Viral: ಸೆ**ಕ್ಸ್ ಗಾಗಿ 65ರ ಮುದುಕನನ್ನು ವಿವಾಹವಾದ್ರಾ ಈ ನಟಿ? ನೆಟ್ಟಿಗರಿಂದ ಭಾರೀ ಟ್ರೋಲ್
Team Udayavani, Nov 2, 2024, 1:36 PM IST
ತಿರುವನಂತಪುರಂ: ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳು ವೈರಲ್ ಆಗುತ್ತಿದೆ. ಗಡ್ಡ ಹಣ್ಣಾಗಿರುವ ವ್ಯಕ್ತಿಯ ಜತೆ ಮಧ್ಯ ವಯಸ್ಸಿನ ಮಹಿಳೆಯೊಬ್ಬರು ವಿವಾಹವಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಲಯಾಳಂ ಕಿರುತೆರೆಯ ಜನಪ್ರಿಯ ನಟ ಕ್ರಿಸ್ ವೇಣುಗೋಪಾಲ್ (Kris Venugopal) ನಟಿ ದಿವ್ಯಾ ಶ್ರೀಧರ್(Actress Divya Sreedhar) ಜತೆ ಇತ್ತೀಚೆಗೆ ಗುರುವಾಯೂರು ದೇವಸ್ಥಾನದಲ್ಲಿ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಕ್ರಿಸ್ ವೇಣುಗೋಪಾಲ್ ಹಾಗೂ ದಿವ್ಯಾ ಶ್ರೀಧರ್ ಇಬ್ಬರು ಮಲಯಾಳಂ ಕಿರುತೆರೆಯಲ್ಲಿ ಜನಪ್ರಿಯ ಕಲಾವಿದರಾಗಿದ್ದಾರೆ. ಖಳನಾಯಕಿಯಾಗಿ ಕಿರುತೆರೆ ಲೋಕದಲ್ಲಿ ಹೆಚ್ಚಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ.
ಕ್ರಿಸ್ ವೇಣುಗೋಪಾಲ್ ಮತ್ತು ದಿವ್ಯಾ ಶ್ರೀಧರ್ ಧಾರಾವಾಹಿಯ ಶೂಟಿಂಗ್ ವೇಳೆ ಪರಿಚಯವಾಗಿ ಆತ್ಮೀಯರಾದರು. ಈ ಆತ್ಮೀಯತೆ ಪ್ರೀತಿಗೆ ತಿರುಗಿತು. ದಿವ್ಯಾ ಅವರಿಗೆ ಇದು 2ನೇ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಕ್ರಿಸ್ – ದಿವ್ಯಾ ಇಬ್ಬರ ಮದುವೆ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರ ಜತೆಗೆ ಟ್ರೋಲ್ಗೆ ಒಳಗಾಗಿದೆ. ಅನೇಕರು ದಿವ್ಯಾ ಅವರು ತಮ್ಮ ಲೈಂಗಿಕ ಆಸೆಯನ್ನು ಪೂರ್ತಿ ಮಾಡಿಕೊಳ್ಳಲು 65 ವರ್ಷದ ಮುದುಕನನ್ನು ಮದುವೆಯಾಗಿದ್ದಾರೆ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ.
ಇಂತಹ ಕಮೆಂಟ್ ಗಳನ್ನು ಓದಿರುವ ದಿವ್ಯಾ ಅವರು ನೊಂದಿದ್ದು, ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ.
ನಾನು ಸೆ*ಕ್ಸ್ ಗಾಗಿ ಮದುವೆಯಾಗಿಲ್ಲ. ನಾನು ನನ್ನ ಮಕ್ಕಳು ಸುರಕ್ಷಿತವಾಗಿರಲು ಬಯಸುತ್ತೇನೆ. ಅವರಿಗೊಬ್ಬ ತಂದೆ ಬೇಕು. ನನಗೊಂದು ಐಡೆಂಟಿಟಿ ಬೇಕಿತ್ತು. ಲೈಂಗಿಕತೆ ಮಾತ್ರ ಜೀವನ ಎಂದು ಎಲ್ಲಿಯಾದರೂ ಬರೆಯಲಾಗಿದೆಯೇ? ಒಬ್ಬ ವ್ಯಕ್ತಿಯು ಲೈಂಗಿಕತೆ ಇಲ್ಲದೆ ಬದುಕಲು ಸಾಧ್ಯವಿಲ್ಲವೇ? ಸೆ*ಕ್ಸ್ ಜೀವನದ ಒಂದು ಭಾಗವಷ್ಟೇ. ಅವರಿಗೆ 49 ವರ್ಷ ನನಗೆ 40 ವರ್ಷವೆಂದು ನಟಿ ದಿವ್ಯಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.