ʼಡ್ಯಾನ್ಸ್ ದಿವಾನೆ -4ʼ ಟ್ರೋಫಿ ಗೆದ್ದ ಬೆಂಗಳೂರು ಮೂಲದ ನಿತಿನ್; ಸಾಥ್ ಕೊಟ್ಟ ಗೌರವ್
Team Udayavani, May 26, 2024, 11:31 AM IST
ಮುಂಬಯಿ: ಹಿಂದಿಯ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ʼಡ್ಯಾನ್ಸ್ ದಿವಾನೆʼ ಸೀಸನ್ -4 ಫಿನಾಲೆ ಮುಕ್ತಾಯ ಕಂಡಿದ್ದು, ವಿಜೇತರನ್ನು ಅನೌನ್ಸ್ ಮಾಡಲಾಗಿದೆ.
ಸುನಿಲ್ ಶೆಟ್ಟಿ ಹಾಗೂ ಮಾಧುರಿ ದೀಕ್ಷಿತ್ ತೀರ್ಪುಗಾರರಾಗಿರುವ ʼಡ್ಯಾನ್ಸ್ ದಿವಾನೆʼ -4 ಕಾರ್ಯಕ್ರಮದ ಫಿನಾಲೆ ಕಲರ್ಸ್ ಹಿಂದಿ ವಾಹಿನಿಯಲ್ಲಿ ಪ್ರಸಾರ ಕಂಡಿತು.
ಅದ್ಧೂರಿ ಫಿನಾಲೆಯಲ್ಲಿ ಮಾಧುರಿ ದೀಕ್ಷಿತ್ ಹಾಗೂ ಸುನಿಲ್ ಶೆಟ್ಟಿ ಅವರು ಕಲರ್ ಫುಲ್ ಹಾಡೊಂದಕ್ಕೆ ನೃತ್ಯವನ್ನು ಮಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಜೋಡಿಯಾಗಿ ಮೋಡಿ ಮಾಡಿದ ನಿತಿನ್ ಮತ್ತು ಗೌರವ್ ʼಡ್ಯಾನ್ಸ್ ದಿವಾನೆ -4ʼ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ. ವಿಜೇತರಿಗೆ 20 ಲಕ್ಷ ರೂ. ನಗದು ಹಾಗೂ ಟ್ರೋಫಿಯನ್ನು ನೀಡಲಾಗಿದೆ.
ನಿತಿನ್ ಬೆಂಗಳೂರಿನವರಾಗಿದ್ದು, ಗೌರವ್ ದೆಹಲಿ ಮೂಲದವರಾಗಿದ್ದಾರೆ. ಇವರಿಬ್ಬರ ಡ್ಯಾನ್ಸ್ ನೋಡಿ ಟೈಗರ್ ಶ್ರಾಫ್ ಫಿದಾ ಆಗಿದ್ದರು.
“ಟ್ರೋಫಿ ಮತ್ತು ವೀಕ್ಷಕರ ಹೃದಯವನ್ನು ಗೆದ್ದ ನಿತಿನ್ ಮತ್ತು ಗೌರವ್ ಅವರಿಗೆ ಅಭಿನಂದನೆಗಳು! ನಿಮ್ಮ ಹಲವಾರು ಪ್ರದರ್ಶನಗಳು ಜನಮನ ಗೆದ್ದಿದೆ. ಮುಂದೆಯೂ ನಿಮ್ಮ ಈ ಜರ್ನಿ ಮುಂದುವರೆದು ಜಗತ್ತನ್ನು ದಿಗ್ಭ್ರಮೆಗೊಳಿಸುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಮಾಧುರಿ ವಿಜೇತರನ್ನು ಅಭಿನಂದಿಸಿದ್ದಾರೆ.
ಫಿನಾಲೆಯಲ್ಲಿ ನಟ ಕಾರ್ತಿಕ್ ಆರ್ಯನ್ ಅತಿಥಿಯಾಗಿ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.