OTT: ಈ ವಾರ ಸಾಲು ಸಾಲು ಮನರಂಜನೆ ಗ್ಯಾರೆಂಟಿ; ಓಟಿಟಿಗೆ ಬರಲಿವೆ ಹೊಸ ಸಿನಿಮಾ, ಸೀರಿಸ್
Team Udayavani, Mar 4, 2024, 3:29 PM IST
ಬೆಂಗಳೂರು: ಈ ವರ್ಷ ಸಿನಿವಲಯದಲ್ಲಿ ಈಗಾಗಲೇ ಹಲವು ಸಿನಿಮಾಗಳು ತೆರೆಕಂಡಿದೆ. ಇದರಲ್ಲಿ ಬಹುತೇಕ ಎಲ್ಲಾ ಸಿನಿರಂಗದಲ್ಲಿ ಕೆಲ ಸಿನಿಮಾಗಳು ಸದ್ದು ಮಾಡಿವೆ. ಥಿಯೇಟರ್ ನಲ್ಲಿ ಸದ್ದು ಮಾಡಿದ ಬಳಿಕ ಓಟಿಟಿಯಲ್ಲಿ ಸಿನಿಮಾಗಳು ಸ್ಟ್ರೀಮಿಂಗ್ ಆಗುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತವೆ.
ಸಿನಿಮಾ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತವೆ. ಈ ವಾರವೂ ಓಟಿಟಿ ವೇದಿಕೆಗಳು ಹಲವು ಸಿನಿಮಾಗಳು ತೆರೆ ಕಾಣಲಿವೆ. ಇಲ್ಲಿದೆ ನೋಡಿ ಅದರ ಪಟ್ಟಿ..
ಬ್ಯಾಚುಲರ್ ಪಾರ್ಟಿ: ಲೂಸ್ ಮಾದ ಯೋಗಿ, ದಿಗಂತ್ ಹಾಗೂ ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ʼಬ್ಯಾಚುಲರ್ ಪಾರ್ಟಿʼ ಇದೇ ಜನವರಿ 26 ರಂದು ರಿಲೀಸ್ ಆಗಿತ್ತು. ಸಿನಿಮಾ ಕಾಮಿಡಿ ವಿಚಾರವಾಗಿ ಪ್ರೇಕ್ಷಕರನ್ನು ನಗಿಸಿತು. ಆದರೆ ಹೆಚ್ಚು ಥಿಯೇಟರ್ ನಲ್ಲಿ ಉಳಿಯಲಿಲ್ಲ.
ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ ಈ ಸಿನಿಮಾವನ್ನು ಅಭಿಜಿತ್ ಮಹೇಶ್ ನಿರ್ದೇಶನ ಮಾಡಿದ್ದಾರೆ. ಮಾರ್ಚ್ 4 ರಿಂದ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಯಾತ್ರಾ -2: ಟಾಲಿವುಡ್ ನಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ʼಯಾತ್ರಾʼ ಸಿನಿಮಾದ ಸೀಕ್ವೆಲ್ ʼಯಾತ್ರಾ-2ʼ ಚುನಾವಣೆ ಸಮೀಪದಲ್ಲೇ ತೆರೆಕಂಡು ಒಂದಷ್ಟು ದಿನ ಥಿಯೇಟರ್ ನಲ್ಲಿ ಓಡಿತ್ತು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನವನ್ನಾಧರಿಸಿದ ಸಿನಿಮಾ ಹೆಚ್ಚು ದಿನ ಸಿನಿಮಾ ಮಂದಿರದಲ್ಲಿ ಇರಲಿಲ್ಲ. ಮಮ್ಮುಟ್ಟಿ ಮತ್ತು ಜೀವಾ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾ ಕೂಡ ಅಮೇಜಾನ್ ಪ್ರೈಮ್ ನಲ್ಲಿ ಮಾ. 8 ರಂದು ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ.
ಹನುಮಾನ್: ಈ ವರ್ಷ ಟಾಲಿವುಡ್ ಸಿನಿಮಾರಂಗದಲ್ಲಿ ದೊಡ್ಡ ಹಿಟ್ ಆದ ಸಿನಿಮಾಗಳಲ್ಲಿ ಕೇಳಿ ಬರುವ ಮೊದಲ ಹೆಸರು ಅಂದರೆ ಅದು ತೇಜಾ ಸಜ್ಜ ಅವರ ʼಹನುಮಾನ್ʼ. ಸಂಕ್ರಾಂತಿ ಹಬ್ಬದಂದು ತೆರೆಕಂಡು ಟಾಲಿವುಡ್ ಮಾತ್ರವಲ್ಲದೆ, ಪ್ಯಾನ್ ಇಂಡಿಯಾದಲ್ಲೂ ಸದ್ದು ಮಾಡಿದ ಈ ಸಿನಿಮಾವನ್ನು ಪ್ರಶಾಂತ್ ವರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಇದೇ ಮಾ. 8 ರಂದು ಜೀ 5 ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.
ಲಾಲ್ ಸಲಾಂ: ರಜಿನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜಿನಿಕಾಂತ್ ಒಂದಷ್ಟು ಗ್ಯಾಪ್ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟ ʼಲಾಲ್ ಸಲಾಂʼ ಸಿನಿಮಾ ಥಿಯೇಟರ್ ಗೆ ಬಂದು ಹೋದದ್ದೇ ಗೊತ್ತಾಗಲಿಲ್ಲ. ಅತಿಥಿ ಪಾತ್ರದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅವರೇ ಸಿನಿಮಾದಲ್ಲಿ ನಟಿಸಿದ್ದರೂ ಸಿನಿಮಾ ಅಷ್ಟಾಗಿ ಕಮಾಲ್ ಮಾಡಿಲ್ಲ. ನೆಟ್ ಫ್ಲಿಕ್ಸ್ ನಲ್ಲಿ ಇದೇ ಮಾ.8 ರಂದು ಸಿನಿಮಾ ಸ್ಟ್ರೀಮ್ ಆಗಲಿದೆ ಎನ್ನಲಾಗಿದೆ. ಆದರೆ ಅಧಿಕೃತ ದಿನಾಂಕ ಇನ್ನೂ ಪ್ರಕಟಗೊಂಡಿಲ್ಲ.
ಅನ್ವೇಷಿಪ್ಪಿನ್ ಕಂಡೆತ್ತುಮ್: (ಮಲಯಾಳಂ): ಟೊವಿನೋ ಥಾಮಸ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬಂದಿತ್ತು. ಫೆ. 9 ರಂದು ರಿಲೀಸ್ ಆಗಿದ್ದ ಈ ಸಿನಿಮಾ ಇದೇ ಮಾ. 8 ರಂದು ನೆಟ್‌ಫ್ಲಿಕ್ಸ್ ನಲ್ಲಿ ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.
ಮೇರಿ ಕ್ರಿಸ್ಮಸ್: ಇನ್ನು ಈ ವರ್ಷ ಬಾಲಿವುಡ್ ನಲ್ಲಿ ಸದ್ದು ಮಾಡಿದ ಮತ್ತೊಂದು ಸಿನಿಮಾವೆಂದರೆ ಅದು ವಿಜಯ್ ಸೇತುಪತಿ ಹಾಗೂ ಕತ್ರಿನಾ ಕೈಫ್ ಅವರ ʼಮೇರಿ ಕ್ರಿಸ್ಮಸ್ʼ. ಸಿನಿಮಾಕ್ಕೆ ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಕೇಳಿ ಬಂದಿತ್ತು. ಥ್ರಿಲ್ಲರ್ ಕಥೆಯನ್ನೊಳಗೊಂಡಿರುವ ಈ ಸಿನಿಮಾ ಇದೇ ಮಾ.8 ರಂದು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ ಎನ್ನಲಾಗಿದೆ.
ಓಟಿಟಿಯಲ್ಲಿ ರಿಲೀಸ್ ಆಗಲಿರುವ ಶೋಗಳು:
ಸೂಪರ್ ಸೆಕ್ಸ್ (ಮಾ.6) – ನೆಟ್ ಫ್ಲಿಕ್ಸ್
ಮಹಾರಾಣಿ ಸೀಸನ್ 3 (ಮಾರ್ಚ್ 7) – ಸೋನಿ ಲೈವ್
ದಿ ಜೆಂಟಲ್ಮೆನ್ (ಮಾರ್ಚ್ 7) – ನೆಟ್ ಫ್ಲಿಕ್ಸ್
ಡಮ್ಸೆಲ್ ( ಮಾರ್ಚ್ 8 ) – ನೆಟ್ ಫ್ಲಿಕ್ಸ್
ಶೋ ಟೈಮ್ (ಹಿಂದಿ), (ಮಾ.8) – ಡಿಸ್ನಿ + ಹಾಟ್ ಸ್ಟಾರ್
ದಿ ಸಿಗ್ನಲ್ (ಮಾ.7) – ನೆಟ್ ಫ್ಲಿಕ್ಸ್
ದಿ ಪ್ರೋಗ್ರಾಂ; ಕಾನ್ಸ್, ಕಲ್ಟ್ಸ್ ಅಂಡ್ ಕಿಡ್ನ್ಯಾಪಿಂಗ್- (ಮಾರ್ಚ್ 5) – ನೆಟ್ ಫ್ಲಿಕ್ಸ್
ಹನ್ನಾ ಗ್ಯಾಡ್ಸ್ಬಿಸ್ ಜೆಂಡರ್ ಅಜೆಂಡಾ (ಮಾರ್ಚ್ 5) – ನೆಟ್ ಫ್ಲಿಕ್ಸ್
ಅರಾ ಸಾನ್ ಜುವಾನ್: ದಿ ಸಬ್‌ಮೆರಿನ್ ಡಟ್ ಡಿಸ್ಸಪ್ಪೀರ್ (ಮಾ.7) – ನೆಟ್ ಫ್ಲಿಕ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.