ರಹಸ್ಯವಾಗಿ 2ನೇ ಮದುವೆಯಾದ್ರಾ ಬಿಗ್ ಬಾಸ್ ಖ್ಯಾತಿಯ ಮುನಾವರ್? ಫೋಟೋ ವೈರಲ್
Team Udayavani, May 27, 2024, 1:59 PM IST
ಮುಂಬಯಿ: ಬಿಗ್ ಬಾಸ್ ವಿಜೇತ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಮತ್ತೆ ಚರ್ಚೆಗೆ ಬಂದಿದ್ದಾರೆ. ಒಂದಲ್ಲ ಒಂದು ವಿಚಾರದಿಂದ ಇಂಟರ್ ನೆಟ್ ಟ್ರೆಂಡ್ ಇರುವ ಮುನಾವರ್ ಈ ಬಾರಿ ಮದುವೆ ವಿಚಾರದಲ್ಲಿ ಸುದ್ದಿಯಾಗಿದ್ದಾರೆ.
ʼಲಾಕ್ ಅಪ್ʼ ಕಾರ್ಯಕ್ರಮದಲ್ಲಿ ವಿಜೇತರಾದ ಬಳಿಕ ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡು ಬಿಗ್ ಬಾಸ್ -17 ನಲ್ಲಿ ವಿಜೇತರಾದ ಮುನಾವರ್ ಫಾರೂಕಿ ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಪ್ರಭಾವಿ ಆಗುವುದರ ಜೊತೆಗೆ ಮುನಾವರ್ ವಿವಾದದಿಂದಲೂ ಸುದ್ದಿಯಾದವರು. ವೈಯಕ್ತಿಕವಾಗಿ ಪ್ರೀತಿಯ ವಿಚಾರದಲ್ಲಿ ಅವರು ಕೆಲ ಆರೋಪವನ್ನು ಎದುರಿಸಿದ್ದಾರೆ. ಅವರ ಮಾಜಿ ಪ್ರೇಯಸಿ ಆಯೇಷಾ ಖಾನ್ ಮುನಾವರ್ ತಮಗೆ ಮೋಸ ಮಾಡಿದ್ದಾರೆ ಎಂದು ಬಿಗ್ ಬಾಸ್ ನಲ್ಲೇ ಆರೋಪಿಸಿದ್ದರು.
ಇದೀಗ ಮುನಾವರ್ ಮದುವೆ ಆಗಿದ್ದಾರೆ ಎಂದು ವರದಿಯೊಂದು ಹೊರಬಿದ್ದಿದೆ.
ಮುನಾವರ್ ಎರಡನೇ ಬಾರಿಗೆ ವಿವಾಹವಾಗಿದ್ದಾರೆ. ಅವರ ವಿವಾಹ 10-12 ದಿನಗಳ ಹಿಂದೆ ನಡೆದಿದೆ. ಈ ವಿವಾಹದಲ್ಲಿ ಅವರ ಕೆಲವೇ ಕೆಲ ಕುಟುಂಬದ ಆತ್ಮೀಯರು ಮಾತ್ರ ಭಾಗಿಯಾಗಿದ್ದರು ಎಂದು ಮೂಲವೊಂದು ತಿಳಿಸಿರುವುದಾಗಿ ʼ ಟೈಮ್ಸ್ ನೌʼ ವರದಿ ಮಾಡಿದೆ.
ಮುನಾವರ್ ವಿವಾಹ ವಿ ಮುಂಬೈನ ಐಟಿಸಿ ಮರಾಠಾದಲ್ಲಿ ಹೌಲ್‌ನಲ್ಲಿ ನಡೆದಿದೆ. ಮೇಕಪ್ ಕಲಾವಿದೆಯಾಗಿರುವ ಮೆಹಜ್ಬೀನ್ ಕೋಟ್ವಾಲಾ ಎಂಬಾಕೆ ಜೊತೆ ಮುನಾವರ್ ಮದುವೆಯಾಗಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಆದರೆ ಈ ಬಗ್ಗೆ ಮುನಾವರ್ ಇದುವರೆಗೆ ಎಲ್ಲೂ ಕೂಡ ಫೋಟೋ ಆಗಲಿ ಅಥವಾ ವಿಷಯವನ್ನು ಬಹಿರಂಗವಾಗಿ ಹಂಚಿಕೊಂಡಿಲ್ಲ. ಆದರೆ ಮದುವೆ ಮಂಟಪದಲ್ಲಿನ ಹೆಸರಿನ ಫೋಟೋ ವೈರಲ್ ಆಗಿದೆ.
ಇನ್ನು ಮುನಾವರ್ ಈ ಹಿಂದೆ 2017 ರಲ್ಲಿ ಜಾಸ್ಮಿನ್ ಎನ್ನುವವರನ್ನು ವಿವಾಹವಾಗಿದ್ದರು. ವಿಚ್ಛೇದನದ ಬಳಿಕ ಮುನಾವರ್ ತನ್ನ ಮಗನನ್ನು ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್ ನಾಜಿಲಾ ಸಿತೈಶಿ ಅವರೊಂದಿಗೆ ಡೇಟಿಂಗ್ ನಲ್ಲಿದ್ದರು.
ಮುನಾವರ್ ಮದುವೆ ಆಗಿದ್ದಾರೆ ಎನ್ನಲಾಗಿದ್ದು, ಕಳೆದ ಕೆಲ ದಿನದ ಹಿಂದೆ ಮುನಾವರ್ ಅವರ ಆಪ್ತ ಸ್ನೇಹಿತೆ ಹಿನಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಹಾಡೊಂದನ್ನು ಸ್ಟೋರಿಯನ್ನಾಗಿ ಹಾಕಿದ್ದರು. ಅವರು ಮುನಾವರ್ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.