![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 8, 2024, 1:22 PM IST
ಚೆನ್ನೈ: ಬಿಗ್ ಬಾಸ್ ತಮಿಳು-8 (Bigg Boss Tamil-8) ಆರಂಭವಾಗಿದೆ. ವಿಜಯ್ ಸೇತುಪತಿ (Vijay Sethupathi) ಅವರು ಹೊಸ ಬಿಗ್ ಬಾಸ್ ಹೋಸ್ಟ್ ಆಗಿ ಕಾಣಿಸಿಕೊಂಡಿರುವ ತಮಿಳು ಬಿಗ್ ಬಾಸ್‌ನಲ್ಲಿ ಈ ಬಾರಿ ಸಾಕಷ್ಟು ಟ್ವಿಸ್ಟ್ ಗಳನ್ನು ನೀಡಲಾಗಿದೆ.
ತಮಿಳು ಬಿಗ್ ಬಾಸ್ ಮನೆಗೆ 18 ಮಂದಿ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ನಟ, ನಟಿ, ನಿರ್ಮಾಪಕ, ಗಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿದ್ದಾರೆ. ದೊಡ್ಮನೆಯೊಳಗೆ ಹೋಗಿ 24 ಗಂಟೆಯಲ್ಲೇ ಓರ್ವ ಸ್ಪರ್ಧಿ ಎಲಿಮಿನೇಷನ್ ಆಗಿದ್ದು, ಪ್ರೇಕ್ಷಕರು ಶಾಕ್ ಆಗುವಂತೆ ಮಾಡಿದೆ.
ಬಿಗ್‌ಬಾಸ್ ಮನೆಯೊಳಗೆ ಸ್ಪರ್ಧಿಗಳಿಗೆ 24 ಗಂಟೆಯೊಳಗೆಯೇ ಎಲಿಮಿನೇಷನ್ ಶಾಕ್ ನೀಡಲಾಗಿದೆ. ಈ ಕೂಡಲೇ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗಲಿದ್ದಾರೆ ಎನ್ನುವ ಪ್ರೋಮೊವನ್ನು ತೋರಿಸಲಾಗಿದೆ.
ಸಚನಾ ನಮಿದಾಸ್ (Sachana Namidass) ನಿಮ್ಮ ಬಿಗ್ ಬಾಸ್ ಜರ್ನಿ ಇಲ್ಲಿಗೆ ಮುಕ್ತಾಯವಾಗಿದೆ ಎಂದು ಪ್ರೋಮೊದಲ್ಲಿ ತೋರಿಸಲಾಗಿದೆ. ಇದನ್ನು ಕೇಳಿ ಮನೆಯಲ್ಲಿನ ಎಲ್ಲರೂ ಒಮ್ಮೆ ಭಾವುಕರಾಗಿದ್ದಾರೆ. ಕಣ್ಣೀರಿಟ್ಟು ಸಚನಾ ಬಿಗ್ ಬಾಸ್ ಮನೆಯಿಂದ ಆಚೆ ಹೋಗುವುದನ್ನು ತೋರಿಸಲಾಗಿದೆ.
#Day1 #Promo3 of #BiggBossTamil
Bigg Boss Tamil Season 8 – இன்று இரவு 9:30 மணிக்கு நம்ம விஜய் டிவில.. #BiggBossTamilSeason8 #VJStheBBhost #VijaySethupathi @mynanduonline #AalumPudhusuAattamumPudhusu #BiggBossTamil #BBT #BBTamilSeason8 #பிக்பாஸ் #Disneyplushotstartamil pic.twitter.com/1ZTIHrhmDT
— Vijay Television (@vijaytelevision) October 7, 2024
ಇದನ್ನು ನೋಡಿದ ಪ್ರೇಕ್ಷಕರು ಏನಾದರೂ ಒಂದು ಟ್ವಿಸ್ಟ್ ಇರಲೇಬೇಕೆಂದು ಊಹಿಸಿದ್ದಾರೆ. ಪೂರ್ತಿ ಸಂಚಿಕೆ ನೋಡಲು ಕಾಯುತ್ತಿದ್ದಾರೆ.
ವಿಜಯ್ ಸೇತುಪತಿ ಅವರ ʼಮಹಾರಾಜʼ ಸಿನಿಮಾದಲ್ಲಿ ಮಗಳ ಪಾತ್ರದಲ್ಲಿ ಸಚನಾ ನಮಿದಾಸ್ ನಟಿಸಿ ಇತ್ತೀಚೆಗೆ ಜನಪ್ರಿಯರಾಗಿದ್ದರು.
You seem to have an Ad Blocker on.
To continue reading, please turn it off or whitelist Udayavani.