ಮನೆಯಲ್ಲಿ ಗಾಂಜಾ ಹೊಂದಿದ್ದಕ್ಕಾಗಿ ಖ್ಯಾತ ಯೂಟ್ಯೂಬರ್, ಬಿಗ್ ಬಾಸ್ ರನ್ನರ್ ಅಪ್ ಬಂಧನ
Team Udayavani, Feb 22, 2024, 3:09 PM IST
ಹೈದರಾಬಾದ್: ಮನೆಯಲ್ಲಿ ಗಾಂಜಾ ಹೊಂದಿದ್ದ ಆರೋಪದ ಮೇಲೆ ತೆಲುಗಿನ ಖ್ಯಾತ ಯೂಟ್ಯೂಬರ್ ಹಾಗೂ ಬಿಗ್ ಬಾಸ್ ತೆಲುಗು ಸೀಸನ್ -5 ಯ ರನ್ನರ್ ಅಪ್ ಷಣ್ಮುಖ್ ಜಸ್ವಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಗ್ ಬಾಸ್ ತೆಲುಗು ಸೀಸನ್ 5 ರ ರನ್ನರ್ ಅಪ್ ಷಣ್ಮುಖ್ ಜಸ್ವಂತ್ ಹಾಗೂ ಅವರ ಸಹೋದರ ಸಂಪತ್ ವಿನಯ್ ಅವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಪ್ರಕರಣ ಬೆಳಕಿಗೆ ಬಂದದ್ದೇಗೆ?: ಸಂಪತ್ ವಿನಯ್ ಅವರ ಭಾವಿ ಪತ್ನಿ ಡಾ. ಮೋನಿಕಾ ಎಂಬವರು, ಸಂಪತ್ ಮದುವೆಗೆ 6 ದಿನಗಳು ಇರುವಾಗ ತನಗೆ ಮೋಸ ಮಾಡಿ, ಬೇರೆ ಹುಡುಗಿಯನ್ನು ಮದುಚವೆ ಆಗಲು ಹೊರಟಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮೋನಿಕಾ ಅವರ ದೂರಿನ ಆಧಾರದ ಮೇಲೆ ಸಂಪತ್ ಅವರ ಫ್ಲಾಟ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸರಿಗೆ ಮನೆಯಲ್ಲಿ ಗಾಂಜಾ ಹೊಂದಿರುವುದು ಗೊತ್ತಾಗಿದೆ. ಈ ಕಾರಣದಿಂದ ಷಣ್ಮುಖ್ ಹಾಗೂ ಸಂಪತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆಯೂ ಷಣ್ಮುಖ್ ಅವರನ್ನು ಪೊಲೀಸರು ಕುಡಿದು ವಾಹನ ಚಲಾಯಿಸಿ, ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದ ಪ್ರಕರಣದಲ್ಲಿ ಬಂಧಿಸಿದ್ದರು.
ಯಾರು ಈ ಷಣ್ಮುಖ್ ಜಸ್ವಂತ್: ಹೈದರಾಬಾದ್ ನಲ್ಲಿ ಷಣ್ಮುಖ್ ಅವರು ಯೂಟ್ಯೂಬರ್ ಆಗಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ʼಸಾಫ್ಟ್‌ವೇರ್ ಡೆವಲಪರ್ʼ ಎಂಬ ಶೀರ್ಷಿಕೆಯ ಯೂಟ್ಯೂಬ್ ವೆಬ್ ಸರಣಿಯೊಂದಿಗೆ ಖ್ಯಾತಿಯನ್ನು ಗಳಿಸಿದ್ದರು. ಇದರಲ್ಲಿ ಇವರಿಗೆ ಜೋಡಿಯಾಗಿ ʼಬೇಬಿʼ ನಟಿ ವೈಷ್ಣವಿ ಚೈತನ್ಯ ಅವರು ಕಾಣಿಸಿಕೊಂಡಿದ್ದರು. ಈ ಸರಣಿ ಹಿಟ್ ಆದ ಬಳಿಕ ಷಣ್ಮುಖ್ ಅವರಿಗೆ ಅನೇಕ ಆಫರ್ ಗಳು ಬಂದಿತ್ತು.
ಇದಾದ ಬಳಿಕ ಅವರು ʼಕ್ಯಾಶ್ 2.0ʼ ಶೋನಲ್ಲಿ ಕಾಣಿಸಿಕೊಂಡು, ನಂತರ ಬಿಗ್ ಬಾಸ್ ತೆಲುಗು ಸೀಸನ್ -5 ನಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.
ಇತ್ತೀಚೆಗೆ ಅವರು ʼಸ್ಟೂಡ್ಡೆಂಟ್ʼ ಎನ್ನುವ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.