Lawyer Jagadish: ಮತ್ತೆ ಬಿಗ್ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಎಂಟ್ರಿ..!
Team Udayavani, Nov 16, 2024, 2:44 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11ರ (Bigg Boss Kannada-11) ಮೂಲಕ ಕರುನಾಡಿನ ಜನಮನವನ್ನು ಗೆದ್ದ ಲಾಯರ್ ಜಗದೀಶ್ (Lawyer Jagadish) ಮತ್ತೆ ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಾರೆ.
ಹೌದು. ಬಿಗ್ ಬಾಸ್ ಮನೆಯಲ್ಲಿ ಎರಡು ವಾರಯಷ್ಟೇ ಇದ್ದ ಲಾಯರ್ ಜಗದೀಶ್ ಹೆಣ್ಮಕ್ಕಳ ಬಗ್ಗೆ ಅವಹೇಳನಕಾರಿ ಆಗಿ ಮಾತನಾಡಿದರು ಎನ್ನುವ ಕಾರಣಕ್ಕೆ ಆಚೆ ಬಂದಿದ್ದರು. ಆದರೆ ಅವರು ಬಿಗ್ ಬಾಸ್ ಮನೆಗೆ ಮತ್ತೆ ಬರಬೇಕೆನ್ನುವ ಮಾತುಗಳು ಅವರು ಆಚೆ ಬಂದಾಗಿನಿಂದ ಜೋರಾಗಿ ಕೇಳಿ ಬರುತ್ತಿದೆ.
ಜಗದೀಶ್ ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಬರಬೇಕು ಎಂದು ಅನೇಕರು ಕಮೆಂಟ್ ಮೂಲಕ ಈಗಲೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಜಗದೀಶ್ ಅನೇಕ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡಿ ಸದ್ದು ಮಾಡುತ್ತಿದ್ದಾರೆ.
ಈ ನಡುವೆ ಜಗದೀಶ್ ಅವರು ಮತ್ತೆ ಬಿಗ್ ಬಾಸ್ ವೇದಿಕೆಗೆ ಬರಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ. ಆದರೆ ಅವರು ಈ ಬಾರಿ ಹೋಗಲಿರುವುದು ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿ ಬಿಗ್ ಬಾಸ್‌ಗೆ.!
View this post on Instagram
ಜಗದೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್, ಅರ್ಷಾದ್ ವಾರ್ಸಿ. ಶಿಲ್ಪ ಶೆಟ್ಟಿ ಅವರ ಫೋಟೋವನ್ನು ಹಾಕಿ “ನಾನು ಹಿಂದಿ ಬಿಗ್ ಬಾಸ್‌ಗೆ ಕಾರ್ಯಕ್ರಮಕ್ಕೆ ಹೋದ್ರೆ ನಿಮ್ಮ ಬೆಂಬಲ ನನ್ನ ಜೊತೆ ಇರಬೇಕು” ಎಂದು ಬರೆದುಕೊಂಡಿದ್ದಾರೆ.
ಇದಲ್ಲದೆ ಹಿಂದಿ ಬಾಸ್ ಕಡೆಯಿಂದ ತಮಗೆ ಕರೆಬಂದ ವಿಚಾರದ ಬಗ್ಗೆ ಅವರು ಆಡಿರುವ ಮಾತಿನ ಆಡಿಯೋವೊಂದು ವೈರಲ್ ಆಗಿದೆ.
ವೈರಲ್ ಆಡಿಯೋದಲ್ಲಿ ಇರೋದೇನು?:
ಕರ್ನಾಟಕದ ಬಾಲಿವುಡ್ ಎಂಟ್ರಿ ನಮ್ಮ ಐಶ್ವರ್ಯಾ ರೈಯಿಂದ ಆಗಿದ್ದು. ಆ ನಂತರ ಶಿಲ್ಪ ಶೆಟ್ಟಿ, ಪ್ರಕಾಶ್ ರಾಜ್, ಸುದೀಪ್ ಈಗ ಅದೃಷ್ಟ ಕೂಡಿ ನಮಗೂ ಬರ್ತಾ ಇದೆ ಅನ್ನಿಸ್ತಾ ಇದೆ. ದೇವರು ನನಗೂ ಒಂದು ಅವಕಾಶ ಬಾಲಿವುಡ್ ನಲ್ಲಿ ಮಿಂಚೋಕೆ ಕೊಟ್ಟಿದ್ದಾನೆ. ಈ ಬಿಗ್ ಬಾಸ್ ಬಾಲಿವುಡ್ ಆಫರ್ ಗಿಂತ ಮುಂಚೆ ನನಗೆ ಮುಂಬಯಿಯಿಂದಲೇ ನನಗೆ ತುಂಬಾ ಜಾಹೀರಾತುಒಪ್ಪಂದ ಬಂತು. ಇದಕ್ಕೆ ನಾನು ಎಲ್ಲರಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ನನಗೆ ಹೆಣ್ಮಕ್ಕಳ ಬಗ್ಗೆ ಕೆಟ್ಟ ಭಾವನೆಗಳಿಲ್ಲ. ಆ ರೀತಿ ನಾನು ಅವರನ್ನು ಯಾವತ್ತೂ ನೋಡಿಲ್ಲ. ಅವರೆಲ್ಲ ನಮ್ಮ ಆಸ್ತಿ ಅವರನ್ನು ಕಾಪಾಡಿಕೊಳ್ಳೋದು ನಮ್ಮ ಕರ್ತವ್ಯವೆಂದಿದ್ದಾರೆ.
ಈಗ ನಿಮ್ಮ ಜಗ್ಗುದಾದ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಇಲ್ಲಿ ಬಿಗ್ ಬಾಸ್ ಕಥೆ ಸುದೀಪ್ ದಾದ ಜತೆ ಅಲ್ಲಿ ಬಿಗ್ ಬಾಸ್ ಕಥೆ ಸಲ್ಮಾನ್ ಖಾನ್ ಜತೆ. ಥ್ಯಾಂಕ್ಯೂ ಬಿಗ್ ಬಾಸ್ ಲವ್ ಯೂ ಆಲ್ ಎಂದು ಹೇಳಿದ್ದಾರೆ.
ಫೋನ್ ಆಡಿಷನ್ ಮುಗಿದಿದೆ. ಇದು ದೇವರ ಆರ್ಶೀವಾದ ನಿಮ್ಮೆಲ್ಲರ ಬೆಂಬಲವ ಇದು. ನನ್ನನ್ನಯ ಜನ ಬೆಳೆಸಿದ್ದಾರೆ ಎಲ್ಲರಿಗೂ ಥ್ಯಾಂಕ್ಯೂವೆಂದಿದ್ದಾರೆ.
ಸದ್ಯ ಜಗದೀಶ್ ಅವರು ಹಿಂದಿ ಬಿಗ್ ಬಾಸ್ ಸೀಸನ್ -18ಗೆ ಎಂಟ್ರಿ ಆಗುತ್ತಾರೆ ಎನ್ನುವ ಆಡಿಯೋ ವೈರಲ್ ಆಗಿದೆ. ಹಿಂದಿ ಬಿಗ್ ಬಾಸ್‌ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಜಗದೀಶ್ ಎಂಟ್ರಿ ಆಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kiccha Sudeep: ಬಿಗ್ ಬಾಸ್‌ಗೆ ಗುಡ್ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Bigg Boss Telugu 8: ಬಿಗ್‌ಬಾಸ್ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?
Mukesh Khanna; ‘ಶಕ್ತಿಮಾನ್’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು…
BBK11:ಒಬ್ಬರಲ್ಲ ಇಬ್ಬರು ಟಾಪ್ ಸ್ಪರ್ಧಿಗಳು ಎಲಿಮಿನೇಟ್;ವೀಕ್ಷಕರಿಗೆ ಶಾಕ್ ಕೊಟ್ಟ ಬಿಗ್ ಬಾಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.