

Team Udayavani, Jan 30, 2025, 3:15 PM IST
ಮುಂಬಯಿ: ಇತ್ತೀಚೆಗಷ್ಟೇ ಬಿಗ್ ಬಾಸ್ (Bigg Boss) ಮುಕ್ತಾಯ ಕಂಡಿದೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಓಟಿಟಿ ಸೀಸನ್ ಆರಂಭದ ಬಗ್ಗೆ ಚರ್ಚೆ ಶುರುವಾಗಿದೆ.
ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಹಿಂದಿ (Bigg Boss) 18ನೇ ಸೀಸನ್ ಇತ್ತೀಚೆಗೆ ಮುಕ್ತಾಯ ಕಂಡಿದೆ. ಕರಣ್ವೀರ್ ಮೆಹ್ರಾ (Karanveer Mehra) ವಿಜೇತರಾಗಿ ಹೊರಹೊಮ್ಮಿದ್ದಾರೆ. ಟಿವಿ ಸೀಸನ್ ಮುಕ್ತಾಯ ಕಂಡ ಬಳಿಕ ಈಗ ಬಿಗ್ ಬಾಸ್ ಓಟಿಟಿ (Bigg Boss OTT) ಸೀಸನ್ ಬಗ್ಗೆ ಚರ್ಚೆ ಶುರುವಾಗಿದೆ.
ಹಿಂದಿಯಲ್ಲಿ ಈಗಾಗಲೇ ಮೂರು ಬಿಗ್ ಬಾಸ್ ಓಟಿಟಿ ಸೀಸನ್‌ಗಳು ಯಶಸ್ವಿಯಾಗಿ ಸಾಗಿದೆ. 45 ದಿನಗಳ ಮಿನಿ ಬಿಗ್ ಬಾಸ್ ಆಟದಲ್ಲಿ ಸೆಲೆಬ್ರಿಟಿಗಳು ಮನೆಯೊಳಗೆ ಎಂಟ್ರಿ ಆಗುತ್ತಾರೆ. ಬಿಗ್ ಬಾಸ್ ಓಟಿಟಿ -4 (Bigg Boss OTT 4) ಆರಂಭದ ಬಗ್ಗೆ ಇಂಟರ್‌ನೆಟ್ ನಲ್ಲಿ ಜೋರಾದ ಚರ್ಚೆ ನಡೆಯುತ್ತಿದೆ.
ಯಾರು ಆಗ್ತಾರೆ ಹೋಸ್ಟ್?: ಕಳೆದ ಬಿಗ್ ಬಾಸ್ ಓಟಿಟಿ -3ವನ್ನು ಸಲ್ಮಾನ್ ಖಾನ್ ಬದಲಿಗೆ ಅನಿಲ್ ಕಪೂರ್ (Anil Kapoor) ಶೋ ನಡೆಸಿಕೊಟ್ಟಿದ್ದರು. ಇದಕ್ಕೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ನಿರೂಪಕರಾಗಿ ಯಾರು ಬಿಗ್ ಬಾಸ್ ನಡೆಸಿಕೊಡುತ್ತಾರೆ ಎನ್ನುವ ಬಗ್ಗೆ ಪ್ರಶ್ನೆ ಎದ್ದಿದೆ.
ಬಿಗ್ ಬಾಸ್ ಓಟಿಟಿ -2 ಗೆದ್ದ ಎಲ್ವಿಶ್ ಯಾದವ್(Elvish Yadav) ಶೋ ನಡೆಸಿಕೊಡಬಹುದು ಎನ್ನಲಾಗುತ್ತಿದೆ. ಇವರನ್ನು ಹೊರತುಪಡಿಸಿದರೆ ಫರಾ ಖಾನ್ ಅಥವಾ ರೋಹಿತ್ ಶೆಟ್ಟಿ ಅವರ ಹೆಸರು ಕೂಡ ನಿರೂಪಕರ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.
ಯಾವಾಗ ಶುರು ಆಗುತ್ತದೆ ಹೊಸ ಓಟಿಟಿ ಸೀಸನ್ -4? : ಸಾಮಾನ್ಯವಾಗಿ ಟಿವಿ ಬಿಗ್ ಬಾಸ್ ನಡೆದು 6 ತಿಂಗಳ ಬಳಿಕ ಓಟಿಟಿ ಸೀಸನ್ ಶುರುವಾಗುತ್ತದೆ. ಈ ಹಿಂದಿನ ಎರಡು ಸೀಸನ್ ಜೂನ್ ತಿಂಗಳಿನಲ್ಲಿ ಆರಂಭವಾಗಿತ್ತು. ಓಟಿಟಿಯ 4ನೇ ಸೀಸನ್ ಜುಲೈ ತಿಂಗಳಿನಲ್ಲಿ ಆರಂಭವಾಗುವ ಸಾಧ್ಯತೆಯಿದೆ ಎಂದು ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿದೆ.
ಸಾಮಾನ್ಯರಿಗೂ ಅವಕಾಶ?: ಹಿಂದಿ ಬಿಗ್ ಬಾಸ್‌ನ ಸೀಸನ್ 10, 11 ಮತ್ತು 12 ರಲ್ಲಿ ಜನ ಸಾಮಾನ್ಯರಿಗೆ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯೊಳಗೆ ಹೋಗುವ ಅವಕಾಶವನ್ನು ನೀಡಲಾಗಿತ್ತು. ಬಿಗ್ ಬಾಸ್ ಓಟಿಟಿ -4ರಲ್ಲಿ 6 ಮಂದಿ ಸಾಮಾನ್ಯರಿಗೆ ದೊಡ್ಮನೆಯೊಳಗೆ ಸ್ಪರ್ಧಿಗಳಾಗಿ ಪ್ರವೇಶ ಪಡೆಯುವ ಅವಕಾಶವಿರುತ್ತದೆ ಎಂದು ಕೆಲ ಬಿಗ್ ಬಾಸ್ ಅಪ್ಡೇಟ್ಸ್ ಪೇಜ್‌ಗಳು ಪೋಸ್ಟ್ ಮಾಡಿದೆ. ಆದರೆ ಇದು ಅಧಿಕೃತವಾಗಿಲ್ಲ.
ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್‌ನಲ್ಲಿ ದಿವ್ಯಾ ಅಗರ್ವಾಲ್ ವಿನ್ನರ್ ಆಗಿದ್ದರು. ಸೀಸನ್ -2 ನಲ್ಲಿ ಎಲ್ವಿಶ್ ಯಾದವ್ ವಿಜೇತರಾಗಿದ್ದರು. ಮೂರನೇ ಸೀಸನ್‌ನಲ್ಲಿ ಸನಾ ಮಕ್ಬುಲ್ ವಿನ್ನರ್ ಆಗಿದ್ದರು.
Television actor: ಕಿರುತೆರೆ ನಟ ಬಾಳಪ್ಪ ವಿರುದ್ಧ ಮತ್ತೊಂದು ಕೇಸ್
Bro Gowda: ನಿಶ್ಚಿತಾರ್ಥ ಮಾಡಿಕೊಂಡ ʼಲಕ್ಷ್ಮೀ ಬಾರಮ್ಮʼ ಖ್ಯಾತಿಯ ಬ್ರೋ ಗೌಡ: ಹುಡುಗಿ ಯಾರು?
Controversy: ಅಶ್ಲೀಲ ಹೇಳಿಕೆ: 2ನೇ ಬಾರಿಗೆ ರಣವೀರ್ ಅಲಹಾಬಾದಿಯಾಗೆ ಪೊಲೀಸರ ಸಮನ್ಸ್
Zee Entertainers Comedy Awards 2025: ಜೀ ಕನ್ನಡದಲ್ಲಿ ‘ಕಾಮಿಡಿ’ ಸಮಾಗಮ!
TRP: ಟಿಆರ್ಪಿಯಲ್ಲಿ ದಾಖಲೆ ಬರೆದ ʼಬಿಗ್ ಬಾಸ್ʼ ಫಿನಾಲೆ ಸಂಚಿಕೆ; ಪಡೆದ ಟಿವಿಆರ್ ಎಷ್ಟು?
You seem to have an Ad Blocker on.
To continue reading, please turn it off or whitelist Udayavani.