‘Mirzapurʼ ಸೀಸನ್ -3 ಅನೌನ್ಸ್: ʼಗುಡ್ಡು ಭಯ್ಯಾʼನನ್ನು ನೋಡಿ ಥ್ರಿಲ್ ಆದ ಫ್ಯಾನ್ಸ್
Team Udayavani, Mar 20, 2024, 12:53 PM IST
ಮುಂಬಯಿ: ಭಾರತದ ವೆಬ್ ಸಿರೀಸ್ ಲೋಕದಲ್ಲಿ ಹೊಸ ಬಗೆಯ ಸಂಚಲನ ಸೃಷ್ಟಿಸಿದ ʼಮಿರ್ಜಾಪುರ್ʼ ಸೀಸನ್ -3 ಶೀಘ್ರದಲ್ಲಿ ಬರುವುದಾಗಿ ಅಮೇಜಾನ್ ಪ್ರೈಮ್ ಅನೌನ್ಸ್ ಮಾಡಿದೆ.
ಮುಂಬಯಿಯಲ್ಲಿ ನಡೆದ ಅಮೇಜಾನ್ ಪ್ರೈಮ್ ಕಾರ್ಯಕ್ರಮದಲ್ಲಿ ಶೀಘ್ರದಲ್ಲಿ ಓಟಿಟಿಗೆ ಬರಲಿರುವ ವೆಬ್ ಸಿರೀಸ್ ಹಾಗೂ ಶೋಗಳನ್ನು ಅನೌನ್ಸ್ ಮಾಡಲಾಗಿದೆ.
2018 ರಲ್ಲಿ ʼಮಿರ್ಜಾಪುರ್ʼ ಮೊದಲ ಸೀಸನ್ ಬಂದಿತ್ತು. ಆರಂಭದಿಂದಲೇ ಭರ್ಜರಿ ವೀಕ್ಷಣೆ ಕಂಡಿದ್ದ ʼಮೀರ್ಜಾಪುರ್ʼ ಅಪರಾಧ ಜಗತ್ತಿನ ಭೀಕರತೆಯನ್ನು ತೆರದಿಟ್ಟಿತ್ತು. ಅಲಿ ಫಜಲ್ ಅವರ ʼಗುಡ್ಡು ಭಯ್ಯಾʼ ಹಾಗೂ ಪಂಕಜ್ ತ್ರಿಪಾಠಿ ಅವರ ʼಕಾಲೀನ್ ಭಯ್ಯಾʼ ಪಾತ್ರ ಅಪಾರ ಮಂದಿಯ ಗಮನ ಸೆಳೆದಿತ್ತು. ಈ ಪಾತ್ರದ ಬಳಿಕ ಅವರ ಅಭಿನಯಕ್ಕೆ ಬಹುತೇಕರು ಫಿದಾ ಆಗಿದ್ದರು. ಮೊದಲ ಸೀಸನ್ ಬಳಿಕ ಎರಡನೇ ಸೀಸನ್ ಗೆ ಬೇಡಿಕೆ ಹೆಚ್ಚಾಗಿತ್ತು. 2020 ರಲ್ಲಿ ಎರಡನೇ ಸೀಸನ್ ಬಂದಿತ್ತು. ಇದಾದ ಬಳಿಕ ನಾಲ್ಕು ವರ್ಷದ ಬಳಿಕ ಇದೀಗ ಮೂರೆನೇ ಸೀಸನ್ ಶೀಘ್ರದಲ್ಲಿ ಬರಲಿದೆ ಎಂದು ಅಮೇಜಾನ್ ಪ್ರೈಮ್ ಅನೌನ್ಸ್ ಮಾಡಿದೆ.
ಇದನ್ನೂ ಓದಿ: Kanguva Teaser ರಿಲೀಸ್: ಯುದ್ಧರಂಗದಲ್ಲಿ ಗಮನ ಸೆಳೆದ ಭಯಾನಕ ದೃಶ್ಯ ವೈಭವ
ಅನೌನ್ಸ್ ಮೆಂಟ್ ಟೀಸರ್ ನಲ್ಲಿ ಪಂಕಜ್ ತ್ರಿಪಾಠಿ, ಅಲಿ ಫಜಲ್, ವಿಜಯ್ ವರ್ಮಾ ಕಾಣಿಸಿಕೊಂಡಿದ್ದಾರೆ. ಕ್ರೈಮ್ ಲೋಕದ ಹೊಸ ಅಧ್ಯಾಯವನ್ನು ʼಮೀರ್ಜಾಪುರ್-3ʼ ಹೇಳಲಿದೆ.
ಗಲಭೆ ನಡೆದ ಸನ್ನಿವೇಶದ ಫೋಟೋವೊಂದನ್ನು ಪೋಸ್ಟರ್ ಆಗಿ ಹಂಚಿಕೊಳ್ಳಲಾಗಿದೆ.
ಪಂಕಜ್ ತ್ರಿಪಾಠಿ ಅಲಿ ಫಜಲ್, ಶ್ವೇತಾ ತ್ರಿಪಾ, ರಸಿಕ ದುಗಲ್, ವಿಜಯ್ ವರ್ಮಾ, ಹರ್ಷಿತಾ ಗೌರ್, ಅಂಜಮನ್ ಶರ್ಮಾ ಮುಂತಾದವರು ಈ ಸೀಸನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿ ಸೀಸನ್ -3 ಬರಲಿದೆ ಎಂದು ಪ್ರೈಮ್ ಹೇಳಿದೆ.
ʼಮೀರ್ಜಾಪುರ್ -3ʼ ಅನೌನ್ಸ್ ಆದ ಬಳಿಕ ʼಗುಡ್ಡು ಭಯ್ಯಾʼ ನಿಗೆ ಸೋಶಿಯಲ್ ಮೀಡಿಯಾದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.