Bigg Boss: ಈ ವರ್ಷ ನಡೆಯಲ್ಲ ಬಿಗ್ ಬಾಸ್ ಓಟಿಟಿ ಸೀಸನ್: ಕಾರಣವೇನು?
Team Udayavani, Apr 13, 2024, 11:50 AM IST
ಮುಂಬಯಿ: ಬಿಗ್ ಬಾಸ್ ಕಾರ್ಯಕ್ರಮಕ್ಕೆ ತನ್ನದೇ ಆದ ವೀಕ್ಷಕರ ವರ್ಗವಿದೆ. ಕನ್ನಡ, ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೆಚ್ಚಿನ ವೀಕ್ಷಕರಿದ್ದಾರೆ. ಇದೀಗ ಹಿಂದಿಯಲ್ಲಿ ಮತ್ತೆ ಬಿಗ್ ಬಾಸ್ ಆರಂಭಗೊಳ್ಳಲಿದೆ ಎನ್ನುವ ಮಾತುಗಳು ಹರಿದಾಡುತ್ತಿದೆ.
ಬಿಗ್ ಬಾಸ್ ಸೀಸನ್ -17 ಇದೇ ವರ್ಷದ ಜನವರಿಯಲ್ಲಿ ಮುಕ್ತಾಯ ಕಂಡಿದೆ. ಸಲ್ಮಾನ್ ಖಾನ್ ನಡೆಸಿಕೊಟ್ಟ ಈ ಶೋನಲ್ಲಿ ಮುನಾವರ್ ಫಾರೂಕಿ ವಿಜೇತರಾಗಿ ಹೊರಹೊಮ್ಮಿದ್ದರು. ಹಿಂದಿ ಬಿಗ್ ಬಾಸ್ ನಲ್ಲಿ ಎರಡು ಓಟಿಟಿ ಸೀಸನ್ ಗಳು ಮುಕ್ತಾಯ ಕಂಡಿದೆ. ಇದೀಗ ಮೂರನೇ ಸೀಸನ್ ಬರಲಿದೆ ಎನ್ನುವ ಮಾತುಗಳು ಕಿರುತೆರೆಯಲ್ಲಿ ಹರಿದಾಡುತ್ತಿದೆ.
ಬಿಗ್ ಬಾಸ್ ಓಟಿಟಿಯಲ್ಲಿ ಭಾಗಿಯಾಗುತ್ತಾರೆ ಎನ್ನುವ ಸ್ಪರ್ಧಿಗಳು ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಮೇ 15 ರಿಂದ ಬಿಗ್ ಬಾಸ್ ಓಟಿಟಿ -3 ಆರಂಭವಾಗಲಿದೆ ಎನ್ನಲಾಗುತ್ತಿದೆ.
ಆದರೆ ಬಿಗ್ ಬಾಸ್ ಓಟಿಟಿ ಸೀಸನ್ -3 ಈ ವರ್ಷ ನಡೆಯುವುದು ಅನುಮಾನ ಎಂದು ಮೂಲವೊಂದು Indianexpress.com ಗೆ ಎಕ್ಸ್ ಕ್ಲೂಸಿವ್ ದೃಢಪಡಿಸಿರುವುದಾಗಿ ವರದಿ ಆಗಿದೆ.
ಕಲರ್ಸ್ ಟಿವಿ ಮತ್ತು ಜಿಯೋ ಸಿನಿಮಾ ಈ ವರ್ಷ ಬಿಗ್ ಬಾಸ್ ಓಟಿಟಿಯನ್ನು ಆರಂಭಿಸದಿರಲು ನಿರ್ಧರಿಸಿದೆ. ಜನವರಿಯಲ್ಲಷ್ಟೇ ಬಿಗ್ ಬಾಸ್ ಸೀಸನ್ 17 ಮುಕ್ತಾಯ ಕಂಡಿದೆ. ಈ ನಡುವೆ ಮತ್ತೆ ಶೋ ಆರಂಭಿಸುವುದರ ಅಂತರವು ತುಂಬಾ ಚಿಕ್ಕದಾಗುತ್ತದೆ. ಅದಕ್ಕಾಗಿ ಈ ವರ್ಷ ಕಾರ್ಯಕ್ರಮ ಆರಂಭಿಸುವ ಯೋಜನೆ ಇಲ್ಲ ಎಂದು ಮೂಲಗಳು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸದ್ಯ ಬಿಗ್ ಬಾಸ್ ಓಟಿಟಿ ಸೀಸನ್ -3 ಈ ವರ್ಷ ಆರಂಭವಾಗುವುದು ಅನುಮಾನ ಎನ್ನಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿಗಳು ಹೊರಬೀಳಬಹುದು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Martin: ಕಿರುತೆರೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.