BB18: ಬಿಗ್‌ಬಾಸ್‌ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ನಟ ಮಹೇಶ್‌ ಬಾಬು ಸಂಬಂಧಿ; ಯಾರೀಕೆ?

Team Udayavani, Sep 24, 2024, 2:00 PM IST

7

ಮುಂಬಯಿ: ಸಲ್ಮಾನ್‌ ಖಾನ್‌ (Salman Khan) ನಡೆಸಿಕೊಡುವ ಬಿಗ್‌ ಬಾಸ್‌ -18 (Bigg Boss) ಆರಂಭದ ದಿನಾಂಕವನ್ನು ಅಧಿಕೃತವಾಗಿ ಅನೌನ್ಸ್‌ ಮಾಡಲಾಗಿದೆ.

ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಹಲವು ಟ್ವಿಸ್ಟ್‌ ಗಳಿರಲಿವೆ. “ಭೂತ, ವರ್ತಮಾನ ಮತ್ತು ಭವಿಷ್ಯ”ದ ಸುತ್ತ ಬಿಗ್‌ ಬಾಸ್‌ ನಡೆಯಲಿದೆ. “ಬಿಗ್‌ ಬಾಸ್‌ ನೋಡಲಿದ್ದಾರೆ ಮನೆಯವರ ಭವಿಷ್ಯ, ಈಗ ಆಗಲಿದೆ ಸಮಯದ ತಾಂಡವ್”‌ ಎಂದು ಪ್ರೋಮೊದಲ್ಲಿ ತೋರಿಸಲಾಗಿದೆ.

ಶೋ ಆರಂಭದ ದಿನ ರಿವೀಲ್‌ ಆದ ಬಳಿಕ ಸ್ಪರ್ಧಿಗಳ ವಿಚಾರವೂ ಇಂಟರ್‌ ನೆಟ್‌ ಸದ್ದು ಮಾಡುತ್ತಿದೆ. ಕಿರುತೆರೆ ನಟ – ನಟಿಯರು, ಸೋಶಿಯಲ್‌ ಮೀಡಿಯಾ ಪ್ರಭಾವಿಗಳ ಹೆಸರು ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕೇಳಿ ಬರುತ್ತಿದೆ.

ಈ ಸಾಲಿನಲ್ಲಿ ದಕ್ಷಿಣ ಭಾರತದ ಖ್ಯಾತ ಮಹೇಶ್‌ ಬಾಬು (Mahesh Babu) ಅವರ ಕುಟುಂಬದ ಸದಸ್ಯೆಯೊಬ್ಬರು ಬಿಗ್‌ ಬಾಸ್‌ ಮನೆಗೆ ಹೋಗುತ್ತಾರೆ ಎನ್ನಲಾಗುತ್ತಿದೆ.

ದೊಡ್ಮನೆಗೆ ಶಿಲ್ಪಾ ಶಿರೋಡ್ಕರ್; ಯಾರೀಕೆ?: ಬಿಗ್‌ ಬಾಸ್‌ -18 ಮನೆಗೆ ಸ್ಪರ್ಧಿಯಾಗಿ ಹೋಗುವವರ ಸಾಲಿನಲ್ಲಿ ಕೇಳಿ ಬರುತ್ತಿರುವ ಆಸಕ್ತಿದಾಯಕ ಹೆಸರುಗಳಲ್ಲಿ ಶಿಲ್ಪಾ ಶಿರೋಡ್ಕರ್ ಅವರ ಹೆಸರು ಕೂಡ ಒಂದು. ಇವರು ನಟಿ ನಮ್ರತಾ ಶಿರೋಡ್ಕರ್ ಅವರ ಸಹೋದರಿ ಮತ್ತು ಸೂಪರ್‌ ಸ್ಟಾರ್ ಮಹೇಶ್ ಬಾಬು ಅವರ ಅತ್ತಿಗೆ ಆಗಿದ್ದಾರೆ.

80-90ರ ದಶಕದಲ್ಲಿ ಶಿಲ್ಪಾ ಅವರು ನಟಿಯಾಗಿ ಗುರುತಿಸಿಕೊಂಡಿದ್ದರು. ರಮೇಶ್ ಸಿಪ್ಪಿ ಅವರ ಭ್ರಷ್ಟಾಚಾರ್ (1989) ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಮತ್ತು ರೇಖಾ ಅವರೊಂದಿಗೆ ಅವರು ನಟಿಸಿದ್ದರು. ಈ ಸಿನಿಮಾದಲ್ಲಿ ಅವರು ಅಂಧ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದರು.

ಒಂದಷ್ಟು ವರ್ಷಗಳ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಂಡರು. 2013 ರಲ್ಲಿ ಜೀ ಟಿವಿಯ ʼಏಕ್ ಮುಟ್ಟಿ ಆಸ್ಮಾನ್ʼ ಸ್ಟಾರ್‌ ಪ್ಲಸ್‌ನ ʼಸಿಲ್ಸಿಲಾ ಪ್ಯಾರ್ ಕಾʼ, ಕಲರ್ಸ್ ಟಿವಿಯ ʼಸಾವಿತ್ರಿ ದೇವಿ ಕಾಲೇಜು & ಹಾಸ್ಪೆಟಲ್‌ʼ  ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

2020ರಲ್ಲಿ, ಶಿಲ್ಪಾ ʼಗನ್ಸ್ ಆಫ್ ಬನಾರಸ್ʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಮತ್ತೆ ಕಂಬ್ಯಾಕ್‌ ಮಾಡಿದರು.

ಶಿಲ್ಪಾ ಬಿಗ್‌ ಬಾಸ್‌ಗೆ ಹೋಗಲು ಓಕೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇವರೊಂದಿಗೆ ಇಶಾ ಕೋಪಿಕರ್, ಶೈನಿ ಅಹುಜಾ, ಗುರುಚರಣ್ ಸಿಂಗ್, ಅರ್ಜುನ್ ಬಿಜ್ಲಾನಿ, ಕರಣ್ ಪಟೇಲ್, ಸಮೀರಾ ರೆಡ್ಡಿ, ಸುರಭಿ ಜ್ಯೋತಿ, ಪೂಜಾ ಶರ್ಮಾ ಶೋಯೆಬ್ ಇಬ್ರಾಹಿಂ ಮತ್ತು ದಲ್‌ಜೀತ್ ಕೌರ್ , ಅಭಿಷೇಕ್ ಮಲ್ಹಾನ್, ಫೈಜ್, ದೀಪಿಕಾ ಆರ್ಯ, ಡಾಲಿ ಚಾಯ್ ವಾಲ, ಮ್ಯಾಕ್ಸ್‌ಟರ್ನ್(ಗೇಮರ್) ಮತ್ತು ತುಗೇಶ್ ಅವರ ಹೆಸರು ಕೂಡಾ ಸ್ಪರ್ಧಿಗಳ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿದೆ.

ಇದೇ ಅಕ್ಟೋಬರ್‌ 6 ರಿಂದ ಬಿಗ್‌ ಬಾಸ್‌ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಟಾಪ್ ನ್ಯೂಸ್

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ

muslim marriage

Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

ss

BBK11: ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಭಾವುಕರಾದ ಸ್ಪರ್ಧಿಗಳು.!

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

BBK11: ನಿನ್ನೆ ಅಣ್ಣಾ ಎಂದು ಅತ್ತಿದ್ದ ಚೈತ್ರಾ, ಇಂದು ಶಿಶಿರ್‌ ಬೆನ್ನಿಗೆ ಚೂರಿ ಹಾಕಿದ್ರಾ?

BBK11: ನಿನ್ನೆ ಅಣ್ಣಾ ಎಂದು ಅತ್ತಿದ್ದ ಚೈತ್ರಾ, ಇಂದು ಶಿಶಿರ್‌ ಬೆನ್ನಿಗೆ ಚೂರಿ ಹಾಕಿದ್ರಾ?

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

Ramalinga reddy 2

Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ

1-rewww

B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.