ಸಂಗೀತಾ ಬರ್ತ್ ಡೇಗೆ ಪ್ರತಾಪ್ ಸ್ಪೆಷೆಲ್ ಗಿಫ್ಟ್; ಪ್ರೀತಿಯ ತಮ್ಮನಿಗೆ ರಾಖಿ ಕಟ್ಟಿದ ನಟಿ
Team Udayavani, May 15, 2024, 6:22 PM IST
ಬೆಂಗಳೂರು: ಬಿಗ್ ಬಾಸ್ ಬಳಿಕ ಇನ್ನಷ್ಟು ಖ್ಯಾತಿ ಆಗಿರುವ ʼ777 ಚಾರ್ಲಿʼ ಬೆಡಗಿ ಸಂಗೀತಾ ಶೃಂಗೇರಿ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಅವರ ಹುಟ್ಟುಹಬ್ಬಕ್ಕೆ ನೂರಾರು ಅಭಿಮಾನಿಗಳು ಹಾಗೂ ದೊಡ್ಮನೆಯ ಸ್ನೇಹಿತರು ವಿಶ್ ಮಾಡಿದ್ದಾರೆ.
ಬಿಗ್ ಬಾಸ್ ಬಳಿಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಅವರಿಗಾಗಿ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಹಾಗೂ ಪ್ರತಾಪ್ ಸ್ನೇಹ ಸಂಬಂಧ ಹಾಗೂ ಅಕ್ಕ – ತಮ್ಮನ ಬಾಂಧವ್ಯ ಗಮನ ಸೆಳೆದಿತ್ತು. ಬಿಗ್ ಬಾಸ್ ಮುಗಿದ ಬಳಿಕವೂ ಅವರಿಬ್ಬರ ಬಾಂಧವ್ಯ ಹಾಗೆಯೇ ಇದೆ.
ಸಂಗೀತಾ ಅವರ ಬರ್ತ್ ಡೇ ಸಂಭ್ರಮಕ್ಕೆ ನೀತು ಹಾಗೂ ಪ್ರತಾಪ್ ಮನೆಗೆ ಭೇಟಿ ಕೊಟ್ಟು ಸರ್ಪ್ರೈಸ್ ನೀಡಿದ್ದಾರೆ. ಇಬ್ಬರು ಕೇಕ್ ತೆಗೆದುಕೊಂಡು ಹೋಗಿದ್ದಾರೆ. ಕೇಕ್ ಕತ್ತರಿಸುವ ಮೂಲಕ ಇಬ್ಬರು ಸಂಗೀತಾ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ.
ಡ್ರೋನ್ ಪ್ರತಾಪ್ ಪ್ರೀತಿಯ ಅಕ್ಕ ಸಂಗೀತಾಗೆ ತಿಳಿ ಹಸಿರು ಬಣ್ಣದ ಚೂಡಿದಾರ್ ಅನ್ನು ಗಿಫ್ಟ್ ಆಗಿ ನೀಡಿದ್ದು, ಸಂಗೀತಾ ಪ್ರತಾಪ್ ಅವರಿಗೆ ರಾಖಿ ಕಟ್ಟಿದ್ದಾರೆ. ಈ ಸಂಭ್ರಮದ ವಿಡಿಯೋ ಶೇರ್ ಮಾಡಿ ಪ್ರೀತಿಯ ಅಕ್ಕ ಜೊತೆಗಿರುವೆ ಸದಾ ಅಂತಾ ಪ್ರತಾಪ್ ಬರೆದುಕೊಂಡಿದ್ದಾರೆ.
ಸದ್ಯ ಬರ್ತ್ ಡೇ ಸಂಭ್ರಮದ ಫೋಟೋ,ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದಲ್ಲದೇ ರಕ್ಷಕ್ ಬುಲೆಟ್ ಕೂಡ ಸಂಗೀತಾರನ್ನು ಭೇಟಿಯಾಗಿ ವಿಶ್ ಮಾಡಿದ್ದಾರೆ.
ಇತ್ತ ನಟಿ ಸಂಗೀತಾ ಸಿನಿಮಾರಂಗದಲ್ಲಿ ಹೊಸ ಕಥೆಯ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ದೊಡ್ಮನೆಯಿಂದ ಹೊರಬಂದ ಬಳಿಕ ಅವರ ʼಮಾರಿಗೋಲ್ಡ್ʼ ಸಿನಿಮಾ ರಿಲೀಸ್ ಆಗಿತ್ತು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮೋಕ್ಷಿತಾ ತೊಡೆ ಮೇಲೆ ಕೂತ ರಜತ್.. ಅತಿಥಿಗಳ ವರ್ತನೆಗೆ ಸಿಬ್ಬಂದಿಗಳು ಸುಸ್ತು.!
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.