BBK11: ಬಿಗ್‌ಬಾಸ್ ಮನೆಯಿಂದ ಆಚೆ ಬಂದ ಚೈತ್ರಾ ಕುಂದಾಪುರ.! ಕಾರಣವೇನು?
Team Udayavani, Dec 3, 2024, 1:38 PM IST
ಬೆಂಗಳೂರು: ಬಿಗ್‌ಬಾಸ್ (Bigg Boss Kannada-11) ಮನೆಯಿಂದ ಚೈತ್ರಾ ಕುಂದಾಪುರ (Chaitra Kundapura) ಹೊರಗೆ ಬಂದಿದ್ದಾರೆ.!
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಶೋಭಾ ಶೆಟ್ಟಿ ಅವರು ಅರ್ಧದಲ್ಲೇ ಆಚೆ ಬಂದಿದ್ದರು. ಅನಾರೋಗ್ಯ ಕಾರಣ ಕೊಟ್ಟ ಸ್ವತಃ ತಾವೇ ಆಚೆ ಹೋಗುವುದಾಗಿ ಶೋಭಾ ಹೇಳಿದ್ದರು. ಇದಕ್ಕೆ ಬಿಗ್ ಬಾಸ್ ಅನುಮತಿ ಕೊಟ್ಟಿದ್ದು, ಈಗಾಗಲೇ ಶೋಭಾ ಅವರು ಆಚೆ ಬಂದಿದ್ದಾರೆ.
ವಿವಾದದಿಂದಲೇ ಸುದ್ದಿಯಾಗಿರುವ ಚೈತ್ರಾ ಕುಂದಾಪುರ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡುತ್ತೇನೆ ಎಂದು ವಂಚನೆ ಮಾಡಿದ್ದರು ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.
ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಪಡೆದು ವಂಚಿಸಿದ್ದರು ಎನ್ನುವ ಆರೋಪದಲ್ಲಿ ಚೈತ್ರಾ ಜೈಲು ಸೇರಿ ಆ ಬಳಿಕ ಜಾಮೀನು ಪಡೆದು ಆಚೆ ಬಂದಿದ್ದರು. ಈ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತ್ತು.
ಇದಾದ ಬಳಿಕ ಚೈತ್ರಾ ಅವರು ಕೆಲ ದಿನ ಸುದ್ದಿಯಲ್ಲಿದ್ದರು. ಇದೇ ಸಂದರ್ಭದಲ್ಲಿ ಅವರಿಗೆ ಬಿಗ್ ಬಾಸ್ ಕನ್ನಡ ಕಡೆಯಿಂದ ಆಫರ್ ಬಂದಿತ್ತು. ಬಿಗ್ ಬಾಸ್ ಮನೆಗೆ ಹೋಗಿರುವ ಚೈತ್ರಾ ಅಲ್ಲೂ ಕೂಡ ತನ್ನ ದೊಡ್ಡ ಧ್ವನಿಯಿಂದಲೇ ಸದ್ದು ಮಾಡಿದ್ದಾರೆ.
ಟಿಕೆಟ್ ವಂಚನೆ ಸಂಬಂಧ ಪ್ರಕರಣ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಚೈತ್ರಾ ಸೇರಿದಂತೆ ಶ್ರೀಕಾಂತ್, ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಸ್ವಾಮೀಜಿಯ ಹೆಸರು ಕೂಡ ಕೇಳಿ ಬಂದಿತ್ತು.
ಇತ್ತೀಚೆಗೆ ವಿಚಾರಣೆಗೆ ಹಾಜರಾಗಬೇಕೆನ್ನುವ ವಾರೆಂಟ್ ಬಂದಿತ್ತು. ಈ ಕಾರಣದಿಂದ ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರ ನೇರವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ.
ಸದ್ಯ ವಿಚಾರಣೆಯನ್ನು ಕೋರ್ಟ್ ಜನವರಿ 13ಕ್ಕೆ ಮುಂದೂಡಿದೆ. ಚೈತ್ರಾ ಅವರು ವಿಚಾರಣೆ ವೇಳೆ ಯಾರೊಂದಿಗೂ ಮಾತನಾಡಿಲ್ಲ ಎನ್ನಲಾಗಿದ್ದು, ಅಲ್ಲಿಂದ ಅವರು ನೇರವಾಗಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.
ಕಳೆದ ಸೀಸನ್‌ನಲ್ಲಿ ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿ ಕೆಲ ದಿನಗಳ ಬಳಿಕ ಬಿಗ್ ಬಾಸ್ ಮನೆಗೆ ಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!
BBK11: ಕೋಪದಿಂದ ಅರ್ಧದಲ್ಲೇ ಬಿಗ್ ಬಾಸ್ ವೇದಿಕೆ ಬಿಟ್ಟು ಹೋದ ಕಿಚ್ಚ; ಸ್ಪರ್ಧಿಗಳು ಶಾಕ್
ನನ್ನ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್ ಏನೇನು ಗೊತ್ತಾ?
BBK11: ನೀವೆಷ್ಟು ಕಳಪೆ ಕೊಟ್ರು ನನ್ನ ಮಗಳು ನಮಗೆ ಉತ್ತಮನೇ- ಚೈತ್ರಾ ತಾಯಿ ಭಾವುಕ ನುಡಿ
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.