![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 12, 2024, 8:58 AM IST
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -10 ಮುಕ್ತಾಯವಾದ ಬಳಿಕ ಸ್ಪರ್ಧಿಗಳು ಎಂಜಾಯ್ ಮೂಡ್ ನಲ್ಲಿದ್ದಾರೆ. ದೊಡ್ಮನೆ ಸ್ನೇಹಿತರ ಜೊತೆ ಪಾರ್ಟಿ ಮಾಡಿಕೊಂಡು ಸ್ಪರ್ಧಿಗಳು ಖುಷಿಯಲ್ಲಿದ್ದಾರೆ. ಈ ನಡುವೆ ನಾನಾ ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ.
ಈ ವರ್ಷದ ಬಿಗ್ ಬಾಸ್ ನಲ್ಲಿ ಜೋಡಿಗಳ ವಿಚಾರದಲ್ಲಿ ಸದ್ದು ಹಾಗೂ ಸುದ್ದಿ ಆಗಿದ್ದು ಕಾರ್ತಿಕ್ – ಸಂಗೀತಾ. ಅದು ಬಿಟ್ಟರೆ ಗಾಸಿಪ್ ಆಗಿ ತನಿಷಾ ಹಾಗೂ ವರ್ತೂರು ಸಂತೋಷ್ ಅವರು ಸುದ್ದಿಯಾಗಿದ್ದರು. ದೊಡ್ಮನೆಯೊಳಗೆ ತನಿಷಾ ಹಾಗೂ ವರ್ತೂರು ನಡುವೆ ಏನೋ ನಡೆಯುತ್ತಿದೆ ಎನ್ನುವ ಗಾಸಿಪ್ ಹಬ್ಬಿತ್ತು.
ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ತನಿಷಾ ವರ್ತೂರು ಸಂತೋಷ್ ಅವರ ಜೊತೆ ಕಾಣಿಸಿಕೊಂಡಿದ್ದರು. ವರ್ತೂರು ಅವರ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದರು. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಫ್ಯಾನ್ಸ್ ಗಳ ಊಹಿಸಿದ್ದರು. ಕೆಲ ಫ್ಯಾನ್ಸ್ ಗಳು ವರ್ತೂರು ಹಾಗೂ ತನಿಷಾ ಇಬ್ಬರು ಮದುವೆಯಾಗಬೇಕೆಂದು ಬಯಸಿದ್ದಾರೆ.
ಇತ್ತೀಚೆಗೆ ತನಿಷಾ ಅವರು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ವರ್ತೂರು ಅವರೊಂದಿಗಿನ ಆತ್ಮೀಯತೆ ಬಗ್ಗೆ ಪ್ರಶ್ನೆ ಕೇಳಲಾಗಿದೆ.
“ವರ್ತೂರು ಹಾಗೂ ನಿಮ್ಮ ಮದುವೆ ಬಗ್ಗೆ ಫ್ಯಾನ್ಸ್ ಗಳು ಕೇಳುತ್ತಿದ್ದಾರೆ. ಈ ಬಗ್ಗೆ ನೀವೇನು ಹೇಳ್ತೀರಾ? ಎಂದು ಪ್ರಶ್ನೆ ಕೇಳಿದ್ದಾರೆ.
“ವರ್ತೂರು ಅವರಿಗೆ ಅವರದ್ದೇ ಜೀವನ ಇದೆ. ಅವರೂ ಮದುವೆಯಾದ ಮೇಲೂ, ನಾನು ಮದುವೆಯಾದ ಮೇಲೂ ಇಬ್ಬರೂ ಹೀಗೆ ಫ್ರೆಂಡ್ ಆಗಿ ಇರುತ್ತೇವೆ. ನಮ್ಮ ಸ್ನೇಹ ಹೀಗೆಯೇ ಇರುತ್ತದೆ. ಅದನ್ನು ನೋಡಿ ಫ್ಯಾನ್ಸ್ ಗಳು ಖುಷಿ ಆಗಿರಬೇಕು” ಎಂದು ನಗುತ್ತೇಲೆ ಉತ್ತರಿಸುವ ಮೂಲಕ ಮದುವೆ ಬಗೆಗಿನ ವಿಚಾರಕ್ಕೆ ತೆರೆ ಎಳೆದಿದ್ದಾರೆ.
Bro Gowda: ನಿಶ್ಚಿತಾರ್ಥ ಮಾಡಿಕೊಂಡ ʼಲಕ್ಷ್ಮೀ ಬಾರಮ್ಮʼ ಖ್ಯಾತಿಯ ಬ್ರೋ ಗೌಡ: ಹುಡುಗಿ ಯಾರು?
Controversy: ಅಶ್ಲೀಲ ಹೇಳಿಕೆ: 2ನೇ ಬಾರಿಗೆ ರಣವೀರ್ ಅಲಹಾಬಾದಿಯಾಗೆ ಪೊಲೀಸರ ಸಮನ್ಸ್
Zee Entertainers Comedy Awards 2025: ಜೀ ಕನ್ನಡದಲ್ಲಿ ‘ಕಾಮಿಡಿ’ ಸಮಾಗಮ!
TRP: ಟಿಆರ್ಪಿಯಲ್ಲಿ ದಾಖಲೆ ಬರೆದ ʼಬಿಗ್ ಬಾಸ್ʼ ಫಿನಾಲೆ ಸಂಚಿಕೆ; ಪಡೆದ ಟಿವಿಆರ್ ಎಷ್ಟು?
Bharjari Bachelors Show: ʼಬ್ಯಾಚುಲರ್ಸ್’ ಬದುಕಿಗೆ ಬಣ್ಣ ತುಂಬಲು ಬಂದ ಕ್ರೇಜಿ ಸ್ಟಾರ್
You seem to have an Ad Blocker on.
To continue reading, please turn it off or whitelist Udayavani.