Bigg Boss 18: ಬಿಗ್‌ಬಾಸ್‌ನಲ್ಲಿ ಭಾಗಿಯಾಗಲು ನಟನಿಗೆ 5 ಕೋಟಿ ಆಫರ್; ಯಾರೀತ?
Team Udayavani, Sep 15, 2024, 3:41 PM IST
ಮುಂಬಯಿ: ಬಿಗ್ ಬಾಸ್ ಹಿಂದಿ ಓಟಿಟಿ-3 ಮುಗಿದ ಬಳಿಕ ಈಗ ಬಿಗ್ ಬಾಸ್ -18 (Bigg Boss 18) ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಈ ಬಾರಿಯೂ ಸಲ್ಮಾನ್ ಖಾನ್ (Salman Khan) ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಸ್ಪರ್ಧಿಗಳ ವಿಚಾರದಿಂದ ಸುದ್ದಿ ಆಗುತ್ತಿದೆ. ಈಗಾಗಲೇ ಹೊಸ ಸೀಸನ್‌ನ ಪ್ರೋಮೊ ಶೂಟ್ ಆಗಿದ್ದು, ಮುಂಬಯಿಯಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಪ್ರೋಮೊ ಶೂಟ್ ಆಗಿದೆ. ಮುಂದಿನ ವಾರ ಪ್ರೋಮೊ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ: ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳಿಗೆ ಪ್ರತಿ ವಾರದಂತೆ ಸಂಭಾವನೆ ಇರುತ್ತದೆ. ಯಾರಿಗೆ ಎಷ್ಷು ಸಂಭಾವನೆ ಇರುತ್ತದೆ ಎನ್ನುವುದನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಬಿಗ್ ಬಾಸ್ -18ನಲ್ಲಿ ಸ್ಪರ್ಧಿಯೊಬ್ಬರಿಗೆ ಅತಿ ಹೆಚ್ಚು ಸಂಭಾವನೆ ನೀಡುವ ಕುರಿತು ಮಾತುಕತೆ ಆಗಿದೆ ಎಂದು ವರದಿ ಆಗಿದೆ.
ಕಿರುತೆರೆ ನಟ ಧೀರಜ್ ಧೂಪರ್ (Dheeraj Dhoopar) ಅವರು ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಭಾಗಿ ಆಗುತ್ತಾರೆ ಎನ್ನುವ ಮಾತು ಕಳೆದ ಸೀಸನ್ ನಲ್ಲೂ ಕೇಳಿ ಬಂದಿತ್ತು. ಈ ಸೀಸನ್‌ನಲ್ಲಿ ಬಹುತೇಕ ಧೀರಜ್ ಭಾಗಿ ಆಗುವುದು ಅಧಿಕೃತವಾಗಿದೆ ಎನ್ನಲಾಗಿದೆ. ಧೀರಜ್ ಧೂಪರ್ ಸೀಸನ್‌ನಲ್ಲಿ ಬಿಗ್ ಬಾಸ್‌ನಲ್ಲಿ ಭಾಗಿ ಆಗುವುದಕ್ಕೆ 4-5 ಕೋಟಿ ರೂ. ಸಂಭಾವನೆಯ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ. ಈ ಡೀಲ್ ಓಕೆ ಆದರೆ ಅವರು ಶೋನಲ್ಲಿ ಕಾಣಿಸಿಕೊಳ್ಳುವುದು ಪಕ್ಕಾವೆಂದು ಹೇಳಲಾಗುತ್ತಿದೆ.
ಒಂದು ವೇಳೆ ಧೀರಜ್ ಅವರ ಈ ಒಪ್ಪಂದ ಓಕೆ ಆದರೆ ಅವರು ಬಿಗ್ ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಸಂಭಾವನೆ ಸ್ಪರ್ಧಿ ಆಗಲಿದ್ದಾರೆ. ಈ ಹಿಂದೆ ಅಂಕಿತಾ ಲೋಖಂಡೆ ಮತ್ತು ಐಶ್ವರ್ಯ ಶರ್ಮಾ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಗಳಾಗಿದ್ದರು. ಅವರು ವಾರಕ್ಕೆ ರೂ 11-12 ಲಕ್ಷ ಸಂಭಾವನೆ ಪಡೆಯುತ್ತಿದ್ದರು.
ಸದ್ಯ ಬಿಗ್ ಬಾಸ್ -18ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತಿದ್ದು, ಅಕ್ಟೋಬರ್ ಮೊದಲ ವಾರದಿಂದ ಕಾರ್ಯಕ್ರಮ ಆರಂಭಗೊಳ್ಳುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.