BB18: ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ
Team Udayavani, Oct 9, 2024, 3:00 PM IST
ಮುಂಬಯಿ: ಬಿಗ್ ಬಾಸ್ ಹಿಂದಿ-18 (Bigg Boss 18) ಆರಂಭವಾಗಿ ಕೆಲ ದಿನಗಳಷ್ಟೇ ಕಳೆದಿದೆ. ಅಷ್ಟರಲ್ಲೇ ಸಲ್ಮಾನ್ ಖಾನ್ (Salman Khan) ಅವರು ಶೋಗೆ ‘ಪೆಟಾʼ (PETA) ಸಂಸ್ಥೆಯಿಂದ ಪತ್ರವೊಂದು ಬಂದಿದೆ.
ಈ ಬಾರಿ ಹಿಂದಿ ಬಿಗ್ ಬಾಸ್‌ನಲ್ಲಿ ಮನರಂಜನಾ, ಕಿರುತೆರೆ, ಸಾಮಾಜಿಕ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ಕೆಲ ವಿವಾದದಿಂದ ಸುದ್ದಿಯಾಗಿರುವ ಒಟ್ಟು 18 ಮಂದಿ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಎರಡು ದಿನಗಳಲ್ಲೇ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಆದರೆ ಈ ಬಾರಿ ಬಿಗ್ ಬಾಸ್‌ನಲ್ಲಿ ಎಲ್ಲರ ಗಮನ ಸೆಳದಿರುವುದು ʼಮ್ಯಾಕ್ಸ್ʼ.
ಇದನ್ನೂ ಓದಿ: Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ
ಮ್ಯಾಕ್ಸ್ ಎಂದರೆ ಸೆಲೆಬ್ರಿಟಿ ಅಲ್ಲ. ಬದಲಾಗಿ ಮ್ಯಾಕ್ಸ್ ಎನ್ನುವುದು ಒಂದು ಕತ್ತೆಯ (Donkey) ಹೆಸರು. ಹೌದು ಈ ಬಾರಿ ಬಿಗ್ ಬಾಸ್ ಮನೆಗೆ 19ನೇ ಸ್ಪರ್ಧಿಯಾಗಿ ಕತ್ತೆ ಎಂಟ್ರಿ ಪಡೆದುಕೊಂಡಿದೆ. ವಕೀಲ ಗುಣರತ್ನ ಅವರೊಂದಿಗೆ ʼಮ್ಯಾಕ್ಸ್ʼ ಬಿಗ್ ಬಾಸ್ ಮನೆಗೆ ಹೋಗಿದೆ.
18 ಮಂದಿ ಬಿಗ್ ಬಾಸ್ ಸ್ಪರ್ಧಿಗಳು ಒಂದು ಕಡೆಯಿದ್ದರೆ, ʼಮ್ಯಾಕ್ಸ್ʼ ತನ್ನ ಪಾಡಿಗೆ ತಾನು ಆಹಾರವನ್ನು ಸೇವಿಸುತ್ತಾ ಒಂದು ಕಡೆ ನಿಂತುಕೊಂಡಿದೆ. ಬಿಗ್ ಬಾಸ್ ಮನೆಗೆ ಪ್ರಾಣಿಯೊಂದು ಪ್ರವೇಶ ಪಡೆದಿರುವುದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಾಣಿಗಳ ಹಕ್ಕುಗಳ ರಕ್ಷಣಾ ವೇದಿಕೆ ‘ಪೆಟಾʼ ಆಯೋಜಕರಿಗೆ ಪತ್ರ ಬರೆದಿದೆ.
ʼಗಧರಾಜ್ʼ (ಮ್ಯಾಕ್ಸ್) ಎಂಬ ಹೆಸರಿನ ಕತ್ತೆ ಕೂಡ ಬಿಗ್ ಬಾಸ್ 18ರ ಭಾಗವಾಗಿದೆ. ಅವರಿಗೆ ಗಾರ್ಡನ್ ಏರಿಯಾದಲ್ಲಿ ಜಾಗವನ್ನು ನೀಡಲಾಗಿದೆ ಮತ್ತು ಅದನ್ನು ನೋಡಿಕೊಳ್ಳಲು ಹೌಸ್‌ಮೇಟ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಗ್ ಬಾಸ್ ನಲ್ಲಿ ಹೇಳಲಾಗಿದೆ.
ಬಿಗ್ ಭಾಸ್ ಮನೆಯಲ್ಲಿ ಕತ್ತೆ ಇಟ್ಟುಕೊಂಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ʼಪೆಟಾʼ ವಾಹಿನಿಗೆ ಪತ್ರ ಬರೆದಿದೆ.
ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವುದನ್ನು ನಿಲ್ಲಿಸಿ. ಪ್ರಾಣಿಯನ್ನು ಈ ರೀತಿ ಒಂದೇ ಜಾಗದಲ್ಲಿ ಕಟ್ಟಿ ಇಡುವುದರಿಂದ ಅವು ಒತ್ತಡಕ್ಕೆ ಒಳಗಾಗುತ್ತವೆ. ಬಿಗ್ ಬಾಸ್ ಒಂದು ಲಘುವಾದ ಮನರಂಜನೆಯಾಗಿದೆ. ಆದರೆ ಶೋ ಸೆಟ್‌ನಲ್ಲಿ ಪ್ರಾಣಿಗಳನ್ನು ಬಳಸುವುದು ನಗುವ ವಿಷಯವಲ್ಲ. ಕತ್ತೆಗಳು ಬೆಳಕು ಹಾಗೂ ಶಬ್ದ, ಗಲಾಟೆಯಿಂದ ಹೆದರುತ್ತವೆ. ಪ್ರಾಣಿಗಳು ಸೆಟ್ ನಲ್ಲಿ ಇಡುವ ಪ್ರದರ್ಶಕಗಳಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಕತ್ತೆಯನ್ನು ಹೊಂದಿರುವ ವಕೀಲ ಗುಣರತ್ನ ಹಾಗೂ ವಯಾಕಾಮ್ 18 (ಚಾನೆಲ್ ಕಲರ್ಸ್ ಮಾಲೀಕತ್ವದ ನೆಟ್ವರ್ಕ್) ಮತ್ತು ಬನಿಜಯ್ ಏಷ್ಯಾ (ಪ್ರೊಡಕ್ಷನ್ ಹೌಸ್) ಗೆ ಪತ್ರವನ್ನು ಕಳುಹಿಸಲಾಗಿದೆ.
ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ಪ್ರಾಣಿಗಳಿರುವುದು ಇದೇ ಮೊದಲಲ್ಲ. ಹಿಂದಿನ ಋತುಗಳಲ್ಲಿ ಮನೆಯವರು ತಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ನೋಡಿಕೊಳ್ಳಲು ನಾಯಿ, ಗಿಳಿ ಮತ್ತು ಮೀನುಗಳನ್ನು ಸಹ ಕಳುಹಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.