Bigg Boss ಗೆದ್ದ ಪಲ್ಲವಿ ಪ್ರಶಾಂತ್ ವಿರುದ್ದ ಜಾಮೀನು ರಹಿತ ಕ್ರಿಮಿನಲ್ ಕೇಸ್ ದಾಖಲು
Team Udayavani, Dec 20, 2023, 3:57 PM IST
ಹೈದರಾಬಾದ್: ಬಿಗ್ ಬಾಸ್ 7 ತೆಲುಗಿನ ಫಿನಾಲೆ ಇತ್ತೀಚೆಗೆ ಮುಕ್ತಾಯ ಕಂಡಿದೆ. ಫಿನಾಲೆಯಲ್ಲಿ ರೈತನ ಮಗ ಪಲ್ಲವಿ ಪ್ರಶಾಂತ್ ಭಾರೀ ಸಂಖ್ಯೆಯ ಮತವನ್ನು ಪಡೆದು ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಆ ಮೂಲಕ ಅವರಿಗೆ ವೋಟ್ ಮಾಡಿದ ಪ್ರೇಕ್ಷಕರು ಕೂಡ ಖುಷ್ ಆಗಿದ್ದಾರೆ.
ಆದರೆ ಬಿಗ್ ಬಾಸ್ ಗೆದ್ದು ಸಂತೋಷದಲ್ಲಿದ್ದ ಪಲ್ಲವಿ ಪ್ರಶಾಂತ್ ಅವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಪಲ್ಲವಿ ಪ್ರಶಾಂತ್ ವಿರುದ್ಧ ಜಾಮೀನು ರಹಿತ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದಾರೆ.
ಆಗಿದ್ದೇನು? : ಭಾನುವಾರ(ಡಿ.17 ರಂದು) ಬಿಗ್ ಬಾಸ್ ಫಿನಾಲೆ ನಡೆದಿತ್ತು. ಬಿಗ್ ಬಾಸ್ ನ ಗ್ರ್ಯಾಂಡ್ ಫಿನಾಲೆಗೆ ತಮ್ಮ ಹಳ್ಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಕರೆತರದಂತೆ ಪ್ರಶಾಂತ್ ಅವರಲ್ಲಿ ಪೊಲೀಸರು ಮೊದಲೇ ವಿನಂತಿಸಿದ್ದರು. ಇದಲ್ಲದೇ ಜನಸಂದಣಿ ತಪ್ಪಿಸಲು ತಪ್ಪಿಸಲು ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಬೇರೆ ನಿರ್ಗಮನ ದ್ವಾರವನ್ನು ಬಳಸಬೇಕೆಂದು ಪೊಲೀಸರು ವಿನಂತಿಸಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪ್ರಶಾಂತ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟು ಮಾಡಿದ್ದರಿಂದ ರಸ್ತೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರ ಅನುಮತಿಯಿಲ್ಲದೆ ಅವರು ರ‍್ಯಾಲಿ ನಡೆಸಿದ್ದರು.
ಬಿಗ್ ಬಾಸ್ ವಿಜೇತ ಪ್ರಶಾಂತ್ ಹಾಗೂ ರನ್ನರ್ ಅಪ್ ಅಮರ್ ಅಭಿಮಾನಿಗಳ ನಡುವೆ ರಂಪಾಟವೇ ನಡೆದಿತ್ತು. ಉತ್ಸುಕರಾದ ಅಭಿಮಾನಿಗಳು ವಿವಿಧ ಹೌಸ್‌ಮೇಟ್‌ಗಳ ಕಾರಿನ ಗ್ಲಾಸ್‌ಗಳನ್ನು ಒಡೆದು, ಹಲವು ಸರ್ಕಾರಿ ಬಸ್‌ಗಳ ಗಾಜುಗಳನ್ನು ಒಡೆದಿದ್ದಾರೆ. ಅಮರ್ ಮತ್ತು ಪ್ರಶಾಂತ್ ಅಭಿಮಾನಿಗಳ ನಡುವೆ ರಸ್ತೆಯಲ್ಲೇ ಹೊಡೆದಾಟ ನಡೆದಿದೆ.
ಇದನ್ನೆಲ್ಲಾ ಪರಿಗಣಿಸಿ ಪೊಲೀಸರು ಪ್ರಶಾಂತ್ ವಿರುದ್ಧ ಅಸಹಕಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪದ ಮೇಲೆ ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ. ಇಂದು ಸಂಜೆಯೊಳಗೆ (ಡಿ.20) ತಮ್ಮ ಮುಂದೆ ಹಾಜರಾಗುವಂತೆ ಪೊಲೀಸರು ಪ್ರಶಾಂತ್‌ಗೆ ಸೂಚಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ, ಬಿಗ್ ಬಾಸ್ ಮನೆಯೊಳಗೆ ಹೋಗುವ ವೇಳೆ ತಾನೊಬ್ಬ ಬಡ ರೈತ ಕುಟುಂಬದಿಂದ ಬಂದಿದ್ದೇನೆ ಎಂದಿದ್ದ ಪಲ್ಲವಿ ಪ್ರಶಾಂತ್, ಈಗ ಬಿಗ್ ಬಾಸ್ ಗೆದ್ದ ಬಳಿಕ ದುರಹಂಕಾರದಿಂದ ಮಾತನಾಡುತ್ತಿದ್ದು, ಮನೆಯ ಸದಸ್ಯರ ವಿರುದ್ಧ ದೊಡ್ಡ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ಅವರನ್ನು ಮೆಚ್ಚಿದ ವೀಕ್ಷಕರಿಗೆ ಶಾಕ್ ನೀಡಿದೆ.
ಯಾರು ಈ ಪಲ್ಲವಿ ಪ್ರಶಾಂತ್:
ತೆಲಂಗಾಣದ ಹಳ್ಳಿಯೊಂದರಲ್ಲಿ ಬೆಳೆದ ಪಲ್ಲವಿ ಪ್ರಶಾಂತ್ ವೃತ್ತಿಯಲ್ಲಿ ರೈತನಾಗಿದ್ದಾರೆ. ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನ್ನು ಹೊಂದಿದ್ದಾರೆ. ಕೃಷಿ ಸಂಬಂಧಿತ ನಿತ್ಯದ ವ್ಲಾಗ್ ಗಳನ್ನು ಅವರು ಅಪ್ಲೋಡ್ ಮಾಡುತ್ತಿರುತ್ತಾರೆ. ʼನಾನೊಬ್ಬ ರೈತ..ʼ ಎನ್ನುವ ರೈತ ಎನ್ನುವ ಅವರ ವಿಡಿಯೋ ವೈರಲ್ ಆಗಿದೆ. ರೀಲ್ಸ್ ಹಾಗೂ ವಿಡಿಯೋಗಳಿಂದಲೇ ಅವರು ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಗದ್ದೆಬದಿಯ ಕೆಲಸದ ರೀಲ್ಸ್, ರೈತರ ಬಗೆಗಿನ ರೀಲ್ಸ್ ಹಾಗೂ ವ್ಲಾಗ್ ಮಾಡಿಯೇ ಅಪಾರ ಫಾಲೋವರ್ಸ್ ಗಳನ್ನು ಪ್ರಶಾಂತ್ ಪಡೆದುಕೊಂಡಿದ್ದು. ಬಿಗ್ ಬಾಸ್ ಕಾರ್ಯಕ್ರಮದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಸೆಲೆಬ್ರಿಟಿಗಳೊಂದಿಗೆ ಸಾಮಾನ್ಯವಾಗಿ ದೊಡ್ಮನೆಯಲ್ಲಿ ನೂರು ದಿನ ಕಳೆದ ಪ್ರಶಾಂತ್ ಈಗ ಸಾಮಾನ್ಯದಿಂದ ಸೆಲೆಬ್ರಿಟಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.