BBK11: ಬಿಗ್‌ಬಾಸ್‌ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್‌ ಸುರೇಶ್‌ ಬಳಿ ಇರುವುದೇನು?

ʼಗೋಲ್ಡ್​ ಸುರೇಶ್ʼ​ ಕುತ್ತಿಗೆಯಲ್ಲಿ ಹುಲಿ ಉಗುರಿನ ಪೆಂಡೆಂಟ್​​

Team Udayavani, Oct 1, 2024, 2:56 PM IST

BBK11: ಬಿಗ್‌ಬಾಸ್‌ ಮನೆಗೆ ಮತ್ತೆ ಹುಲಿ ಉಗುರು ಸಂಕಷ್ಟ? ಗೋಲ್ಡ್‌ ಸುರೇಶ್‌ ಬಳಿ ಇರುವುದೇನು?

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ-11 (Bigg Boss Kannada-11) ಆರಂಭಗೊಂಡಿದೆ. ನಾನಾ ಕ್ಷೇತ್ರದ 17ಮಂದಿ ಸ್ಪರ್ಧಿಗಳು ʼಸ್ವರ್ಗ – ನರಕʼದ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.

ಮೊದಲ ದಿನದಂದಲೇ ಬಿಗ್‌ ಬಾಸ್‌ ಕಾರ್ಯಕ್ರಮ ರಂಗೇರಿದೆ. ಸ್ವರ್ಗ ಹಾಗೂ ನರಕದ ಮನೆಯಲ್ಲಿರುವ ಸ್ಪರ್ಧಿಗಳ ನಡುವೆ ವಾಗ್ವಾದ ಶುರುವಾಗಿದೆ. ಮನೆಯೊಂದು ಬಾಗಿಲು ಎರಡು ಎಂಬಂತೆ ಸ್ವರ್ಗ – ನರಕದ ನಿವಾಸಿಗಳ ನಡುವೆ ಕಿತ್ತಾಟ ಶುರುವಾಗಿದೆ.

ಕಳೆದ ಸೀಸನ್‌ನಲ್ಲಿ ಹುಲಿ ಉಗುರು ಪ್ರಕರಣದಿಂದ ಸದ್ದಾಗಿದ್ದ ಬಿಗ್‌ ಬಾಸ್‌ ಮನೆ ಈ ಬಾರಿಯೂ ಹುಲಿ ಉಗುರಿನ ವಿಚಾರದಿಂದ ಸುದ್ದಿ ಆಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಉತ್ತರ ಕರ್ನಾಟಕ ಮೂಲದಿಂದ ಬಂದು ಬಿಗ್‌ ಬಾಸ್‌ ಮನೆಯೊಳಗೆ ಹೋಗಿರುವ ʼಗೋಲ್ಡ್‌ ಸುರೇಶ್‌ʼ.

ಬಿಗ್‌ ಬಾಸ್‌ ಈ ಬಾರಿ ಪ್ರಿಮಿಯರ್‌ ಆಗುವ ಮೊದಲೇ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಿತ್ತು. ಅದರಲ್ಲಿ ಗೌತಮಿ ಜಾಧವ್‌, ಲಾಯರ್‌ ಜಗದೀಶ್‌, ಚೈತ್ರಾ ಕುಂದಾಪುರ ಅವರೊಂದಿಗೆ ʼಗೋಲ್ಡ್‌ ಸುರೇಶ್‌ʼ ಕೂಡ ಇದ್ದರು.

ಬೆಳಗಾವಿ ಮೂಲದವರಾದ ಗೋಲ್ಡ್‌ ಸುರೇಶ್‌ ಮೈತುಂಬಾ ಚಿನ್ನಾಭರಣ ತೊಟ್ಟಿಕೊಂಡೇ ಬಿಗ್‌ ಬಾಸ್‌ ಮನೆಯೊಳಗೆ ಹೋಗಿದ್ದಾರೆ.  ಅವರನ್ನು ನೋಡಿ ಇವರು ವರ್ತೂರು ಸಂತೋಷ್‌ 2.0 ಎಂದು ಕಮೆಂಟ್‌ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ವರ್ತೂರು ಸಂತೋಷ್‌ ಕೂಡ ಇದೇ ರೀತಿ ಚಿನ್ನವನ್ನು ಧರಿಸಿಕೊಂಡು ದೊಡ್ಮನೆಯೊಳಗೆ ಹೋಗಿದ್ದರು.

ಆದರೆ ಕೆಲ ಸಮಯದ ಬಳಿಕ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ ಕಾರಣಕ್ಕೆ ಅರಣ್ಯ ಇಲಾಖೆಗೆ ಅಧಿಕಾರಿಗಳ ಅವರ ವಿರುದ್ಧ ದೂರು ದಾಖಲಿಸಿಕೊಂಡು, ಬಿಗ್‌ ಬಾಸ್‌ ಮನೆಯಿಂದಲೇ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈ ವಿಚಾರ ಎಲ್ಲೆಡೆ ಸುದ್ದಿ ಆಗಿತ್ತು. ವಿಚಾರಣೆ ಎದುರಿಸಿ ವರ್ತೂರು ಸಂತೋಷ್‌ ಮತ್ತೆ ಬಿಗ್‌ ಬಾಸ್‌ ಮನೆಯೊಳಗೆ ಬಂದಿದ್ದರು.

ಆದರೆ ಇದೀಗ ಬಿಗ್‌ ಬಾಸ್‌ ಕನ್ನಡ -11ನಲ್ಲಿ ಸ್ಪರ್ಧಿ ಆಗಿರುವ ʼಗೋಲ್ಡ್‌ ಸುರೇಶ್‌ʼ ಕೂಡ ಚಿನ್ನಾಭರಣಗಳ ಜತೆ ಹುಲಿ ಉಗುರಿನ ಪೆಂಡೆಂಟ್‌ ವೊಂದನ್ನು ಧರಿಸಿದ್ದಾರೆ. ಅವರ ವಿಟಿಯಲ್ಲಿ ಇದನ್ನು ತೋರಿಸಲಾಗಿದೆ. ಇದು ಅಸಲಿಯೂ ಅಥವಾ ನಕಲಿಯೂ ಅಥವಾ ಫೈಬರ್‌ ನದ್ದೂ ಎನ್ನುವ ಪ್ರಶ್ನೆ ಕಾಡಿದೆ.

ವಿಟಿಯಲ್ಲಿ ಹುಲಿ ಉಗುರಿನ ಪೆಂಡೆಂಟ್‌ ತೋರಿಸಲಾಗಿದ್ದು, ಇದನ್ನು ಅವರು ಬಿಗ್‌ ಬಾಸ್‌ ಮನೆಯೊಳಗೆ ತೆಗೆದುಕೊಂಡು ಹೋಗಿದ್ದಾರಾ ಅಥವಾ ತೆಗೆದಿಟ್ಟಿದ್ದಾರಾ ಎನ್ನುವುದನ್ನು ಸ್ಪಷ್ಟ ಪಡಿಸಿಕೊಳ್ಳಲು ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಬಿಗ್‌ ಬಾಸ್‌ ಮನೆಯೊಳಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇದು ಅಸಲಿ ಹುಲಿ ಉಗುರಿನ ಪೆಂಡೆಂಟ್ ವೋ ಅಥವಾ ಪೈಬರ್‌ ರೂಪದಲ್ಲಿರುವ ಪೆಂಡೆಂಟ್‌ ವೋ ಎನ್ನುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕವಷ್ಟೇ ಗೊತ್ತಾಗಲಿದೆ ಎಂದು ʼನ್ಯೂಸ್‌ ಫಸ್ಟ್‌ʼ ವರದಿ ತಿಳಿಸಿದೆ.

ವೈಲ್ಡ್‌ ಲೈಫ್ ಕಾನೂನು ಪ್ರಕಾರ ಹುಲಿ ಉಗುರು ಧರಿಸುವುದು ಅಪರಾಧವಾಗಿದೆ.

ಯಾರು ಈ ಗೋಲ್ಡ್‌ ಸುರೇಶ್?:‌ ಇವರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಮೊದಲಿನಿಂದಲೂ ಚಿನ್ನಾಭರಣದ ಮೇಲೆ ವ್ಯಾಮೋಹ ಇಟ್ಟುಕೊಂಡಿರುವ ಅದನ್ನು ಸದಾ ಮೈಯಲ್ಲಿ ಧರಿಸಿರುತ್ತಾರೆ. ಆರ್ ಎಸ್‌ ಎಸ್‌ ಪೂರ್ಣವಧಿ ಕಾರ್ಯಕರ್ತನಾಗಿದ್ದ ಸುರೇಶ್‌, ಬಡತನದ ಹಿನ್ನೆಲೆಯಿಂದಲೇ ಬಂದವರು. ನಿರ್ಮಾಣ ಸಂಸ್ಥೆಯನ್ನು ಮುನ್ನಡಿಸಿ ದೊಡ್ಡಮಟ್ಟದ ಯಶಸ್ಸು ಕಂಡವರು. ವಿವಾಹಿತ ಆಗಿರುವ ಇವರು ಒಂದು ಮಗುವಿನ ತಂದೆ ಆಗಿದ್ದಾರೆ.

ಟಾಪ್ ನ್ಯೂಸ್

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

BBK11: ನೀರು ತುಂಬಿದ ಪೆಟ್ಟಿಗೆಯಲ್ಲಿ ಮುಳುಗಿದ ಮಂಜು – ಮೋಕ್ಷಿತಾ; ಫಿನಾಲೆಗೆ ತೀವ್ರ ಪೈಪೋಟಿ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್;‌ ಹೊರಗೆ ಹೋದದ್ದು ಇವರೇ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ

Writer’s audition: ಬರಹಗಾರರಾಗುವ ನಿಮ್ಮ ಕನಸನ್ನು ನನಸಾಗಿಸಲು ಇಲ್ಲಿದೆ ಉತ್ತಮ ವೇದಿಕೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.