Bigg Boss Kannada 11: ಶೀಘ್ರ ಬಿಗ್ ಬಾಸ್ ಪ್ರೋಮೊ ರಿಲೀಸ್; ಈ ಬಾರಿಯೂ ಕಿಚ್ಚನೇ ಕಿಂಗ್
Team Udayavani, Aug 18, 2024, 2:32 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -11(Bigg Boss Kannada-11) ಆರಂಭಕ್ಕೂ ಮುನ್ನ ಕುತೂಹಲ ಹೆಚ್ಚಾಗಿದೆ. ಈ ಬಾರಿ ಸ್ಪರ್ಧಿಗಳ ಜತೆ ನಿರೂಪಕ ಯಾರು ಎನ್ನುವ ಪ್ರಶ್ನೆಯೂ ವೀಕ್ಷಕರನ್ನು ಕಾಡಿದೆ.
ಆಯಾ ಭಾಷೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಹೆಚ್ಚಿನ ವೀಕ್ಷಕರಿದ್ದಾರೆ. ಬಿಗ್ ಬಾಸ್ ಮನೆಗೆ 100 ದಿನಗಳ ಕಾಲ ಕಿರುತೆರೆ, ಬೆಳ್ಳಿತೆರೆ, ಮಾಧ್ಯಮ, ರಾಜಕೀಯ, ಸಾಮಾಜಿಕ, ಸೋಶಿಯಲ್ ಮೀಡಿಯಾ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆಗೈದ, ವಿವಾದದ ಮೂಲಕ ಸುದ್ದಿಯಾದ ಒಂದಷ್ಟು ಜನರು ಸ್ಪರ್ಧಿಗಳಾಗಿ ಪ್ರವೇಶವನ್ನು ಪಡೆಯುತ್ತಾರೆ.
ಹಿಂದಿ ಬಿಗ್ ಬಾಸ್ ಬಳಿಕ ಕನ್ನಡ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೆಚ್ಚಿನ ವೀಕ್ಷಕರಿದ್ದಾರೆ. ಅದಕ್ಕೆ ಒಂದು ಮುಖ್ಯ ಕಾರಣವೆಂದರೆ ಅದು ಕಾರ್ಯಕ್ರಮವನ್ನು ನಡೆಸಿಕೊಡುವ ಕಿಚ್ಚ ಸುದೀಪ್ (Kiccha sudeep) ಎಂದರೆ ತಪ್ಪಾಗದು. ಸೀಸನ್ ಗಳು ಮುಂದುವರೆಯುತ್ತಿದ್ದಂತೆ ಕಿಚ್ಚ ಅವರ ನಿರೂಪಣಾ ಶೈಲಿಯೂ ಅಷ್ಟೇ ಅಂದವಾಗಿ ಮೂಡಿಬರುತ್ತಿದೆ.
ಆದರೆ ಈ ಬಾರಿ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಡೆಸಿಕೊಡುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇವರ ಬದಲಿದೆ ರಿಷಬ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ಇರುತ್ತಾರೆ ಎನ್ನುವ ಊಹಾಪೋಹಾಗಳು ಹರಿದಾಡಿದೆ.
ಇದೀಗ ಸದ್ದಿಲ್ಲದೆ ಬಿಗ್ ಬಾಸ್ ಕನ್ನಡ ಸೀಸನ್ -11ರ ಮೊದಲ ಪ್ರೋಮೊ ಶೂಟ್ ಆಗಿದ್ದು, ಕಿಚ್ಚ ಸುದೀಪ್ ಅದರಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಹಬ್ಬಿದ್ದ ವದಂತಿಗಳಿಗೆ ಬ್ರೇಕ್ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋಗೆ ಸಂಬಂಧಿಸಿದ ಕೆಲ ಫೋಟೋಗಳು ಹರಿದಾಡುತ್ತಿದೆ.
ಕಿಚ್ಚ ಸಖತ್ ಸ್ಟೈಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಇದೇ ಆಗಸ್ಟ್ ಕೊನೆ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ -11ರ ಪ್ರೋಮೋ ಝಲಕ್ ರಿವೀಲ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಯಾವಾಗ ಶೋ ಶುರು?:
ಬಿಗ್ ಬಾಸ್ ಕನ್ನಡ ಸೀಸನ್ -11ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಅಕ್ಟೋಬರ್ ಕೊನೆಯ ಅಥವಾ ಮೊದಲ ವಾರದಲ್ಲಿ ಹೊಸ ಸೀಸನ್ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಈ ನಡುವೆ ದೊಡ್ಮನೆಗೆ ಎಂಟ್ರಿ ಆಗುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸ್ಪರ್ಧಿಗಳು ಯಾರು?:
ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ ಎನ್ನುವ ದೂರದ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ ಸ್ಪರ್ಧಿಗಳು ಯಾರು ಎನ್ನುವುದರ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ʼಮಜಾಭಾರತʼ ಖ್ಯಾತಿಯ ರಾಘವೇಂದ್ರ, ಯೂಟ್ಯೂಬರ್ ವರ್ಷಾ ಕಾವೇರಿ, ನಟ ತ್ರಿವಿಕ್ರಮ್ ,‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯ, ತುಕಾಲಿ ಸಂತು ಪತ್ನಿ ಮಾನಸಾ, ಸುನೀಲ್ ರಾವ್, ಭವ್ಯಾ ಗೌಡ, ಮೋಕ್ಷಿತಾ ಪೈ, ರೀಲ್ಸ್ ರೇಷ್ಮಾ ಸೇರಿದಂತೆ ಇತರರ ಹೆಸರು ಕೂಡ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಲಿಸ್ಟ್ ನಲ್ಲಿ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.