Bigg Boss: ಪತ್ನಿ ಬಗ್ಗೆ ಮಾತನಾಡಿದ್ದಕ್ಕೆ ಕಪಾಳಮೋಕ್ಷ; ಬಿಗ್ ಬಾಸ್ ಮನೆಯಲ್ಲಿ ಹೈಡ್ರಾಮಾ
ಬಿಗ್ ಬಾಸ್ ಮನೆಯಿಂದ ಹೊರಗಡೆ ಹಾಕಿ.. ಕುಟುಂಬಸ್ಥರ ಆಕ್ರೋಶ
Team Udayavani, Jul 8, 2024, 1:04 PM IST
ಮುಂಬಯಿ: ಹಿಂದಿ ಬಿಗ್ ಬಾಸ್ ಓಟಿಟಿಯ ಮೂರನೇ ಸೀಸನ್ ಶುರುವಾಗಿ ವಾರಗಳೇ ಕಳೆದಿದೆ. ಕಾರ್ಯಕ್ರಮ ಶುರುವಾದ ಕೆಲ ದಿನಗಳಲ್ಲೇ ಸ್ಪರ್ಧಿಗಳ ನಡುವೆ ಕಚ್ಚಾಟ ಶುರುವಾಗಿದೆ.
ಯೂಟ್ಯೂಬರ್ಸ್, ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾ ಪ್ರಭಾವಿಗಳು ದೊಡ್ಮನೆಯೊಳಗಿದ್ದಾರೆ.
ಈ ಬಾರಿಯ ಸ್ಪರ್ಧಿಗಳಲ್ಲಿ ಯೂಟ್ಯೂಬರ್ ಅರ್ಮಾನ್ ಮಲಿಕ್ ಸುದ್ದಿಯಾಗಿದ್ದಾರೆ. ತನ್ನ ಇಬ್ಬರು ಪತ್ನಿಯರೊಂದಿಗೆ ಬಿಗ್ ಬಾಸ್ ಹೋಗಿದ್ದ ಅವರು ಕಾರ್ಯಕ್ರಮ ಆರಂಭದಿಂದ ಒಂದಲ್ಲ ಒಂದು ವಿಚಾರದಿಂದ ದೊಡ್ಡನೆಯಲ್ಲಿ ಸದ್ದು ಮಾಡಿದ್ದಾರೆ.
ಪಾಯಲ್ ಹಾಗೂ ಕೃತಿಕಾ ಅವರಲ್ಲಿ ಅರ್ಮಾನ್ ಅವರ ಮೊದಲ ಪತ್ನಿ ಪಾಯಲ್ ಎಲಿಮಿನೇಟ್ ಅಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ವಿಶಾಲ್ ಪಾಂಡೆ ಅವರಿಗೆ ಅರ್ಮಾನ್ ಮಲಿಕ್ ಕಪಾಳಕ್ಕೆ ಬಾರಿಸಿರುವುದು ಬಿಗ್ ಬಾಸ್ ಮನೆಯಲ್ಲಿ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದೆ.
ಇತ್ತೀಚೆಗೆ ವಿಶಾಲ್ ಪಾಂಡೆ ಸಹ ಸ್ಪರ್ಧಿ ಲವಕೇಶ್ ಕಟಾರಿಯಾ ಜೊತೆ ಮಾತನಾಡುತ್ತಿರುವ ವೇಳೆ ಅರ್ಮಾನ್ ಮಲಿಕ್ ಪತ್ನಿ ಕೃತಿಕಾ ಅವರ ಬಗ್ಗೆ ಮಾತನಾಡಿದ್ದರು.
“ಕೃತಿಕಾ ಭಾಬಿ ತುಂಬಾ ಸುಂದರವಾಗಿದ್ದಾರೆ. ನೋಡಲು ಸುಂದರವಾಗಿ ಕಾಣುತ್ತಾರೆ. ನಾನು ಒಳ್ಳೆಯ ಅರ್ಥದಲ್ಲಿ ಹೇಳುತ್ತಿದ್ದೇನೆ” ಎಂದು ಸಹ ಸ್ಪರ್ಧಿಯ ಬಳಿ ವಿಶಾಲ್ ಹೇಳಿದ್ದಾರೆ.
ಆದರೆ ಈ ವಿಚಾರ ಕೃತಿಕಾ ಪತಿ ಅರ್ಮಾನ್ ಅವರಿಗೆ ಗೊತ್ತಾದಾಗ ದೊಡ್ಡ ರಾದ್ಧಾಂತವೇ ಆಗಿದೆ. ವಿಶಾಲ್ ಬಳಿ ಸಿಟ್ಟಿನಿಂದಲೇ ಬಂದ ಅರ್ಮಾನ್ “ನೀನೊಂದು ಮಾತು ಹೇಳು, ನಿನ್ನ ವರ್ತನೆ ಮೊದಲಿನಿಂದಲೂ ಹೀಗೆಯೇ ಇತ್ತಾ?” ಎಂದಿದ್ದಾರೆ. ಇದಕ್ಕೆ ವಿಶಾಲ್ “ನಾನು ಆ ಅರ್ಥದಲ್ಲಿ ಹೇಳಿಲ್ಲ” ಎಂದಿದ್ದಾರೆ. ಇದಕ್ಕೆ ಮತ್ತಷ್ಟು ಸಿಟ್ಟಾದ ಅರ್ಮಾನ್ “ನೀನೇನು ಹೇಳಲೇ ಇಲ್ಲ, ನೀನು ಏನು ಅರಿಯದ ಮುಗ್ಧ” ಎಂದು ಸಿಟ್ಟಿನಿಂದ ಹೇಳಿದ್ದಾರೆ.
ಇದಾದ ಕೆವ ಸಮಯದ ಬಳಿಕ ಈ ವಿಚಾರದ ಬಗ್ಗೆ ಚರ್ಚೆಗಳು ಹೆಚ್ಚಾಗಿ ಅರ್ಮಾನ್ ವಿಶಾಲ್ ಅವರ ಕಪಾಳಕ್ಕೆ ಬಾರಿಸಿದ್ದಾರೆ. “ನೀನು ನನ್ನ ಮೇಲೆ ಹೇಗೆ ಕೈ ಮಾಡಿದೆ?” ಎಂದು ಹೇಳುತ್ತಾ ಜಗಳಕ್ಕೀಳಿದ್ದಾರೆ. ಆದರೆ ಈ ಸಮಯದಲ್ಲಿ ಮನೆಯವರು ಬಂದು ಇಬ್ಬರನ್ನು ಹಿಡಿದುಕೊಂಡಿದ್ದಾರೆ.
ಈ ಜಗಳದ ಪರಿಣಾಮ ʼವೀಕೆಂಡ್ ಕಾ ವಾರ್ʼ ನಲ್ಲಿ ಚರ್ಚೆಯಾಗಿದ್ದು, ಕಾರ್ಯಕ್ರಮದ ನಿಯಮವನ್ನು ಉಲ್ಲಂಘಿಸಿದ ಅರ್ಮಾನ್ ಅವರು ಕಾರ್ಯಕ್ರಮ ಮುಗಿಯುವವರೆಗೂ ನಾಮಿನೇಟ್ ಆಗಿದ್ದಾರೆ.
ಇತ್ತ ವಿಶಾಲ್ ಪಾಂಡೆ ಅವರ ಕುಟುಂಬಸ್ಥರು ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನನ್ನ ಸಹೋದರ ಮನಸ್ಸಿನಲ್ಲಿ ಕೆಟ್ಟ ಉದ್ದೇಶಗಳಿಲ್ಲದೆ ಆ ಮಾತನ್ನು ಹೇಳಿದ್ದಾರೆ. ಅರ್ಮಾನ್ ಕಾರ್ಯಕ್ರಮದಲ್ಲಿ ಉಳಿಯಲು ಅರ್ಹರಲ್ಲ. ಅವರು ನನ್ನ ಸಹೋದರನಿಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಬಿಗ್ ಬಾಸ್ ಅವರನ್ನು ಕಾರ್ಯಕ್ರಮದಿಂದ ತೆಗೆದುಹಾಕಬೇಕು” ಎಂದು ವಿಶಾಲ್ ಸಹೋದರಿ ನೇಹಾ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇನ್ನೊಂದೆಡೆ ವಿಶಾಲ್ ತಂದೆ – ತಾಯಿ ಕೂಡ ಅರ್ಮಾನ್ ಅವರನ್ನು ಕಾರ್ಯಕ್ರಮ ತೆಗೆದುಹಾಕಬೇಕೆಂದು ಆಯೋಜಕರಲ್ಲಿ ವಿಡಿಯೋ ಮಾಡಿ ಮನವಿ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Martin: ಕಿರುತೆರೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಧ್ರುವ ಸರ್ಜಾ ನಟನೆಯ ʼಮಾರ್ಟಿನ್ʼ
BBK11: ದಯವಿಟ್ಟು ಬಿಗ್ ಬಾಸ್ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.