Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Team Udayavani, Oct 6, 2024, 1:03 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ -11(Bigg Boss Kannada-11) ನ ಮೊದಲ ವಾರದ ಪಂಚಾಯ್ತಿಯನ್ನು ಕಿಚ್ಚ ಸುದೀಪ್ ಅವರು ಖಡಕ್ ಆಗಿ ನಡೆಸಿಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ವಾರವಿಡೀ ನಡೆದ ಸಂಗತಿಗಳ ಬಗ್ಗೆ ಕಿಚ್ಚ ಮಾತನಾಡಿದ್ದಾರೆ. ಜಗದೀಶ್ ಅವರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಹಂಸಾ ಅವರನ್ನು ನಿಯಮ ಉಲ್ಲಂಘನೆ ಮಾಡಿರುವುದಕ್ಕೆ ಸಾಫ್ಟ್ ಆಗಿಯೇ ಪಾಠ ಮಾಡಿದ್ದಾರೆ.
ಜಗದೀಶ್ ಅವರಿಗೆ ಕಿಚ್ಚ ಹೇಳಿದ್ದೇನು..?
ವಾರದ ಘಟನೆ ಬಗ್ಗೆ ಮಾತನಾಡಿದ ಕಿಚ್ಚ ಜಗದೀಶ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಗದೀಶ್ ಅವರೇ ನೀವು ಹೇಳಿ ನಮಗೆ ಶೋ ಹೇಗೆ ನಡೆಸಿಕೊಡಬೇಕು ಹಾಗೆ ನಡೆಸೋಣ ಎಂದಿದ್ದಾರೆ. ಇದಕ್ಕೆ ನನ್ನದು ಕರೆಕ್ಟ್ ಆಗಿದೆ ನನ್ನದೇನು ತಪ್ಪಿಲ್ಲ ಎಂದು ಜಗದೀಶ್ ರಿಪ್ಲೈ ಕೊಟ್ಟಿದ್ದಾರೆ. ಇದಕ್ಕೆ ಉತ್ತರಿಸಿದ ಕಿಚ್ಚ, ಖಡ ಖಂಡಿತವಾಗಿ ಕರೆಕ್ಟ್ ಆಗಿದೆ, ಇಲ್ಲದಿದ್ರೆ ನನ್ಮಗದು 11ನೇ ಸೀಸನ್ ದಾಟುತನ್ನೇ ಇರಲಿಲ್ಲ. ಕ್ಯಾಮೆರಾ ಮುಂದೆ ಬಿಗ್ ಬಾಸ್ ಚಾಲೇಂಜ್ ಮಾಡಿದ್ರಲ್ಲ. ದಟ್ ವಾಸ್ ದಿ ಜೋಕ್. ನಿಮ್ಮ ಜೋಕ್‌ಗೆ ನಾನು ಜೋರಾಗಿ ನಕ್ಕಿದ್ದೇನೆ. ಬಿಗ್ ಬಾಸ್ ಒಂದು ಅದ್ಭುತ ಶೋ. ಇಂಪ್ರೂವ್ ಮಾಡುವ ಸಾಧ್ಯತೆ ಈಗ ಇರುವ ನಿಮ್ಮ ಕೈಲಿದೆ ಸರ್. ಹಾಳು ಮಾಡೋಕೆ ನಿಮ್ಮ ಅಪ್ಪನ ಆಣೆಗೂ ಸಾಧ್ಯವಿಲ್ಲ ಎಂದಿದ್ದಾರೆ.
ಇದು ಬಿಗ್ ಬಾಸ್ ಮನೆ ಸರ್ ಪರಪ್ಪನ ಅಗ್ರಹಾರ ಜೈಲಲ್ಲ. ಇಲ್ಲಿ ರೂಲ್ಸ್ ಫಾಲೋ ಮಾಡಬೇಕು. ಇಲ್ಲಿ ಹೆಸರು ಮಾಡಿರುವವರು ಬಂದಿದ್ದಾರೆ ಎಂದು ಕಿಚ್ಚ ಖಡಕ್ ಆಗಿ ಹೇಳಿದ್ದಾರೆ.
ಸೂಪರ್ ಸಂಡೇ ವಿತ್ ಕಿಚ್ಚನ ಜತೆಯಲ್ಲಿ ಇಂದು ಕೂಡ ಅನೇಕ ಸಂಗತಿಗಳ ಬಗ್ಗೆ ಸುದೀಪ್ ಮಾತನಾಡಲಿದ್ದಾರೆ. ಅದಲ್ಲದೇ ಇಂದು ಈ ಸೀಸನ್‌ನ ಮೊದಲ ಎಲಿನೇಷನ್ ಆಗಲಿದೆ.
ಎಲಿಮಿನೇಷನ್‌ನಿಂದ ಪಾರಾದವರು ಯಾರು..:
ಬಿಗ್ ಬಾಸ್ ಮನೆಯಲ್ಲಿ ಈ ವಾರ 9 ಮಂದಿ ನಾಮಿನೇಟ್ ಆಗಿದ್ದರು. ಈ ಪೈಕಿ ಭವ್ಯಾ ಅವರು ಮೊದಲ ಸ್ಪರ್ಧಿಯಾಗಿ ಎಲಿಮಿನೇಷನ್ ತೂಗುಗತ್ತಿನಿಂದ ಪಾರಾಗಿದ್ದಾರೆ. ಗೌತಮಿ,ಮಾನಸ ಅವರು ಇಂದಿನ ಸಂಚಿಕೆಯಲ್ಲಿ ಸೇಫ್ ಆಗಿದ್ದಾರೆ.
ಶಿಶಿರ್ ಶಾಸ್ತ್ರಿ, ಜಗದೀಶ್, ಮೋಕ್ಷಿತಾ, ಚೈತ್ರಾ, ಯಮುನಾ, ಹಂಸಾ ಇವರಲ್ಲಿ ಒಬ್ಬರು ಮನೆಯಿಂದ ಆಚೆಯಿಂದ ಬರಲಿದ್ದಾರೆ.
ಈ ವಾರ ಮನೆಯಿಂದ ಹೊರಗೆ ಹೋಗೋದುನ ಇವರೇನಾ..? : ಎಲಿಮಿನೇಷನ್ ಲಿಸ್ಟ್ 6 ಮಂದಿ ಉಳಿದಿದ್ದಾರೆ. ಇವರಲ್ಲಿ ಒಬ್ಬರು ಆಚೆ ಹೋಗಲಿದ್ದಾರೆ. ಮೂಲಗಳ ಪ್ರಕಾರ ಮೊದಲ ವಾರದಲ್ಲಿ ದೊಡ್ಮನೆಯೊಳಗೆ ಜೋರಾಗಿಯೇ ಸದ್ದು ಮಾಡಿದ್ದ ಯಮುನಾ ಶ್ರಿನಿಧಿ (Yamuna Srinidhi) ಅವರು ಮನೆಯಿಂದ ಆಚೆ ಹೋಗಲಿದ್ದಾರೆ ಎನ್ನಲಾಗಿದೆ.
ಯಮುನಾ ಅವರಿಗೆ ಕಡಿಮೆ ಮತ ಬಿದ್ದಿರುವುದರಿಂದ ಅವರು ಮನೆಯಿಂದ ಆಚೆ ಬರಲಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.