Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್ ಮನೆಯ ಫೋಟೋಸ್ ವೈರಲ್
Team Udayavani, Sep 23, 2024, 12:57 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada-11) ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಮುಂದಿನ ವಾರದಿಂದಲೇ ದೊಡ್ಮನೆ ಆಟ ಅದ್ಧೂರಿ ಆಗಿಯೇ ಆರಂಭಗೊಳ್ಳಲಿದೆ.
ಕಿಚ್ಚ ಸುದೀಪ್ (Kiccha Sudeep) ಟಿಪ್ ಟಾಪ್ ಆಗಿಯೇ ಬಿಗ್ ಬಾಸ್ ಮನೆಯ ʼಕಿಂಗ್ʼ ಆಗಿ ಈ ಬಾರಿಯೂ ಕಾಣಿಸಿಕೊಳ್ಳಲಿದ್ದಾರೆ. ಅವರೇ ಶೋ ನಡೆಸಿಕೊಡಲಿದ್ದಾರೆ ಎನ್ನುವ ವಿಚಾರ ಬಹಿರಂಗವಾದ ಬಳಿಕ ಪ್ರೇಕ್ಷಕರ ಕುತೂಹಲ ಸೀಸನ್ -11ರ ಮೇಲೆ ಹೆಚ್ಚಾಗಿದೆ.
ಕಲರ್ಸ್ ಕನ್ನಡ ಕಾರ್ಯಕ್ರಮದ ಕುರಿತಾದ ಪ್ರೋಮೊ ಬಿಟ್ಟು ಕುತೂಹಲ ಹೆಚ್ಚಾಗಿಸಿದೆ. ಇತ್ತೀಚೆಗೆ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಸ್ವರ್ಗ – ನರಕದಲ್ಲಿರುವ ಲೋಕವನ್ನು ತೋರಿಸಲಾಗಿದೆ. ಪ್ರೋಮೋದಲ್ಲಿ ಸಂತಸ ಪಡುವ ಜನ ಒಂದು ಕಡೆಯಾದರೆ ಇನ್ನೊಂದೆಡೆ ನರಕದಲ್ಲಿನ ಕಷ್ಟವನ್ನು ತೋರಿಸಲಾಗಿದೆ.
“ಬೆಳಕು, ಸಂತಸ, ಸುಖ, ನೆಮ್ಮದಿ ಸ್ವರ್ಗ.. ಕತ್ತಲು, ನೋವು, ಕಷ್ಟ ಹಿಂಸೆ ನರಕ.. ಸ್ವರ್ಗದಲ್ಲಿರುವವರು ನರಕದಲ್ಲಿರಬಹುದು, ನರಕದಲ್ಲಿರುವವರು ಸ್ವರ್ಗದಲ್ಲಿರಬಹುದು. ಬೆನ್ನಿಗೆ ಚೂರಿ ಹಾಕುವವರು ಅಂಥ ಅನ್ಕೊಂಡವರು ಮುಂದೆ ಹೋಗಿ ನಿಮ್ಮ ಸ್ನೇಹಿತರಾಗಿರಬಹುದು.. ಸ್ನೇಹಿತರಾಗಿರುತ್ತಾರೆ ಅಂದೋರು ಮುಂದೆ ಹೋಗಿ.. ಇದು ಬಿಗ್ ಬಾಸ್‌ನ ಹೊಸ ಅಧ್ಯಾಯ ಸ್ವರ್ಗ, ನರಕ ಎರಡೂ ಇದೆ. ಎರಡರಲ್ಲೂ ಕಿಚ್ಚು ಅಷ್ಟೇ ಇದೆ..” ಎಂದು ಕಿಚ್ಚ ಹೇಳುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಆ ಮೂಲಕ ಕಾರ್ಯಕ್ರಮದಲ್ಲಿ ಈ ಬಾರಿ ಸಖತ್ ಟ್ವಿಸ್ಟ್ ಇರಲಿದೆ ಎನ್ನಲಾಗುತ್ತಿದೆ. ಸ್ವರ್ಗ – ನರಕದ ಕಾನ್ಸೆಪ್ಟ್ ರಿವೀಲ್ ಆದ ಬಳಿಕ ಬಿಗ್ ಬಾಸ್ ಕನ್ನಡ -11ರ ಹೊಸ ಮನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದು ಕಡೆ ಸ್ವರ್ಗದ ರೀತಿಯ ಮನೆ, ಇನ್ನೊಂದು ಕಡೆ ನರಕ ಲೋಕದ ಮನೆಯ ಫೋಟೋಗಳು ವೈರಲ್ ಆಗಿದ್ದು, ಇದು ಈ ಬಾರಿ ಬಿಗ್ ಬಾಸ್ ಮನೆಯ ಫೋಟೋವೆಂದು ಹೇಳಲಾಗುತ್ತಿದೆ. ಅನೇಕರು ಈ ಫೋಟೋ ಹಂಚಿಕೊಂಡಿದ್ದಾರೆ. ಕೆಲ ಬಿಗ್ ಬಾಸ್ ಅಪ್ಡೇಟ್ ಪೇಜ್ ಗಳು ಇದನ್ನು ಹಂಚಿಕೊಂಡಿದೆ.
ಆದರೆ ಕೆಲವರು ಇದು ನಕಲಿ ಫೋಟೋವೆಂದು ಹೇಳುತ್ತಿದ್ದಾರೆ. ಯಾವುದಕ್ಕೂ ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಶೋ ಆರಂಭದ ಬಳಿಕವಷ್ಟೇ ಮನೆಯ ಫೋಟೋ ಬಹಿರಂಗವಾಗಲಿದೆ.
ಕಳೆದ ಸೀಸನ್‌ನಲ್ಲಿ ಸಮರ್ಥರು ಮತ್ತು ಅಸಮರ್ಥರು ಎನ್ನುವ ಎರಡು ಗುಂಪುಗಳನ್ನು ಆರಂಭದಲ್ಲಿ ಮಾಡಲಾಗಿತ್ತು. ಆಟದಲ್ಲಿ ಸ್ಪರ್ಧಿಸಿ ಅಸಮರ್ಥರು ಸಮರ್ಥರಾಗಬೇಕಿತ್ತು. ಈ ಬಾರಿಯ ಸ್ವರ್ಗ – ನರಕದ ಕಾನ್ಸೆಪ್ಟ್ ಕೂಡ ಇದೇ ರೀತಿ ಇರಲಿದೆ ಎನ್ನಲಾಗುತ್ತಿದೆ.
ಇದೇ ಸೆ.29ರಂದು ಶೋ ಗ್ರ್ಯಾಂಡ್ ಪ್ರಿಮಿಯರ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.