ಈ ಬಾರಿ ‘ಖತ್ರೋನ್ ಕೆ ಖಿಲಾಡಿ’ ನಿರೂಪಣೆ ಮಾಡಲು ಮತ್ತೆ ಸಂಭಾವನೆ ಹೆಚ್ಚಿಸಿದ ರೋಹಿತ್ ಶೆಟ್ಟಿ
Team Udayavani, Mar 13, 2024, 1:16 PM IST
ಮುಂಬಯಿ: ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ತನ್ನ ಹಾಸ್ಯ ಹಾಗೂ ಸಾಹಸಮಯ ಸಿನಿಮಾಗಳಿಂದ ಎಷ್ಟು ಖ್ಯಾತಿಗಳಿಸಿದ್ದರೋ, ತನ್ನ ನಿರೂಪಣಾ ಪ್ರತಿಭೆಯಿಂದಲೂ ಟಿವಿ ಲೋಕಕದಲ್ಲಿ ಅಷ್ಟೇ ಹೆಸರುಗಳಿಸಿದ್ದಾರೆ.
ರೋಹಿತ್ ಶೆಟ್ಟಿ ಬಾಲಿವುಡ್ ಸಿನಿಮಾರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಸಿನಿಮಾ ಪ್ರೇಕ್ಷಕರನ್ನು ತನ್ನ ಸಿನಿಮಾಗಳಿಂದ ರಂಜಿಸಿದ ಅವರು, ರಿಯಾಲಿಟಿ ಶೋವೊಂದರಿಂದಲೂ ಗಮನ ಸೆಳೆದಿದ್ದಾರೆ. ‘ಖತ್ರೋನ್ ಕೆ ಖಿಲಾಡಿ’ ಎನ್ನುವ ಸಾಹಸಮಯ ರಿಯಾಲಿಟಿ ಶೋಗಳ ಹಲವು ಸೀಸನ್ ಗಳನ್ನು ಅವರು ನಡೆಸಿಕೊಟ್ಟಿದ್ದಾರೆ.
ಒಬ್ಬ ಖ್ಯಾತ ನಿರ್ದೇಶಕನನನ್ನು ಅಥವಾ ನಟನನ್ನು ಕಿರುತೆರೆಗೆ ತಂದು ಕಾರ್ಯಕ್ರಮವನ್ನು ನಿರೂಪಣೆ ಮಾಡಿಸುವುದು ಹೊಸದಲ್ಲ. ಆದರೆ ಈ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಟರಿಗೆ ಕೊಡುವ ಸಂಭಾವನೆ ಲಕ್ಷ ಲಕ್ಷದಾಗಿರುತ್ತದೆ.
ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಗಳು ಹಾಗೂ ಟಿವಿ ಲೋಕದ ಸ್ಟಾರ್ ಗಳು ಭಾಗಿಯಾಗುವ ‘ಖತ್ರೋನ್ ಕೆ ಖಿಲಾಡಿ’ ಸೀಸನ್ -14 ಆರಂಭಕ್ಕೆ ದಿನಗಣನೆ ಬಾಕಿ ಉಳಿದಿದೆ. ಈ ಬಾರಿಯೂ ರೋಹಿತ್ ಶೆಟ್ಟಿ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈ ಬಾರಿ ಅವರು ಕಾರ್ಯಕ್ರಮವನ್ನು ನಡೆಸಿಕೊಡಲು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎನ್ನುವ ವರದಿಯೊಂದು ಹೊರಬಿದ್ದಿದೆ. ಶೇ.50 ರಷ್ಟು ತನ್ನ ಸಂಭಾವನೆಯನ್ನು ಅವರು ಹೆಚ್ಚಿಸಿದ್ದಾರೆ ಎಂದು ವರದಿ ಆಗಿದೆ.
ಖತ್ರೋನ್ ಕೆ ಖಿಲಾಡಿಯ ಆರಂಭಿಕ ಸೀಸನ್‌ನಲ್ಲಿ ರೋಹಿತ್ ಈ ಹಿಂದೆ ಪ್ರತಿ ಸಂಚಿಕೆಗೆ 50 ಲಕ್ಷಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದರು. ಇದೀಗ ಸೀಸನ್ -14 ಗೆ ಒಂದು ಎಪಿಸೋಡ್ ಗೆ ಅವರು 60-70 ರಿಂದ ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. ಆ ಮೂಲಕ ಇಡೀ ಸೀಸನ್ ನಲ್ಲಿ 16 ಕೋಟಿ ರೂ. ಪಡೆಯಲಿದ್ದಾರೆ ಎಂದು ʼಸಿಯಾಸತ್ʼ ವರದಿ ಮಾಡಿದೆ.
ʼಖತ್ರೋನ್ ಕೆ ಕಿಲಾಡಿʼ ಸೀಸನ್ 5 ಮತ್ತು 6 ನ್ನು ಹೋಸ್ಟ್ ಮಾಡಲು ರೋಹಿತ್ ಪ್ರತಿ ಸಂಚಿಕೆಗೆ 10-20 ಲಕ್ಷ ಶುಲ್ಕ ಪಡೆಯುತ್ತಿದ್ದರು. ಸೀಸನ್ -7 ನ್ನು ಅರ್ಜುನ್ ಕಪೂರ್ ನಡೆಸಿಕೊಟ್ಟಿದ್ದರು. ಆ ಬಳಿಕ ಶುರುವಾದ ಸೀಸನ್ -8 ನ್ನು ಮತ್ತೆ ರೋಹಿತ್ ಶೆಟ್ಟಿ ನಡೆಸಿಕೊಟ್ಟರು. ಈ ಸೀಸನ್ 10ರ ಪ್ರತಿ ಸಂಚಿಕೆಗೆ ಅವರು, 37 ಲಕ್ಷ ರೂ.ವನ್ನು ಸಂಭಾವನೆಯಾಗಿ ಪಡೆದುಕೊಂಡರು.
2021ರಲ್ಲಿ ಬಂದ ʼಖತ್ರೋನ್ ಕೆ ಕಿಲಾಡಿ ಸೀಸನ್ 11ʼ ಗಾಗಿ ಅವರು ಪ್ರತಿ ಸಂಚಿಕೆಗೆ 49 ಲಕ್ಷ ಸಂಭಾವನೆ ಪಡೆದಿದ್ದರು. ಸೀಸನ್ 12 ಮತ್ತು 13 ಗಳಿಗೆ, ಅವರು ಪ್ರತಿ ಸಂಚಿಕೆಗೆ 50 ಲಕ್ಷ ಸಂಭಾವನೆ ಪಡೆದಿದ್ದರು.
ಇದೀಗ ಅವರು 14ನೇ ಸೀಸನ್ ಗಾಗಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿದೆ. ಈ ಬಾರಿಯ ಸೀಸನ್ ನಲ್ಲಿ ಅಭಿಷೇಕ್ ಕುಮಾರ್, ವಿವೇಕ್ ದಹಿಯಾ, ಮುನಾವರ್ ಫಾರೂಕಿ, ಮನ್ನಾರಾ ಚೋಪ್ರಾ ಮತ್ತು ಮನೀಶಾ ರಾಣಿ ಹಾಗೂ ಇತರರು ಸ್ಪರ್ಧಿಗಳಾಗಿ ಭಾಗಯಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…
BBK11: ಬೆನ್ನ ಹಿಂದೆ ನಡೆದ ಮಾತಿನ ಬಂಡವಾಳ ಬಹಿರಂಗ.. ಮೋಕ್ಷಿತಾ – ತ್ರಿವಿಕ್ರಮ್ ಟಾಕ್ ವಾರ್
BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
MUST WATCH
ಹೊಸ ಸೇರ್ಪಡೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.