Web series: 8 ನಿರ್ದೇಶಕರು,‌ 9 ಎಪಿಸೋಡ್‌ ‘ಮನೋರಥಂಗಳ್’ನಲ್ಲಿ ಒಂದಾದ ಸೌತ್‌ ದಿಗ್ಗಜರು

Team Udayavani, Jul 16, 2024, 2:30 PM IST

15

ಕೊಚ್ಚಿ: ಮಾಲಿವುಡ್‌ (Mollywood) ಚಿತ್ರರಂಗ ಈ ವರ್ಷದ ಕೆಲವೇ ತಿಂಗಳಿನಲ್ಲಿ ಸಾವಿರ ಕೋಟಿ ಗಳಿಕೆ ಕಂಡಿದೆ. ತೆರೆಕಂಡ ಸಿನಿಮಾಗಳು ಕೋಟಿ ಕೋಟಿ ಗಳಿಕೆ ಕಂಡಿದೆ.

‘ಆಡುಜೀವಿತಂ’, ‘ಮಂಜುಮೇಲ್ ಬಾಯ್ಸ್’, ‘ಅನ್ವೆಶಿಪಿನ್ ಕಂಡೆತುಂ’, ‘ಪ್ರೇಮಲು’, ‘ವರ್ಷಂಗಲ್ಕ್ಕು ಶೇಷಮ್’, ‘ಬ್ರಹ್ಮಯುಗಂ’ ಹಾಗೂ ‘ಆವೇಶಂʼ.. ಮಾಲಿವುಡ್‌ ಬಾಕ್ಸ್‌ ಆಫೀಸ್‌ ನಲ್ಲಿ ಕೋಟಿ ಕೋಟಿ ಗಳಿಕೆ ಕಂಡು ದಾಖಲೆ ಬರೆದಿದೆ.

ಒಂದೇ ಪ್ರಾಜೆಕ್ಟ್‌ ಚಿತ್ರರಂಗದ ಸ್ಟಾರ್‌ ಗಳೆಲ್ಲ ಜೊತೆಯಾಗಿ ಕಾಣಿಸಿಕೊಂಡರೆ ಹೇಗೆ? ಹೀಗೊಂದು ಪ್ರಾಜೆಕ್ಟ್‌ ಮಾಲಿವುಡ್‌ ಬರುತ್ತಿದೆ. ಮಾಲಿವುಡ್‌ ನಲ್ಲಿ ಸಿನಿಮಾಗಳು ಮಾತ್ರವಲ್ಲದೆ, ವೆಬ್‌ ಸಿರೀಸ್‌ ಗಳು ವಿಭಿನ್ನ ಕಥಾಹಂದರದಲ್ಲಿ ಬರುತ್ತದೆ.

8 ಜನ ನಿರ್ದೇಶಕರ, 9 ಕಥೆಗಳ್ಳುಳ ‘ಮನೋರಥಂಗಳ್’ (Manorathangal) ಎನ್ನುವ ಆಂಥಾಲಜಿ ವೆಬ್ ಸಿರೀಸ್‌ (Anthology Web Series) ಮಾಲಿವುಡ್‌ ನಲ್ಲಿ ಬರುತ್ತಿದೆ. ಈ ಸಿರೀಸ್ ನ ವಿಶೇಷತೆಯೆಂದರೆ ಇದರಲ್ಲಿ ಬಹುತೇಕ ಮಾಲಿವುಡ್‌ ಎಲ್ಲಾ ಸ್ಟಾರ್‌ಗಳು ನಟಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಮತ್ತು ಚಿತ್ರಕಥೆಗಾರ-ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರು ಬರೆದ ಕಥೆಗಳನ್ನು ಆಧರಿಸಿ ಈ ಸಿರೀಸ್‌ ಬರುತ್ತಿದೆ.

ದಕ್ಷಿಣ ಭಾರತದ ದಿಗ್ಗಜರು ಈ ಸಿರೀಸ್‌ ಬೇರೆ ಬೇರೆ ಕಥೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್, ಮೋಹನ್ ಲಾಲ್,(Mohanlal), ಮಮ್ಮುಟಿ (Mammootty), ಫಾಹದ್ ಫಾಸಿಲ್(Fahadh Faasil) ಮುಂತಾದ ಮಾಲಿವುಡ್‌ ಸೂಪರ್‌ ಸ್ಟಾರ್‌ ಗಳು ನಟಿಸಿದ್ದಾರೆ.

ಇವರಷ್ಟೇ ಅಲ್ಲದೆ ಪಾರ್ವತಿ ತಿರುವೋತು, ಮತ್ತು ಮಧು, ಬಿಜು ಮೆನನ್, ಇಶಿತ್ ಯಾಮಿಮಿ, ಅಪರ್ಣಾ ಬಾಲಮುರಳಿ, ನದಿಯಾ ಮೊಯ್ದು, ಆನ್ ಆಗಸ್ಟಿನ್, ದುರ್ಗಾ ಕೃಷ್ಣ, ಆಸಿಫ್ ಅಲಿ, ಇಂದ್ರಜಿತ್ ಸುಕುಮಾರನ್, ಇಂದ್ರನ್ಸ್ ಮತ್ತು ಸಿದ್ದಿಕ್ ಮೊದಲಾದವರೂ ನಟಿಸಿದ್ದಾರೆ.

ಒಟ್ಟು 9 ಕಥೆಗಳಲ್ಲಿ ಪ್ರಿಯಾದರ್ಶನ್‌ ಅವರು 2 ಎಪಿಸೋಡ್‌ ಗಳನ್ನು ನಿರ್ದೇಶನ ಮಾಡಿದ್ದು,  ಶ್ಯಾಮ್ ಪ್ರಸಾದ್, ಅಶ್ವತಿ ವಿ ನಾಯರ್, ಮಹೇಶ್ ನಾರಾಯಣನ್, ರಂಜಿತ್, ಸಂತೋಷ್ ಶಿವನ್ ಮತ್ತು ರತೀಶ್ ಅಂಬಟ್, ಜಯರಾಜನ್ ನಾಯರ್ ಇತರೆ ಎಪಿಸೋಡ್‌ ಗಳನ್ನು ಕಟ್ಟಿಕೊಟ್ಟಿದ್ದಾರೆ.

ಎಂಟಿ ವಾಸುದೇವನ್ ನಾಯರ್ ಅವರ ಹುಟ್ಟುಹಬ್ಬದಂದು ‘ಮನೋರಥಂಗಳ್’ ಟ್ರೇಲರ್‌ ರಿಲೀಸ್‌ ಆಗಿದೆ. ಕಮಲ್‌ ಹಾಸನ್‌ ಅವರು ಕಥೆ ಹೇಳುವ ನಿರೂಪಕನಂತೆ ಕಾಣಿಸಿಕೊಂಡರೆ, ಫಾಹದ್‌ ಫಾಸಿಲ್‌, ಮಮ್ಮುಟ್ಟಿ ಹಾಗೂ ಮೋಹನ್‌ ಲಾಲ್‌ ಕಥೆಯ ಪ್ರಮುಖ ಪಾತ್ರದದಲ್ಲಿ ಕಾಣಿಸಿಕೊಂಡಿದ್ದಾರೆ.

ಆಗಸ್ಟ್‌ 15ರಿಂದ ಜೀ5 ನಲ್ಲಿ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಈ ಸಿರೀಸ್‌ ಸ್ಟ್ರೀಮ್‌ ಆಗಲಿದೆ.

ಟಾಪ್ ನ್ಯೂಸ್

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

1-test

Save Test Cricket; ಟೆಸ್ಟ್‌  ಕ್ರಿಕೆಟ್‌ ಉಳಿಸಲು ಐಸಿಸಿ ನಿಧಿ ಯೋಜನೆ

1-pkk

Kannadigas in Paralympics: ಮತ್ತೆ ಮಂದಹಾಸ ಬೀರಲಿ ಸುಹಾಸ್‌

office- bank

Australia: ಕೆಲಸದ ಅವಧಿ ಬಳಿಕ ಬಾಸ್‌ ನೌಕರರ ಮಧ್ಯೆ ಸಂಪರ್ಕ ಇಲ್ಲ

Revanna

Sexual assault on women: ರೇವಣ್ಣ , ಪ್ರಜ್ವಲ್‌ ಲೈಂಗಿಕ ಕಿರುಕುಳ ನಿಜ: ಚಾರ್ಜ್‌ಶೀಟ್‌

Governer

Governer Vs Government: 11 ಮಸೂದೆ ವಾಪಸ್‌; ಕಾಂಗ್ರೆಸ್‌ ಕೆಂಡಾಮಂಡಲ

Sri-Krishna-2

Sri Krishna Story: ಶ್ರೀ ಕೃಷ್ಣಜನ್ಮಾಷ್ಟಮಿ ವಿಶೇಷ; ಜಗದೊಡೆಯನ ಬಾಲಲೀಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nirmal Benny: ಹೃದಯಾಘಾತದಿಂದ ಕೊನೆಯುಸಿರೆಳೆದ ಮಲಯಾಳಂ ನಟ ನಿರ್ಮಲ್‌ ಬೆನ್ನಿ

Nirmal Benny: ಹೃದಯಾಘಾತದಿಂದ ಕೊನೆಯುಸಿರೆಳೆದ ಮಲಯಾಳಂ ನಟ ನಿರ್ಮಲ್‌ ಬೆನ್ನಿ

Maharaja Movie: ಓಟಿಟಿಯಲ್ಲಿ ಹೊಸ ದಾಖಲೆ ಬರೆದ ವಿಜಯ್‌ ಸೇತುಪತಿ ʼಮಹಾರಾಜʼ

Maharaja Movie: ಓಟಿಟಿಯಲ್ಲಿ ಹೊಸ ದಾಖಲೆ ಬರೆದ ವಿಜಯ್‌ ಸೇತುಪತಿ ʼಮಹಾರಾಜʼ

Spirit Movie: ಪ್ರಭಾಸ್‌ ʼಸ್ಪಿರಿಟ್‌ʼನಲ್ಲಿ ನೆಗೆಟಿವ್‌ ರೋಲ್‌ಗೆ ಖ್ಯಾತ ನಟಿ ತ್ರಿಷಾ?

Spirit Movie: ಪ್ರಭಾಸ್‌ ʼಸ್ಪಿರಿಟ್‌ʼನಲ್ಲಿ ನೆಗೆಟಿವ್‌ ರೋಲ್‌ಗೆ ಖ್ಯಾತ ನಟಿ ತ್ರಿಷಾ?

rape

Malayalam ಚಿತ್ರರಂಗದಲ್ಲಿ ನಟಿಯರಿಗೆ ವ್ಯಾಪಕ ಲೈಂಗಿಕ ಕಿರುಕುಳ: ಏನಿದು ವರದಿ?

Kollywood: ರಜಿನಿಕಾಂತ್‌ ʼವೆಟ್ಟೈಯನ್‌ʼ ರಿಲೀಸ್‌ ಡೇಟ್‌ ಔಟ್;‌ ʼಕಂಗುವʼ ಜತೆ ಕ್ಲ್ಯಾಶ್

Kollywood: ರಜಿನಿಕಾಂತ್‌ ʼವೆಟ್ಟೈಯನ್‌ʼ ರಿಲೀಸ್‌ ಡೇಟ್‌ ಔಟ್;‌ ʼಕಂಗುವʼ ಜತೆ ಕ್ಲ್ಯಾಶ್

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

1-test

Save Test Cricket; ಟೆಸ್ಟ್‌  ಕ್ರಿಕೆಟ್‌ ಉಳಿಸಲು ಐಸಿಸಿ ನಿಧಿ ಯೋಜನೆ

1-pkk

Kannadigas in Paralympics: ಮತ್ತೆ ಮಂದಹಾಸ ಬೀರಲಿ ಸುಹಾಸ್‌

office- bank

Australia: ಕೆಲಸದ ಅವಧಿ ಬಳಿಕ ಬಾಸ್‌ ನೌಕರರ ಮಧ್ಯೆ ಸಂಪರ್ಕ ಇಲ್ಲ

Revanna

Sexual assault on women: ರೇವಣ್ಣ , ಪ್ರಜ್ವಲ್‌ ಲೈಂಗಿಕ ಕಿರುಕುಳ ನಿಜ: ಚಾರ್ಜ್‌ಶೀಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.