ಕಿರುತೆರೆ ನಟನಿಂದ ಗರ್ಭಿಣಿ ಪತ್ನಿ ಮೇಲೆ ಹಲ್ಲೆ: ಮದುವೆ ಬಳಿಕ ಮತ್ತೊಬ್ಬಳ ಜತೆ ನಿಶ್ಚಿತಾರ್ಥ?


Team Udayavani, Jul 23, 2024, 12:00 PM IST

6

ಬೆಂಗಳೂರು: ಕಿರುತೆರೆ ನಟನೊಬ್ಬ (Serial actor) ತನ್ನ ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

‘ನೇತ್ರಾವತಿ’ ಹೆಸರಿನ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸನ್ನಿ ಮಹಿಪಾಲ್ (Sunny Mahipal) ಅವರ ಮೇಲೆ ಪತ್ನಿಗೆ ಹಲ್ಲೆ ನಡೆಸಿದ್ದಾರೆ ಹಾಗೂ ಮದುವೆ ಬಳಿಕ ಬೇರೆ ಹುಡುಗಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಆರೋಪವನ್ನು ಮಾಡಲಾಗಿದೆ.

ಏನಿದು ಘಟನೆ?:

‘ನೇತ್ರಾವತಿ’ಧಾರಾವಾಹಿ ಬಳಿಕಸನ್ನಿ ಮಹಿಪಾಲ್‌ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಮದುವೆ ಆಗುವುದಾಗಿ ನಂಬಿಸಿ ಆಕೆಯ ಜೊತೆ ಸನ್ನಿ ಮಹಿಪಾಲ್‌ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ.

ಯುವತಿ ಎರಡು ತಿಂಗಳ ಗರ್ಭಿಣಿ ಆದ ಬಳಿಕ ಜೂನ್‌ 15ರಂದು ಸನ್ನಿ ಆಕೆಯ ಜೊತೆ ದೇವಸ್ಥಾನದಲ್ಲಿ ವಿವಾಹವಾಗಿದ್ದಾನೆ. ಇದಾದ ನಂತರ ಸನ್ನಿ ಮಹಿಪಾಲ್‌ ಮನೆಯವರನ್ನು ಒಪ್ಪಿಸಿ ಬರುವೆ, ಅಲ್ಲಿಯವರೆಗೆ ಸ್ನೇಹಿತೆಯಂತೆ ಇರಬೇಕೆಂದು ಹೇಳಿ ತೆರಳಿದ್ದಾನೆ. ಇದಕ್ಕೆ ಯುವತಿ ಸರಿಯೆಂದು ಹೇಳಿದ್ದಾಳೆ. ಆದರೆ ಕೆಲ ದಿನಗಳ ಹಿಂದೆ ಸನ್ನಿ ಮಹಿಪಾಲ್‌ ಬೇರೆ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿದ ಆತನ ಪತ್ನಿ ಜು.22ರಂದು ವಿಜ್ಞಾನ ನಗರದಲ್ಲಿರುವ ಮಹಿಪಾಲ್ ಮನೆಗೆ ಹೋಗಿ, ಸನ್ನಿ ನಡೆಗೆ ಆಕ್ರೋಶ ವ್ಯಕ್ತಪಡಿಸಿ, ಪ್ರಶ್ನಿಸಿದ್ದಾರೆ. ಈ ವೇಳೆ ಸನ್ನಿ ಮಹಿಪಾಲ್‌ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.

ಸನ್ನಿ ಮಹಿಪಾಲ್‌ ಪತ್ನಿಗೆ ಚಾಕುವಿನಿಂದ ತೋಳಿಗೆ ಇರಿದ ಆರೋಪ ಮಾಡಲಾಗಿದೆ. ಈ ಗಲಾಟೆಯಲ್ಲಿ ಹೊಟ್ಟೆಗೆ ಏಟು ಬಿದ್ದು ಗರ್ಭಪಾತ ಆಗಿರೋದಾಗಿಯೂ ಕೂಡ ಪತ್ನಿ ಹೇಳಿಕೆ ನೀಡಿದ್ದಾರೆ. ಗಲಾಟೆ ವೇಳೆ ಯುವತಿ  112ಕ್ಕೆ ಮಹಿಪಾಲ್ ಪತ್ನಿ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಬಂದಾಗ ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಆದರೆ ನಮ್ಮ ಬಳಿ ಮಹಿಳಾ ಸಿಬ್ಬಂದಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.

ಇದರಿಂದ ಯುವತಿ ತಾನೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸನ್ನಿ ಮಹಿಪಾಲ್‌ ತನ್ನ ಪನ್ನಿ ಅತಿಕ್ರಮವಾಗಿ ಮನೆಗೆ ಪ್ರವೇಶ ಮಾಡಿದ್ದಾರೆ. ಬಲವಂತವಾಗಿ ಈ ಮದುವೆ ಆಗಿದ್ದೇನೆ ಎಂದು ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bigg

BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..

ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಗ್ರ್ಯಾಂಡ್‌ ಫಿನಾಲೆ

ಅ.19-20ರಂದು ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಗ್ರ್ಯಾಂಡ್‌ ಫಿನಾಲೆ

9

BBK11: ಜಗದೀಶ್‌ ಬಿಗ್‌ ಬಾಸ್‌ನಿಂದ ಆಚೆ ಬಂದಿರುವುದು ನಿಜವೇ? ಪತ್ನಿ ಹೇಳಿದ್ದೇನು?

ja

BBK11: ನೀವು ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು, ಜನರ ಮನಸ್ಸು ಗೆಲ್ಲೋದು ನಾನೇ.. ಜಗದೀಶ್

14

BBK11: ಗಲಾಟೆ ಭರದಲ್ಲಿ ಮಂಜುಗೆ ಕಿಸ್‌ ಮಾಡಿದ್ರಾ ಜಗದೀಶ್?‌ ಏನಿದು ವೈರಲ್‌ ವಿಡಿಯೋ?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.