Bigg Boss: ವಾರದ ಮಧ್ಯದಲ್ಲೇ ಬಿಗ್ ಬಾಸ್‌ನಿಂದ ಎಲಿಮಿನೇಟ್ ಆದ ವೀಕ್ಷಕರ ಮೆಚ್ಚಿನ ಸ್ಪರ್ಧಿ
Team Udayavani, Oct 16, 2024, 12:46 PM IST
ಮುಂಬಯಿ: ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳ ರಿಯಲ್ ಗೇಮ್ ಶುರುವಾಗಿದೆ. ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಸ್ಪರ್ಧಿಗಳು ದೊಡ್ಮನೆ ಆಟಕ್ಕೆ ಹೊಂದಿಕೊಳ್ಳಲು ಶುರು ಮಾಡಿದ್ದಾರೆ.
ಬಿಗ್ ಬಾಸ್ ಹಿಂದಿ (Bigg Boss18) ಆರಂಭವಾದಾಗಿನಿಂದ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಲೇ ಇದೆ. ಬಿಗ್ ಬಾಸ್ ಮನೆಯಿಂದ ಸ್ಪರ್ಧಿಯೊಬ್ಬರನ್ನು ವಾರದ ಮಧ್ಯದಲ್ಲೇ ಮನೆಯಿಂದ ಆಚೆ ಕಳುಹಿಸಲಾಗಿದ್ದು, ವೀಕ್ಷಕರು ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಒಟ್ಟು 18 ಮಂದಿ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಒಂದು ಕತ್ತೆಯೂ ಸ್ಪರ್ಧಿಗಳ ನಡುವೆ ಇದೆ. ʼಕತ್ತೆʼಯನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿ ಎಂದು ʼಪೆಟಾʼ ಆಗ್ರಹಿಸಿದೆ. ಈ ವಿಚಾರ ಚರ್ಚೆಯಲ್ಲಿರುವಾಗಲೇ ಬಿಗ್ ಬಾಸ್ ಮನೆಯಿಂದ ವಾರದ ಮಧ್ಯದಲ್ಲೇ ಸ್ಪರ್ಧಿಯೊಬ್ಬರು ಎಲಿಮಿನೇಟ್ ಆಗಿದ್ದಾರೆ.
Tomorrow Promo #BiggBoss18: Avinash get EVICTED from house bcz of HMs votes.pic.twitter.com/OEQyxLRMMi
— #BiggBoss_Tak👁 (@BiggBoss_Tak) October 15, 2024
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವೊಂದನ್ನು ನೀಡಲಾಗಿದೆ. ಇಬ್ಬರು ಸ್ಪರ್ಧಿಗಳನ್ನು ಜೈಲಿಗೆ ಕಳುಹಿಸಿ ಅಥವಾ ಒಬ್ಬರನ್ನು ಮನೆಗೆ ಕಳುಹಿಸಿ ಎನ್ನುವ ಆಯ್ಕೆಯನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ಈ ವೇಳೆ ಮನೆಯಲ್ಲಿ ಸಹ ಸ್ಪರ್ಧಿಗಳೊಂದಿಗೆ ಹೆಚ್ಚು ವಾಗ್ವಾದಕ್ಕೆ ಇಳಿದಿದ್ದ ಅವಿನಾಶ್ ಮಿಶ್ರಾ (Avinash Mishra) ಅವರ ಹೆಸರನ್ನು ಬಹುತೇಕ ಸ್ಪರ್ಧಿಗಳು ಹೇಳಿ, ಅವರನ್ನು ಎಲಿಮಿನೇಟ್ ಮಾಡಬೇಕೆಂದು ಹೇಳಿದ್ದಾರೆ. ಈ ಕಾರಣದಿಂದ ಅವಿನಾಶ್ ಬಿಗ್ ಬಾಸ್ ಮನೆಯಿಂದ ವಾರದ ಮಧ್ಯದಲ್ಲೇ ಹೊರಹೋಗಿದ್ದಾರೆ.
ಅವಿನಾಶ್ ದೊಡ್ಮನೆಯಲ್ಲಿ ಡಾಮಿನೇಟ್ ಆಟವನ್ನು ಆಡುತ್ತಿದ್ದರು. ಇದು ವೀಕ್ಷಕರನ್ನು ಸೆಳೆಯುತ್ತಿತ್ತು. ಅವರನ್ನು ವೀಕ್ಷಕರು ಹೆಚ್ಚು ಇಷ್ಟಪಡುತ್ತಿದ್ದರು. ಆದರೆ ಮಹಿಳಾ ಸ್ಪರ್ಧಿಯಾಗಿರುವ ಚುಮ್ ದರಂಗ್ ಅವರೊಂದಿಗೆ ನಡೆದ ವಾಗ್ವಾದದಿಂದಾಗಿ ಅವಿನಾಶ್ ಹಾಗೂ ಇತರರ ನಡುವೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ದೈಹಿಕವಾಗಿ ಹಲ್ಲೆಗೆ ಮುಂದಾಗುವವರೆಗೂ ಹೋಗಿದೆ.
ಇದಾದ ಬಳಿಕ ಎಲ್ಲಾ ಸ್ಪರ್ಧಿಗಳು ಒಮ್ಮತದಿಂದಾಗಿ ಅವಿನಾಶ್ ಅವರ ಹೆಸರನ್ನು ಹೇಳಿ ಎಲಿಮಿನೇಟ್ ಮಾಡಿದ್ದಾರೆ. ಆ ಕೂಡಲೇ ಅವಿನಾಶ್ ಮನೆಬಿಟ್ಟು ಆಚೆ ಬಂದಿದ್ದಾರೆ.
ಅವಿನಾಶ್ ಮನೆಯಿಂದ ಆಚೆ ಬಂದ ವಿಚಾರದಿಂದ ವೀಕ್ಷಕರು ಬೇಸರವನ್ನು ಹೊರಹಾಕಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಅವಿನಾಶ್ ಮುಂದಿನ ವಾರಗಳಲ್ಲಿ ಬರುತ್ತಾರೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.