Bigg Boss Telugu 8: ಬಿಗ್‌ಬಾಸ್ ತೆಲುಗು ಗೆದ್ದ ಮೈಸೂರಿನ ಹುಡುಗ: ಯಾರು ಈ ನಿಖಿಲ್?
ಒಂದು ದಿನಕ್ಕೆ ನಿಖಿಲ್ ಪಡೆಯುತ್ತಿದ್ದ ಸಂಭಾವನೆ ಎಷ್ಟು?
Team Udayavani, Dec 16, 2024, 12:32 PM IST
ಹೈದರಾಬಾದ್: ಬಿಗ್ ಬಾಸ್ ತೆಲುಗು ಸೀಸನ್ -8 (Bigg Boss Telugu Season 8) ರ ಫಿನಾಲೆ ಕಲರ್‌ಫುಲ್ ಕಾರ್ಯಕ್ರಮಗಳ ಮೂಲಕ ಮುಕ್ತಾಯ ಕಂಡಿದೆ.
ನಾಗಾರ್ಜುನ್ (Nagarjuna) ನಡೆಸಿಕೊಡುವ ಬಿಗ್ ಬಾಸ್ ತೆಲುಗು ಕಾರ್ಯಕ್ರಮದ ಫಿನಾಲೆ ಮುಖ್ಯ ಅತಿಥಿಯಾಗಿ ನಟ ರಾಮ್ ಚರಣ್ (Actor Ram Charan) ಭಾಗಿಯಾಗಿದ್ದು, ಅವರೇ ವಿಜೇತರ ಹೆಸರನ್ನು ಘೋಷಿಸಿ ಟ್ರೋಫಿಯನ್ನು ನೀಡಿದ್ದಾರೆ.
ವೀಕ್ಷಕರಿಗೆ ಸಾಕಷ್ಟು ಟ್ವಿಸ್ಟ್ ಗಳ ಮೂಲಕ ಕುತೂಹಲ ಹುಟ್ಟಿಸಿ ವಿಜೇತರ ಹೆಸರನ್ನು ಅನೌನ್ಸ್ ಮಾಡಲಾಗಿದೆ. ವಿಜೇತರಾಗಿ ಕರ್ನಾಟಕ ಮೂಲದ ನಿಖಿಲ್ ಮಳಿಯಕ್ಕಲ್ (Actor Nikhil Maliyakkal) ಹೊರಹೊಮ್ಮಿದ್ದಾರೆ.
ನಿಖಿಲ್ ಮಳಿಯಕ್ಕಲ್ , ಗೌತಮ್ ಕೃಷ್ಣ, ನಬೀಲ್, ಪ್ರೇರಣಾ, ಅವಿನಾಶ್ ಟಾಪ್ 5 ಫೈನಾಲಿಸ್ಟ್ ಆಗಿದ್ದರು. ಈ ಪೈಕಿ ಟಾಪ್ 2 ಆಗಿ ನಿಖಿಲ್ ಮಳಿಯಕ್ಕಲ್ , ಗೌತಮ್ ಕೃಷ್ಣ ಉಳಿದಿದ್ದರು.
ಫೈನಲಿಸ್ಟ್‌ನಲ್ಲಿ ಒಬ್ಬರು 55 ಲಕ್ಷ ಬಹುಮಾನದ ಮೊತ್ತವನ್ನು ಆಯ್ಕೆ ಮಾಡಬಹುದು ಇನ್ನೊಬ್ಬರು ಟ್ರೋಫಿ ಮತ್ತು ಕಾರನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎನ್ನುವ ಆಫರ್ ನೀಡಲಾಗಿತ್ತು. ಆದರೆ ಇದನ್ನು ಇಬ್ಬರು ನಿರಾಕರಿಸಿದರು. ಅಂತಿಮವಾಗಿ ನಿಖಿಲ್ ಮಳಿಯಕ್ಕಲ್ ಅವರನ್ನು ವಿನ್ನರ್ ಎಂದು ಘೋಷಿಸಲಾಯಿತು. ರಾಮ್ ಚರಣ್ ಅವರು ಟ್ರೋಫಿಯನ್ನು ನೀಡಿ ಅಭಿನಂದಿಸಿದ್ದಾರೆ.
ಸಿಕ್ಕ ಮೊತ್ತವೆಷ್ಟು?
ನಿಖಿಲ್ ಅವರಿಗೆ 55 ಲಕ್ಷ ರೂ. ಬಹುಮಾನ ಸಿಕ್ಕಿದ್ದು. ಇದರೊಂದಿಗೆ ಮಾರುತಿ ಸುಜುಕಿ ಡಿಜೈರ್ ಕಾರನ್ನು ನೀಡಲಾಗಿದೆ.
ಯಾರು ಈ ನಿಖಿಲ್? ಪಡೆದ ಸಂಭಾವನೆ ಎಷ್ಟು?: ನಿಖಿಲ್ ಅವರು ಆರಂಭದಿಂದಲೂ ಬಿಗ್ ಬಾಸ್ ಮನೆಯಲ್ಲಿ ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿದ್ದರು. ದೊಡ್ಮನೆಯಲ್ಲಿ ಅನೇಕ ಸವಾಲು – ಸಂಕಷ್ಟವನ್ನು ಎದುರಿಸಿ ಅವರು ಫಿನಾಲೆವರೆಗೂ ಬಂದು ಟ್ರೋಫಿ ಗೆದ್ದಿದ್ದಾರೆ.
ನಿಖಿಲ್ ಬಿಗ್ ಬಾಸ್ ಮನೆಯಲ್ಲಿ ದಿನಕ್ಕೆ 32,143 ರೂ ಪಡೆಯುತ್ತಿದ್ದರು. ವಾರಕ್ಕೆ 2.25 ಲಕ್ಷ ರೂ. ನಿಖಿಲ್ ಸಂಭಾವನೆಯಾಗಿ ಪಡೆಯುತ್ತಿದ್ದರು. ಒಟ್ಟು 33 ಲಕ್ಷ ರೂಪಾಯಿಯನ್ನು ಅವರು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ವರದಿಯಾಗಿದೆ.
ಮೂಲತಃ ಕರ್ನಾಟಕದ ಮೈಸೂರಿನವರಾದ ನಿಖಿಲ್ ಹುಟ್ಟಿದ್ದು ಜೂನ್ 28, 1997 ರಂದು. ಮೈಸೂರಿನ ಬಾಡೆನ್ ಪೊವೆಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಣವನ್ನು ಪಡೆದ ಅವರು ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದರು. ಮನರಂಜನಾ ಉದ್ಯಮಕ್ಕೆ ಪ್ರವೇಶಿಸುವ ಮೊದಲು, ಅವರು ಖಾಸಗಿ ಕಂಪನಿಗಳಲ್ಲಿ ಬ್ಯುಸಿನೆಸ್ ಡೆವಲಂಪ್ಮೆಂಟ್ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದರು.
ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಕೆಲಸ ಮಾಡಿರುವ ನಿಖಿಲ್. 2016 ರಲ್ಲಿ ತೆರೆಕಂಡ ಕನ್ನಡದ ʼಊಟಿʼ ಎನ್ನುವ ಸಿನಿಮಾದ ಮೂಲಕ ನಟನಾ ವೃತ್ತಿ ಜೀವನಕ್ಕೆ ಕಾಲಿಟ್ಟರು. ʼಊಟಿʼಯಲ್ಲಿ ನಿಖಿಲ್ ಪೋಷಕ ಪಾತ್ರವನ್ನು ಮಾಡಿದ್ದರು.
ಇದಾದ ಬಳಿಕ ಕನ್ನಡದ ʼಮನೆಯೇ ಮಂತ್ರಾಲಯʼ ಎನ್ನುವ ಧಾರಾವಾಹಿಯಲ್ಲಿ ಸಣ್ಣ ಪಾತ್ರವೊಂದನ್ನು ಮಾಡಿದ್ದರು. ಇದಾದ ನಂತರ ತೆಲುಗು ಕಿರುತೆರೆಗೆ ಕಾಲಿಟ್ಟ ಅವರು ʼಗೋರಿಂಟಾಕುʼ ಎನ್ನುವ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಇಲ್ಲಿಂದ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತದೆ. ʼಅಮ್ಮಕು ತೇಲಿಯನಿ ಕೊಯಿಲಮ್ಮʼ ಧಾರಾವಾಹಿಯಲ್ಲಿ ಅಭಿನಯಿಸುತ್ತಾರೆ.
ಕಿರುತೆರೆಯಲ್ಲಿ ಮಿಂಚುತ್ತಿರುವ ನಿಖಿಲ್ ಅವರಿಗೆ ಬಿಗ್ ಬಾಸ್ ಒಂದು ದೊದ್ಡ ವೇದಿಕೆಯಾಗಿತ್ತು. ತನ್ನ ವ್ಯಕ್ತಿತ್ವದಿಂದಾಗಿ ವೀಕ್ಷಕರ ಮನಗೆದ್ದ ನಿಖಿಲ್ ಬಿಗ್ ಬಾಸ್ ತೆಲುಗು ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ನಿಖಿಲ್ ಅವರನ್ನು ವಿಜೇತರಾಗಿ ನೋಡಬೇಕೆನ್ನುವ ವೀಕ್ಷಕರ ಆಸೆ ನೆರವೇರಿದೆ.
ರನ್ನರ್ ಅಪ್ ಆಗಿರುವ ಗೌತಮ್ ಕೃಷ್ಣ ವೈಲ್ಡ್ ಕಾರ್ಡ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಆಗಿದ್ದರು. ಈ ಹಿಂದಿನ ಸೀಸನ್ (ಬಿಗ್ ಬಾಸ್ -7) ನಲ್ಲಿ ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Mukesh Khanna; ‘ಶಕ್ತಿಮಾನ್’ ಹಕ್ಕು ಮಾರಿದ್ರೆ ಅದು ಡಿಸ್ಕೋ ಡ್ರಾಮಾ ಆಗ್ತಿತ್ತು…
BBK11:ಒಬ್ಬರಲ್ಲ ಇಬ್ಬರು ಟಾಪ್ ಸ್ಪರ್ಧಿಗಳು ಎಲಿಮಿನೇಟ್;ವೀಕ್ಷಕರಿಗೆ ಶಾಕ್ ಕೊಟ್ಟ ಬಿಗ್ ಬಾಸ್
BBK11: ರಜತ್ – ಧನರಾಜ್ ಫೈಟ್.. ರಜತ್‌ರನ್ನು ಪಂಜರದೊಳಗೆ ಹಾಕಿ ಶಿಕ್ಷೆ ನೀಡಿದ ಕಿಚ್ಚ
ಮತ್ತೆ ಬರುತ್ತಿದೆ ಸರಿಗಮಪ; ಮತ್ತೆ ತೀರ್ಪುಗಾರರಾಗಿ ಬಂದ ರಾಜೇಶ್ ಕೃಷ್ಣನ್
MUST WATCH
ಹೊಸ ಸೇರ್ಪಡೆ
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Sandalwood: ‘ಕುಲದಲ್ಲಿ ಕೀಳ್ಯಾವುದೋ’ ಆಡಿಯೋ ಮಾರಾಟ
Darshan: ಜಾಮೀನು ಹಿನ್ನೆಲೆ: ಮತ್ತೆ ಕೋರ್ಟ್‌ಗೆ ಹಾಜರಾದ ದರ್ಶನ್
ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.