Fraud: ಜಿಪಂ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ.ವಂಚನೆ; ಡ್ರೋನ್ ಪ್ರತಾಪ್ ವಿರುದ್ಧ ಕೇಸ್
ಹೆಚ್ ಡಿ ಕುಮಾರಸ್ವಾಮಿ ಹೆಸರೇಳಿಕೊಂಡು ವಂಚನೆ ಮಾಡಿದ ಆರೋಪ
Team Udayavani, Feb 3, 2024, 6:01 PM IST
ಬೆಂಗಳೂರು: ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೊಂಡು ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ತನ್ನಿಂದ 2 ಲಕ್ಷ ರೂ.ಪಡೆದುಕೊಂಡು ವಂಚಿಸಿರುವುದಾಗಿ ಚಂದನ್ ಕುಮಾರ್ ಗೌಡ ಎಂಬುವವರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ಪ್ರತಾಪ್ ತನ್ನಿಂದ 2 ಲಕ್ಷ ರೂ. ಪಡೆದುಕೊಂಡಿದ್ದಾರೆ. ತನಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಪರಿಚಯವಿದೆ. ಆಗಾಗ ನಾನು ಅವರ ಫಾರ್ಮ್ ಹೌಸ್ ಗೆ ಭೇಟಿ ನೀಡುತ್ತೇನೆ ಎಂದಿದ್ದಾನೆ. ಇದರೊಂದಿಗೆ ತಾನು ಬಿಗ್ ಬಾಸ್ ಮನೆಯಲ್ಲಿರುವ ವೇಳೆ ಪ್ರಚಾರಬೇಕೆಂದು ನನ್ನಿಂದ ಸಹಾಯ ಕೇಳಿದ್ದಾನೆ. ನಾನು ನನ್ನಿಂದಾಗುವಷ್ಟು ಸಹಾಯವನ್ನು ಮಾಡಿದ್ದು, ಅವನ ಪರವಾಗಿ ಪ್ರಚಾರವನ್ನು ಕೂಡ ಮಾಡಿದ್ದೇನೆ. ಬಿಗ್ ಬಾಸ್ ರನ್ನರ್ ಅಪ್ ಆದ ಬಳಿಕ ಪ್ರತಾಪ್ ನನ್ನ ಕರೆ ಹಾಗೂ ಮೆಸೇಜ್ ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ತನಗೆ ಆಗಿರುವ ಮೋಸಕ್ಕೆ ನ್ಯಾಯ ಒದಗಿಸಬೇಕೆಂದು ಚಂದನ್ ದೂರಿನಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಚಂದನ್ ಕುಮಾರ್ ರೊಂದಿಗೆ ಪ್ರತಾಪ್ ಮಾತನಾಡಿರುವ ಎನ್ನಲಾದ ಆಡಿಯೋವನ್ನು ಕೂಡ ರಿಲೀಸ್ ಮಾಡಲಾಗಿದೆ.
ಆಡಿಯೋದಲ್ಲಿ ಏನಿದೆ?: ನನ್ನನ್ನು ಕಾಂಗ್ರೆಸ್‌ಗೆ ಬನ್ನಿ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡ್ತೀನಿ ಅಂದಿದ್ದರು. ಆಗ ನಾನು ಕುಮಾರಸ್ವಾಮಿಯವರ ಜೊತೆ ಓಡಾಡುತ್ತಿದ್ದೆನು. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತೇನೆ. ಆದರೆ, ಕುಮಾರಸ್ವಾಮಿಯವರ ಜೊತೆಗಿನ ಫೋಟೋ ಹಾಕಲ್ಲ. ನನ್ನ ಜೊತೆ ಕುಮಾರಸ್ವಾಮಿಯವರ ತೋಟದ ಮನೆಗೆ ಬಾ ಪರಿಚಯ ಮಾಡಿಸುತ್ತೇನೆ. ಅವರು ಕೆಟ್ಟ ಪದದಿಂದ ಬೈಯಬಹುದು, ಆದರೆ ತುಂಬಾ ಒಳ್ಳೆಯ ಮನುಷ್ಯ. ಡಿಸಿಎಂ ಡಿ.ಕೆ. ಶಿವಕುಮಾರ್ ತರ ಪೇಪರ್ ಎಸೆಯೋದು ಮಾಡಲ್ಲ. ಕುಮಾರಸ್ವಾಮಿ ಯಾರೇ ಹೋದ್ರು ದುಡ್ಡು ಕೊಡ್ತಾರೆ ಎಂದು ಹೇಳಿ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಸಾರಂಗ್ ಮಾನೆ ಎನ್ನುವವರು ಕೂಡ ಡ್ರೋನ್ ಪ್ರತಾಪ್ ವಿರುದ್ಧ ವಂಚನೆ ಆರೋಪವನ್ನು ಮಾಡಿ ದೂರು ದಾಖಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.