Serial Actress: ಮದುವೆ ನಿರಾಕರಿಸಿದ್ದಕ್ಕೆ ಕಿರುತೆರೆ ನಟಿಯ ಮನೆಯಲ್ಲೇ ಯುವಕ ಆತ್ಮಹ*ತ್ಯೆ
Team Udayavani, Oct 2, 2024, 4:08 PM IST
ಬೆಂಗಳೂರು: ಕಿರುತೆರೆ ನಟಿಯೊಬ್ಬಳು (Serial Actress) ಮದುವೆ ಆಗಲು ನಿರಾಕರಿಸಿದ ಕಾರಣದಿಂದಾಗಿ ಮನನೊಂದು ಯುವಕನೋರ್ವ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮದನ್ (25) ಮೃತ ಯುವಕ. ಈತ ಇವೆಂಟ್ ಮ್ಯಾನೇಜ್ ಮೆಂಟ್‌ನಲ್ಲಿ ಡೆಕೊರೇಟ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ಕೆಲ ಸಮಯದ ಹಿಂದಷ್ಟೇ ಕಿರುತೆರೆಯಲ್ಲಿ ಸಹನಟಿಯಾಗಿ ಕೆಲಸ ಮಾಡುತ್ತಿದ್ದ ವೀಣಾ (Actress veena) ಎಂಬಾಕೆಯ ಪರಿಚಯವಾಗಿತ್ತು. ಸೀರಿಯಲ್ ಸೆಟ್‌ನಲ್ಲೇ ಇಬ್ಬರು ಸ್ನೇಹಿತರಾಗಿದ್ದರು. ಸ್ನೇಹ ಮುಂದುವರೆಯುತ್ತಿದ್ದಂತೆ ಸಲುಗೆ ಬೆಳೆಸಿಕೊಂಡು ಇಬ್ಬರು ಲೀವಿಂಗ್ ರಿಲೇಶನ್ ನಲ್ಲಿದ್ದರು ಎನ್ನಲಾಗಿದೆ.
ಆದರೆ ದಿನ ಕಳೆಯುತ್ತಿದ್ದಂತೆ ವೀಣಾ ಮದುವೆ ಆಗುವಂತೆ ಮದನ್ ನನ್ನು ಹಲವಾರು ಬಾರಿ ಒತ್ತಾಯ ಮಾಡಿದ್ದಳು. ಅದೊಂದು ದಿನ ಕೈ ಕೊಯ್ದುಕೊಂಡು ಮದುವೆ ಆಗಲೇಬೇಕೆಂದು ನಟಿ ಮದನ್ ನನ್ನು ಒತ್ತಾಯಿಸಿದ್ದಳು ಎನ್ನಲಾಗಿದೆ. ವೀಣಾ ಬೇರೆ ಹುಡುಗರ ಜತೆಯೂ ಆತ್ಮೀಯವಾಗಿದ್ದಳು ಎನ್ನುವ ಕಾರಣಕ್ಕೆ ಮದುವೆ ಆಗಲು ಮದನ್ ನಿರಾಕರಿಸಿದ್ದ ಎನ್ನಲಾಗಿದೆ.
ಮಂಗಳವಾರ(ಅ.1ರಂದು) ಮದನ್ ನನ್ನು ವೀಣಾ ಸಿಕೆ ಪಾಳ್ಯದಲ್ಲಿರುವ ತನ್ನ ಮನೆಗೆ ಕರೆದಿದ್ದಳು. ಈ ವೇಳೆ ಇಬ್ಬರು ಚೆನ್ನಾಗಿ ಕುಡಿದು ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಮದುವೆ ವಿಚಾರ ಪ್ರಸ್ತಾಪವಾಗಿದೆ. ವೀಣಾ ಮಾತಿನಿಂದ ಬೇಸರಗೊಂಡ ಮದನ್ ವಾಶ್ ರೂಮ್‌ಗೆ ಹೋಗಿ ಬರ್ತಿನಿ ಅಂಥ ಹೇಳಿ ಹೋದವನು ಅಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ಆಗಿದೆ.
ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ ವೀಣಾಳ ಬಳಿ ಈ ಸಲಿ ಮದನ್ ಮದುವೆ ಆಗುವುದರ ಬಗ್ಗೆ ಮಾತನಾಡಿದ್ದನಂತೆ ಆದರೆ ವೀಣಾ ಇಷ್ಟು ದಿನ ಮದುವೆ ಆಗುವಂತೆ ಹೇಳುತ್ತಿದ್ದಳು ಆದರೆ ನಿನ್ನೆ ಮದುವೆ ಆಗಲ್ಲ ಎಂದು ಹೇಳಿದ್ದಾಳೆ. ಇದೇ ಕಾರಣದಿಂದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ನಟಿ ವೀಣಾ ʼಕನ್ನಡತಿʼ ಸೀರಿಯಲ್ ಹಾಗೂ ಕೆಲವು ಜಾಹೀರಾತುಗಳಲ್ಲಿ ನಟಿಸುತ್ತಿದ್ದಳು ಎನ್ನಲಾಗಿದೆ.
ಈ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಟಿ ವೀಣಾರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವೀಣಾ ಮದುವೆಯಾಗುವುದಾಗಿ ಹಲವರು ಯುವಕರಿಗೆ ವಂಚನೆ ಮಾಡಿದ್ದಾಳೆ ಎಂದು ಮೃತ ಮದನ್ ಪೋಷಕರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
BPL: ತೆರಿಗೆದಾರರು, ಸರ್ಕಾರಿ ನೌಕರರ ಕಾರ್ಡ್ ಮಾತ್ರ ರದ್ದು: ಗೊಂದಲಕ್ಕೆ ಸಚಿವರ ಸ್ಪಷ್ಟನೆ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.