TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

Team Udayavani, Dec 4, 2024, 11:55 AM IST

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

ಚೆನ್ನೈ: ಸಣ್ಣ ವಯಸ್ಸಿನಲ್ಲೇ ಖ್ಯಾತ ಕಿರುತೆರೆ (TV Actor) ನಟರೊಬ್ಬರು ಇಹಲೋಕ ತ್ಯಜಿಸಿದ್ದು, ಅವರ  ನಿಧನದ ಸುದ್ದಿ ಕೇಳಿ ತಮಿಳು ಕಿರುತೆರೆ ಲೋಕ ಶಾಕ್‌ ಆಗಿದೆ.

ಜನಪ್ರಿಯ ತಮಿಳು ಕಿರುತೆರೆ ನಟ ಯುವನ್‌ರಾಜ್ ನೇತ್ರನ್ (45) ನಿಧನರಾಗಿದ್ದಾರೆ. ಕ್ಯಾನ್ಸರ್‌ನೊಂದಿಗೆ ದೀರ್ಘಕಾಲದವರೆಗೂ ಹೋರಾಡಿದ ಅವರು ಮಂಗಳವಾರ (ಡಿ.3ರಂದು)  ಕೊನೆಯುಸಿರೆಳೆದಿದ್ದಾರೆ. ಕಳೆದ 6 ತಿಂಗಳಿನಿಂದ ಅವರು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದರು.

ನಿಧನಕ್ಕೂ ಮುನ್ನ ಅವರು ಹಾಕಿದ ಕೊನೆಯ ಪೋಸ್ಟ್‌ ವೈರಲ್‌ ಆಗಿದೆ. ತಮ್ಮ ಎರಡನೇ ಮಗಳು ಮನೆಯಲ್ಲಿ ತಯಾರಿಸಿದ ಬಿಸ್ಕೆಟ್‌ ಗಳ ಫೋಟೋವನ್ನು ಅವರು ಹಂಚಿಕೊಂಡಿದ್ದರು.

ಕಿರುತೆರೆ ಲೋಕ..: ತಮಿಳು ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದ ನೇತ್ರನ್‌ ( Yuvanraj Nethran) ಬಾಲ ಕಲಾವಿದರಾಗಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. 25 ವರ್ಷಗಳ ಕಾಲ ಸಣ್ಣ ಪರದೆಯಲ್ಲಿ ಅವರು ನಟಿಸಿದ್ದರು.

ʼಸಿಂಗಪ್ಪೆನ್ನೆʼ , ʼರಂಜಿತಾಮೆʼ ಅಂತಹ ಧಾರಾವಾಹಿಗಳು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಧಾರಾವಾಹಿಗಳು ಮಾತ್ರವಲ್ಲದೆ ʼಮಸ್ತಾನ ಮಸ್ತಾನʼ, ʼಬಾಯ್ಸ್‌ vs ಗರ್ಲ್ಸ್‌ ಸೀಸನ್‌ -2ʼ, ʼಸೂಪರ್ ಕುಟುಂಬಮ್ʼ ಸೀಸನ್ 1 ಮತ್ತು 2, ಜೋಡಿ ನಂ.1 ನಂತಹ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು.

ನೇತ್ರನ್ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ನೇತ್ರನ್‌ ಅವರ ಪತ್ನಿ ದೀಪಾ ಕೂಡ ಕಿರುತೆರೆಯಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೇ ವರ್ಷದ ಏಪ್ರಿಲ್‌ನಲ್ಲಿ 24ನೇ ವಿವಾಹ ವಾರ್ಷಿಕೋತ್ಸವನ್ನು ಇಬ್ಬರು ಆಚರಿಸಿಕೊಂಡಿದ್ದರು.

ನೇತ್ರನ್‌ ನಿಧನಕ್ಕೆ ತಮಿಳು ಕಿರುತೆರೆ ಲೋಕ ಕಂಬನಿ ಮಿಡಿದಿದೆ.

ಟಾಪ್ ನ್ಯೂಸ್

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Ankola: ಆಟವಾಡುವ ವೇಳೆ ಮೈ ಮೇಲೆ ಗೇಟ್ ಬಿದ್ದು 6 ವರ್ಷದ ಬಾಲಕಿ ಮೃತ್ಯು

Ankola: ಆಟವಾಡುವ ವೇಳೆ ಮೈ ಮೇಲೆ ಗೇಟ್ ಬಿದ್ದು 6 ವರ್ಷದ ಬಾಲಕ ಮೃತ್ಯು

Mangaluru ಪೋಕ್ಸೋ ಪ್ರಕರಣ: ಅರ್ಚಕ ಅಮಾನತು

Mangaluru ಪೋಕ್ಸೋ ಪ್ರಕರಣ: ಅರ್ಚಕ ಅಮಾನತು

Highcourt: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಬಿಐಗಿಲ್ಲ… ಎಸ್‌ಐಟಿ ರಚಿಸಿದ ಹೈಕೋರ್ಟ್‌

Highcourt: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಬಿಐಗಿಲ್ಲ… ಎಸ್‌ಐಟಿ ರಚಿಸಿದ ಹೈಕೋರ್ಟ್‌

Notice: ಅಕ್ರಮ ಮದ್ಯ ಮಾರಾಟ… ರಾಜ್ಯ ಸರಕಾರಕ್ಕೆ ನೋಟಿಸ್‌

Notice: ಅಕ್ರಮ ಮದ್ಯ ಮಾರಾಟ… ರಾಜ್ಯ ಸರಕಾರಕ್ಕೆ ನೋಟಿಸ್‌

KR-Pete-CM

MUDA Case: ಲೋಕಾಯುಕ್ತಕ್ಕೆ ಇಡಿ ಬರೆದಿರುವ ಪತ್ರ ರಾಜಕೀಯ ಪ್ರೇರಿತ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌BBK11: ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ.. ಚೈತ್ರಾ ಮಾತಿಗೆ ಶಿಶಿರ್‌ ಗರಂ

‌BBK11: ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ.. ಚೈತ್ರಾ ಮಾತಿಗೆ ಶಿಶಿರ್‌ ಗರಂ

BBK11: ಬಿಗ್‌ಬಾಸ್‌ ಮನೆಯಿಂದ ಆಚೆ ಬಂದ ಚೈತ್ರಾ ಕುಂದಾಪುರ.! ಕಾರಣವೇನು?

BBK11: ಬಿಗ್‌ಬಾಸ್‌ ಮನೆಯಿಂದ ಆಚೆ ಬಂದ ಚೈತ್ರಾ ಕುಂದಾಪುರ.! ಕಾರಣವೇನು?

BBK11: ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದದ್ದು ಯಾಕೆ? ಕಾರಣ ತಿಳಿಸಿದ ಶೋಭಾ ಶೆಟ್ಟಿ

BBK11: ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದದ್ದು ಯಾಕೆ? ಕಾರಣ ತಿಳಿಸಿದ ಶೋಭಾ ಶೆಟ್ಟಿ

BBK11: ಬಿಗ್‌ ಬಾಸ್‌ ಮನೆಯಲ್ಲಿ ಸವಾಲಿಗೆ ಸವಾಲು.. ತಲೆ ಬೋಳಿಸಿಕೊಂಡ ರಜತ್

BBK11: ಬಿಗ್‌ ಬಾಸ್‌ ಮನೆಯಲ್ಲಿ ಸವಾಲಿಗೆ ಸವಾಲು.. ತಲೆ ಬೋಳಿಸಿಕೊಂಡ ರಜತ್

BIGG-BOSS

BBK11: ಬಿಗ್ ಬಾಸ್ ಮನೆಯಿಂದ ಅರ್ಧದಲ್ಲೇ ಆಚೆ ಬಂದ ಶೋಭಾ: ಇದೆಲ್ಲ ಡ್ರಾಮಾ ಎಂದು ಕಿಚ್ಚ ಗರಂ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

dw

Sullia: ಇಲಿ ಪಾಷಾಣ ಸೇವಿಸಿದ್ದ ಯುವಕ ಸಾವು

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Kaup: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Kaup: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

de

Udupi: ಕಟ್ಟಡದ 6ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.