Puneeth Rajkumar: ಟಿವಿಯಲ್ಲಿ ʼಅಪ್ಪುʼವನ್ನೇ ಹೋಲುವ ಈ ಕಲಾವಿದನನ್ನು ನೋಡಿ ಭಾವುಕರಾದ ಜನ 

ಹಾವಭಾವ, ಕುಣಿತ, ಅಭಿನಯ.. ಅಪ್ಪುವನ್ನೇ ಹೋಲುವ ಈ ಕಲಾವಿದ ಯಾರು?

Team Udayavani, Jul 29, 2024, 4:14 PM IST

Puneeth Rajkumar: ಟಿವಿಯಲ್ಲಿ ʼಅಪ್ಪುʼವನ್ನೇ ಹೋಲುವ ಈ ಕಲಾವಿದನನ್ನು ನೋಡಿ ಭಾವುಕರಾದ ಜನ 

ಬೆಂಗಳೂರು: ಕನ್ನಡಿಗರ ʼರಾಜಕುಮಾರʼ ಡಾ.ಪುನೀತ್‌ ರಾಜ್‌ ಕುಮಾರ್‌ (Dr. Puneeth Rajkumar) ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರನ್ನು ಪ್ರತಿದಿನವೂ ಅವರ ಅಭಿಮಾನಿಗಳು ನೆನೆಯುತ್ತಲೇ ಇದ್ದಾರೆ. ʼಅಪ್ಪುʼ ಅಮರವೆಂದು ಹೇಳುತ್ತಿದ್ದಾರೆ.

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ನಮ್ಮ ಜೊತೆ ಈ ಲೋಕದಲ್ಲಿ ಇಲ್ಲದಿದ್ರೂ ಅವರು ಕಲಿಸಿಕೊಟ್ಟ ಜೀವನ ಪಾಠ, ನೀತಿ ನಿಯಮಗಳು ಇಂದಿಗೂ ಅನೇಕರಿಗೆ ಸ್ಪೂರ್ತಿಯಾಗಿದೆ. ʼಅಪ್ಪುʼ ಇಲ್ಲದಿದ್ರೂ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿರುವುದನ್ನು ಮಾತ್ರ ಕಡಿಮೆ ಮಾಡಿಲ್ಲ.

ಪುನೀತ್‌ ರಾಜ್‌ ಕುಮಾರ್‌ ಅವರ ಸಿನಿಮಾಗಳ ರೀ – ರಿಲೀಸ್‌ ಆದರೆ ಇಂದಿಗೂ ಸಾಲುಗಟ್ಟಿ ಥಿಯೇಟರ್‌ ನಲ್ಲಿ ನಿಂತು ಟಿಕೆಟ್‌ ಖರೀದಿಸುವ ಬೃಹತ್‌ ಅಭಿಮಾನಿಗಳು ಅವರಿಗಿದ್ದಾರೆ.

ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯನ್ನು ಹೋಲುವ 7 ಮಂದಿ ಇರುತ್ತಾರಂತೆ. ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದಲ್ಲಿ ಡಾ.ಪುನೀತ್‌ ರಾಜ್‌ ಕುಮಾರ್‌ ಅವರನ್ನು ಹೋಲುವಂತೆ ಕಲಾವಿದನೊಬ್ಬನ ಅಭಿನಯ ಮೂಡಿಬಂದಿದ್ದು, ʼಅಪ್ಪುʼ ಅವರನ್ನು ಮತ್ತೆ ಭೂಲೋಕಕ್ಕೆ ಕರೆತಂದಂತೆ ಕಂಡಿದೆ.

ʼಜೀ ಕನ್ನಡʼ ವಾಹಿನಿಯಲ್ಲಿ ಪ್ರಸಾರ ಕಾಣುವ ʼಕಾಮಿಡಿ ಕಿಲಾಡಿಗಳು ಪ್ರಿಮಿಯರ್‌ ಲೀಗ್‌ʼ ಕಾರ್ಯಕ್ರಮದಲ್ಲಿ ಡಾ.ಪುನೀತ್‌ ರಾಜ್‌ ಕುಮಾರ್‌ ಅವರನ್ನು ಹೋಲುವ ಕಲಾವಿದ ಪ್ರೇಕ್ಷಕರನ್ನು ʼಅಪ್ಪುʼ ಅವರಂತೆ ರಂಜಿಸಿ ತೀರ್ಪುಗಾರರ ಕಣ್ಣಂಚಲಿ ನೀರು ತರಿಸಿದ್ದಾನೆ.

ʼಅಪ್ಪುʼ ಅವರನ್ನೇ ಹೋಲುವ ಧ್ವನಿ, ಡ್ಯಾನ್ಸ್‌, ಮುಖ, ಅಭಿನಯ; ಯಾರೀತ?: ಕಾಮಿಡಿ ಕಿಲಾಡಿಗಳು ಪ್ರಿಮಿಯರ್‌ ಲೀಗ್‌ ಕಾರ್ಯಕ್ರಮದ ಸ್ಕಿಟ್ ವೊಂದರಲ್ಲಿ ಡಾ.ಪುನೀತ್‌ ರಾಜ್‌ ಕುಮಾರ್‌ ಟೈಮ್‌ ಟ್ರಾವೆಲ್‌ ಮಾಡಿ ಬಂದರೆ ಹೇಗಿರುತ್ತೆ ಎನ್ನುವ ಕಾನ್ಸೆಪ್ಟ್‌ ನ್ನು ತೋರಿಸಲಾಗಿದೆ. ಟೈಮ್‌ ಟ್ರಾವೆಲ್‌ ನಿಂದ ಡಾ. ಪುನೀತ್‌ ರಾಜ್‌ ಕುಮಾರ್‌ ಮತ್ತೆ ಭೂಲೋಕಕ್ಕೆ ಬರುವುದನ್ನು ತೋರಿಸಲಾಗಿದೆ. ಜೂ. ಅಪ್ಪು ಅವರನ್ನು ನೋಡಿ ಥೇಟ್‌ ನಿಜವಾದ ಅಪ್ಪು ಮತ್ತೆ ಹುಟ್ಟಿ ಬಂದವರಂತೆ ಕಂಡಿದ್ದು, ಇದನ್ನು ನೋಡಿದ ತೀರ್ಪುಗಾರರು ಹಾಗೂ ವೇದಿಕೆಯಲ್ಲಿದ್ದ ಸ್ಪರ್ಧಿಗಳು ಭಾವುಕರಾಗಿದ್ದಾರೆ.

ಪುನೀತ್‌ ರಾಜ್‌ ಕುಮಾರ್‌ ಅವರಂತೆ ಮೂನ್‌ ವಾಕ್‌ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇದಾದ ಬಳಿಕ ಅಪ್ಪು ಅವರ ಸಿನಿಮಾದ ಡೈಲಾಗ್ಸ್‌ ನ್ನು ಹೇಳಿದ್ದಾರೆ.

ಅಪ್ಪುವನ್ನು ಹೋಲುವ ಹಾವಭಾವದಿಂದ ಪ್ರೇಕ್ಷಕರ ಮನಗೆದ್ದಿರುವ ಈ ಕಲಾವಿದನ ಹೆಸರು ರಾಘವೇಂದ್ರ ಬಸ್ತಿ. ಹಾವೇರಿಯವರಾದ ಇವರು ಡಾ.ರಾಜ್‌ ಕುಮಾರ್‌ ಅವರನ್ನೇ ಹೋಲುವ, ಅವರ ಅನುಕರಣೆ ಮಾಡಿ, “ನಮ್ಮೂರ ರಾಜಕುಮಾರ”ಎನ್ನುವ ಖ್ಯಾತಿಯನ್ನು ಗಳಿಸಿರುವ ಕಲಾವಿದ ಅಶೋಕ ಬಸ್ತಿ ಅವರ ಪುತ್ರವೆನ್ನುವುದು ವಿಶೇಷ. ಇವರ ತಂದೆ ಡಾ.ರಾಜ್‌ ಕುಮಾರ್‌ ಅವರನ್ನು ಅನುಕರಣೆ ಮಾಡುತ್ತಾರೆ.

 

View this post on Instagram

 

A post shared by Zee Kannada (@zeekannada)

ಅಶೋಕ ಬಸ್ತಿ ಅಣ್ಣಾವ್ರ ತದ್ರೂಪ ಆಗಿದ್ದು, ಮಗ ರಾಘವೇಂದ್ರ ಬಸ್ತಿ ಪುನೀತ್ ತದ್ರೂಪವಾಗಿದ್ದಾರೆ.

ವೇದಿಕೆಯಲ್ಲಿ ಅಪ್ಪು ಅವರ ಪಾತ್ರವನ್ನು ಮಾಡಿದ ರಾಘವೇಂದ್ರ ಅವರನ್ನು ಊರಿನಲ್ಲಿ ಜೂ. ಅಪ್ಪುವೆಂದೇ ಕರೆಯುತ್ತಾರೆ. ನಾನಾ ಕಾರ್ಯಕ್ರಮಗಳಲ್ಲಿ ಅವರು ಅಪ್ಪು ಅವರನ್ನು ಅನುಕರಣೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡುವ ಅವರು, “ನಾನು ಅಶೋಕ್ ಬಸ್ತಿ ಅವರ ಮಗ ಅಂತ ಹೇಳಿದ್ರು. ಕನ್ನಡಕ್ಕೆ ಒಬ್ಬರೇ ಪುನೀತ್ ರಾಜಕುಮಾರ್ ಇದ್ದಾರೆ. ಇವರಿಂದಲೇ ನಾವು ಎರಡು ಹೊತ್ತು ಊಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

 

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು

BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.