Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ
Team Udayavani, May 18, 2024, 7:36 AM IST
ಹೈದರಾಬಾದ್: ಕೆಲದಿನಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನಟಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ಇದೀಗ ಆಕೆಯ ಗೆಳೆಯ ಚಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಭಾನುವಾರ(ಮೇ.12 ರಂದು) ಆಂಧ್ರದ ಕಾರು ಮಹೆಬೂಬ್‌ನಗರ ಜಿಲ್ಲೆಯ ಭೂತ್‌ಪುರ ಪುರಸಭೆ ವ್ಯಾಪ್ತಿಯ ಶೇರಿಪಲ್ಲಿ (ಬಿ) ಗ್ರಾಮದ ಬಳಿ, ಪವಿತ್ರಾ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ತೀವ್ರ ಏಟಾಗಿ ಪವಿತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಇನ್ನು ಈ ಸಮಯದಲ್ಲಿ ಕಾರಿನಲ್ಲಿದ್ದ ಸಹನಟ ಚಂದು ಸೇರಿದಂತೆ ಮೂವರಿಗೆ ಗಾಯಗಳಾಗಿತ್ತು.
ಪವಿತ್ರಾ ಅವರ ಅಂತ್ಯಕ್ರಿಯೆಗೆ ಗಾಯ ಆಗಿದ್ದರೂ ಚಂದು ಬಂದಿದ್ದರು. ಈ ವೇಳೆ ತನ್ನ ಸ್ನೇಹಿತೆಯನ್ನು ಕಳೆದುಕೊಂಡ ದುಃಖದಲ್ಲಿ ಭಾವುಕರಾಗಿ ಮಾತನಾಡಿದ್ದರು.
ಶುಕ್ರವಾರ (ಮೇ.18 ರಂದು) ಹೈದರಾಬಾದ್ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೈದರಾಬಾದ್ನ ಮಣಿಕೊಂಡದಲ್ಲಿರುವ ತನ್ನ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತೆಲುಗಿನ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಇವರು, 2015 ರಲ್ಲಿ ಶಿಲ್ಪಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಎರಡು ಮಕ್ಕಳಿದ್ದಾರೆ.
ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ತೆಲುಗು ಕಿರುತೆರೆಯನ್ನು ಶಾಕ್ ಆಗಿಸಿದೆ.
ಹೈದರಾಬಾದ್ನ ನಾರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.