್ಯೂ ಎಫ್ ಅಲ್ಲ. ಸ್ಪೋರ್ಟ್ಸ್ ಮೆನ್ ಶಿಪ್ ಇರಬೇಕು. ಕಾಮನ್ ಸೆನ್ಸ್ ಇಲ್ಲ ಅವನಿಗೆ. ಆ ಕೋಪದಲ್ಲಿ ನಾನು ದುಡಿಕಿದಿದ್ರೆ ಏನು ಆಗ್ತಾ ಇತ್ತು. ನಾವೆಲ್ಲ ಕಲಾವಿದರು ಏನು ಆದ್ರೂ ಆಗಿದ್ರೆ ಏನು ಆಗ್ತಾ ಇತ್ತು. ಏನೇ ಆದ್ರು ಕೋಪ ಕಂಟ್ರೋಲ್ ಮಾಡ್ಕೋಬೇಕು ಎಂದು ಮಂಜು ಟಾಸ್ಕ್ ವೇಳೆಗಿನ ಘಟನೆ ನೆನೆದು ಭಾವುಕರಾಗಿದ್ದಾರೆ.
ಟಾಸ್ಕ್ ನಲ್ಲಾದ ಗಲಾಟೆಯಿಂದ ಬಿಗ್ ಬಾಸ್ ಅರ್ಧದಲ್ಲೇ ನಿಲ್ಲಿಸಿದ್ದಾರೆ.ವೈಯಕ್ತಿಕವಾಗಿ ಯಾವುದೇ ದ್ವೇಷ ಇಲ್ಲ. ಟಾಸ್ಕ್ ನಲ್ಲಿ ಆದ ಘಟನೆಗೆ ನಾನೇ ಕಾರಣ ದಯವಿಟ್ಟು ಇದನ್ನು ಕ್ಷಮಿಸಿ ಎಂದು ಮಂಜು ಹಾಗೂ ತಿವಿಕ್ರಮ್ ಕ್ಯಾಮರಾದ ಮುಂದೆ ಕೈಮುಗಿದು ಕ್ಷಮೆ ಕೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮತ್ತೆ ಸದ್ದು ಮಾಡಿದ ಬಳೆ..
ಆಡುವಾಗ ಬಳೆ ತೆಗೆಯಬೇಕು ಕಾಮನ್ ಸೆನ್ಸ್ ಇಲ್ಲ ಇವರಿಗೆ. ಬಳೆಯಿಂದ ಗಾಯವಾಗಿದೆ. ಸ್ಪೋರ್ಟ್ಸ್ ಪರ್ಸನ್ ಅವರಿಗೆ ಇಷ್ಟು ಗೊತ್ತಿಲ್ಲ ಎಂದು ಮಂಜು ಅವರು ತಿವಿಕ್ರಮ್ ಅವರು ಹಾಕಿದ ಬಳೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಿವಿಕ್ರಮ್ ಅವರು ಇದನ್ನು ಸೋಪ್ ಹಾಕಿ ತೆಗೆಯಬೇಕು ಅದಕ್ಕೆ ಟೈಮ್ ಎಂದಿದ್ದಾರೆ.
ತಿವಿಕ್ರಮ್ ಅವರು ಹಾಕಿದ ಬಳೆಯಿಂದಾಗಿ ಮಂಜು ಅವರ ತುಟಿಗೆ ಗಾಯವಾಗಿದ್ದು, ರಕ್ತ ಸುರಿದಿದೆ. ಕೊನೆಗೂ ತಿವಿಕ್ರಮ್ ಅವರು ಬಳೆಯನ್ನು ತೆಗೆದಿದ್ದಾರೆ.
ಯಾರು ಪೋಸ್ಟರ್ ಹಾಕಿಲ್ಲ ಎನ್ನುವ ವಿಚಾರಕ್ಕೆ ಐಶ್ವರ್ಯಾ ಹಾಗೂ ತಿವಿಕ್ರಮ್ ನಡುವೆ ಮಾತಿನ ಚಕಮಕಿ ನಡೆದಿದೆ. ಐಶ್ವರ್ಯಾ ಅವರ ಮಾತಿಗೆ ನಮಗೆ ಮುಖಕ್ಕೆ ಮೇಕಪ್ ಹಾಕಿಕೊಂಡು ಗೊತ್ತಿದೆ, ನಾಲಗೆಗೆ ಮೇಕಪ್ ಹಾಕಿಕೊಂಡು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಆಡುವಾಗ ಬಳೆ ತೆಗೆಯಬೇಕು ಕಾಮನ್ ಸೆನ್ಸ್ ಇಲ್ಲ ಇವರಿಗೆ. ಬಳೆಯಿಂದ ಗಾಯವಾಗಿದೆ. ಸ್ಪೋರ್ಟ್ಸ್ ಪರ್ಸನ್ ಅವರಿಗೆ ಇಷ್ಟು ಗೊತ್ತಿಲ್ಲ ಎಂದು ಮಂಜು ಅವರು ತಿವಿಕ್ರಮ್ ಅವರು ಹಾಕಿದ ಬಳೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಿವಿಕ್ರಮ್ ಅವರು ಇದನ್ನು ಸೋಪ್ ಹಾಕಿ ತೆಗೆಯಬೇಕು ಅದಕ್ಕೆ ಟೈಮ್ ಎಂದಿದ್ದಾರೆ.
ತಿವಿಕ್ರಮ್ ಅವರು ಹಾಕಿದ ಬಳೆಯಿಂದಾಗಿ ಮಂಜು ಅವರ ತುಟಿಗೆ ಗಾಯವಾಗಿದ್ದು, ರಕ್ತ ಸುರಿದಿದೆ. ಕೊನೆಗೂ ತಿವಿಕ್ರಮ್ ಅವರು ಬಳೆಯನ್ನು ತೆಗೆದಿದ್ದಾರೆ.
ಯಾರು ಪೋಸ್ಟರ್ ಹಾಕಿಲ್ಲ ಎನ್ನುವ ವಿಚಾರಕ್ಕೆ ಐಶ್ವರ್ಯಾ ಹಾಗೂ ತಿವಿಕ್ರಮ್ ನಡುವೆ ಮಾತಿನ ಚಕಮಕಿ ನಡೆದಿದೆ. ಐಶ್ವರ್ಯಾ ಅವರ ಮಾತಿಗೆ ನಮಗೆ ಮುಖಕ್ಕೆ ಮೇಕಪ್ ಹಾಕಿಕೊಂಡು ಗೊತ್ತಿದೆ, ನಾಲಗೆಗೆ ಮೇಕಪ್ ಹಾಕಿಕೊಂಡು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಎರಡು ದಿನ ಸ್ನಾನ ಮಾಡದ ಹನುಮಂತು..
ಬಿಗ್ ಬಾಸ್ ಮನೆಗೆ ಬಂದು ಎರಡು ದಿನ ಆದರೂ ಹನುಮಂತು ನೀನು ಸ್ನಾನ ಮಾಡಿಲ್ಲ. ಗಬ್ಬುನಾತ ಹೊಡೀತಾ ಇದ್ದೀಯಾ, ನಮ್ ಉತ್ತರ ಕರ್ನಾಟಕದ ಮಾರ್ಯದೆ ತೆಗಿತೀಯ ನೀನು ಎಂದು ಸುರೇಶ್ ಹನುಮಂತು ಅವರಿಗೆ ಹೇಳಿ, ವ್ಯಂಗ್ಯವಾಡಿದ್ದಾರೆ.
ದೊಡ್ಮನೆಗೆ ಬಂದ್ರು ರಾಧಾಕ್ಕಾ..
ಬಿಗ್ ಬಾಸ್ ಮನೆಗೆ ಖ್ಯಾತ ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಬಂದ ಕೂಡಲೇ ಮನೆಯವರಿಗೆ ಖಡಕ್ ಪ್ರಶ್ನೆಗಳನ್ನು ಕೇಳಿ ಕಂಗಾಲಾಗಿಸಿದ್ದಾರೆ.
ನನಗೆ ಪಕ್ಷ ಎಲ್ಲ ಹೊಸತಲ್ಲ. ಭಾಷಣ ರಾಜಕೀಯ.. ಐಶ್ವರ್ಯಾ ಅವರೇ ಎದೆ ಮುಟ್ಟಿಕೊಂಡು ಹೇಳಿ ನಿಮ್ಮ ಪಕ್ಷದಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದಾರಾ? ಏನು ಕೊಡ್ತೀರಾ ಜನರಿಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ತಿವಿಕ್ರಮ್ ಕಾಫಿ ಕೊಡುತ್ತೇವೆ ಅಂದಿದ್ದಾರೆ. ಐಶ್ವರ್ಯಾ ಅವರು ಮನರಂಜನೆ ಕೊಡುತ್ತೇವೆ ಅಂದಿದ್ದಾರೆ. ಅದಕ್ಕೆ ರಾಧಾ ಅವರು ಅದನ್ನು ನಿವೇನು ಕೊಡೋದು ಬಿಗ್ ಕೊಡುತ್ತಾರೆ. ನನ್ನನ್ನು ನಗಿಸುತ್ತೀರಾ ನಗಿಸಿ ಎಂದಿದ್ದಾರೆ. ರಾಧಾ ಅವರು ಬಿಗ್ ಬಾಸ್ ಅತಿಥಿಯಾಗಿ ಆಗಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್; ದಶಕದ ಬಳಿಕ ಕನ್ನಡಕ್ಕೆ
Sidlingu 2: ಬಿಡುಗಡೆ ದಿನಾಂಕ ಘೋಷಿಸಿದ ಯೋಗಿ- ವಿಜಯ್ ಪ್ರಸಾದ್ ಸಿನಿಮಾ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.