Nora Fatehi: ಟಿವಿ ಕಾರ್ಯಕ್ರಮದಲ್ಲಿ ನೋರಾ ಫತೇಹಿ ಹಾಟ್ ಡ್ಯಾನ್ಸ್; ನೆಟ್ಟಿಗರ ತರಾಟೆ
Team Udayavani, Jan 31, 2024, 3:00 PM IST
ಮುಂಬಯಿ: ಬಿಟೌನ್ ಹಾಟ್ ಬ್ಯೂಟಿ ನೋರಾ ಫತೇಹಿ ತನ್ನ ಮೋಹಕ ಹಾಗೂ ಮಾದಕ ನೃತ್ಯದಿಂದಲೇ ಕಣ್ಮನ ಸೆಳೆದವರು. ಬಾಲಿವುಡ್ ನಲ್ಲಿ ನೋರಾ ಅವರ ಹೆಸರು ಕೇಳದವರಿಲ್ಲ. ಸದಾ ಒಂದಲ್ಲ ಒಂದು ವಿಚಾರದಿಂದ ಸದ್ದು ಮಾಡುವ ನೋರಾ ಅವರ ಇತ್ತೀಚೆಗಿನ ಡ್ಯಾನ್ಸ್ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ರೆಮೋ ಡಿಸೋಜಾ ಅವರ ʼಡ್ಯಾನ್ಸ್ ಪ್ಲಸ್ ಪ್ರೋʼ ಕಾರ್ಯಕ್ರಮದಲ್ಲಿ ನೋರಾ ಅವರು ತೀರ್ಪುಗಾರರಾಗುದ್ದಾರೆ. ಇತ್ತೀಚೆಗೆ ಈ ಕಾರ್ಯಕ್ರಮದಲ್ಲಿ ನೋರಾ ಅವರು ಹೆಜ್ಜೆ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ನೋರಾ ಫತೇಹಿ ತುಂಡು ಬಟ್ಟೆಯಲ್ಲಿ ವೇದಿಕೆ ಮೇಲೆ ಬಂದು ಅವರದೇ ಹಾಡಾದ ʼ ನಾಚ್ ಮೇರಿ ರಾಣಿʼ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೊಂಟ ಬಳುಕಿಸಿ ಡ್ಯಾನ್ಸ್ ಮಾಡಿದ್ದಾರೆ. ಇದಲ್ಲದೆ ಸೊಂಟದಮೇಲೆ ನೀರನ್ನು ಹಾಕಿ ನೃತ್ಯ ಮಾಡಿದ್ದಾರೆ. ಮಾದಕವಾಗಿ ಕಾಣಿಸಿಕೊಂಡ ಅವರನ್ನು ನೋಡಿ ಇತರೆ ತೀರ್ಪುಗಾರರು ಅಚ್ಚರಿಗೊಂಡಿದ್ದಾರೆ.
ಇತ್ತ ಇಂಟರ್ ನೆಟ್ ನಲ್ಲಿ ಈ ಡ್ಯಾನ್ಸ್ ವಿಡಿಯೋ ಬೆಂಕಿ ಹಚ್ಚಿದೆ. ಕೆಲವರು ನೋರಾ ಅವರ ಧೈರ್ಯವನ್ನು ಮೆಚ್ಚಿದ್ದು, ಇನ್ನು ಕೆಲವರು ಅವರ ವಿರುದ್ಧ ಹರಿಹಾಯ್ದಿದ್ದಾರೆ.
“ನೋರಾ ನಿಮ್ಮ ನೃತ್ಯ ಚೆನ್ನಾಗಿದೆ. ಆದರೆ ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ” ಎಂದಿದ್ದಾರೆ. “ಕುಟುಂಬದೊಂದಿಗೆ ಕೂತು ನೋಡಲು ಸಾಧ್ಯವಿಲ್ಲ .ಅಸಭ್ಯವಾಗಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. “ನೋರಾ ಅವರೇ ನಿಮ್ಮ ಕಲೆಯನ್ನು ನಾವು ಗೌರವಿಸುತ್ತೇವೆ ಆದರೆ ನಮ್ಮ ಸಂಸ್ಕೃತಿ ಇದಕ್ಕೆ ಅನಮತಿ ನೀಡಲ್ಲ. ದಯವಿಟ್ಟು ಇದನ್ನು ಮಾಡಬೇಡಿ” ಎಂದು ಇನ್ನೊಬ್ಬರು ಹೇಳಿದ್ದಾರೆ.
ನೋರಾ ಮುಂದೆ ವಿದ್ಯುತ್ ಜಮ್ವಾಲ್ ಅವರೊಂದಿಗೆ ʼಕ್ರ್ಯಾಕ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಫೆಬ್ರವರಿ 23 ರಂದು ಚಿತ್ರ ಬಿಡುಗಡೆಯಾಗಲಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
BBK11: ಗ್ರೂಪ್ ಕಟ್ಕೊಂಡು ಆಡುವವರಿಗೆ ನಾನು ಸಿಂಗಲ್ ಸಿಂಹವೆಂದು ಎಚ್ಚರಿಕೆ ಕೊಟ್ಟ ಚೈತ್ರಾ
BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್
BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.