![Parliament; Pushing in front of Parliament House; Two MPs injured, allegations against Rahul Gandhi](https://www.udayavani.com/wp-content/uploads/2024/12/rahul-mp-415x241.jpg)
Bigg Boss OTT 3: ಈ ಬಾರಿ ಸಲ್ಮಾನ್ ಖಾನ್ ಅನುಮಾನ; ಬೇರೆ ನಿರೂಪಕರತ್ತ ಆಯೋಜಕರ ಚಿತ್ತ
Team Udayavani, May 13, 2024, 12:54 PM IST
![7](https://www.udayavani.com/wp-content/uploads/2024/05/7-9-620x372.jpg)
ಮುಂಬಯಿ: ಹಿಂದಿ ಬಿಗ್ ಬಾಸ್ ಓಟಿಟಿಯ ಮೂರನೇ ಸೀಸನ್ ಬಗ್ಗೆ ದಿನಕಳೆದಂತೆ ಒಂದೊಂದೇ ಸುದ್ದಿಗಳು ಹರಿದಾಡುತ್ತಿದೆ. ಶೀಘ್ರದಲ್ಲಿ ಶೋ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಈ ನಡುವೆ ಕಾರ್ಯಕ್ರಮವನ್ನು ಈ ಬಾರಿ ಯಾರು ನಿರೂಪಣೆ ಮಾಡಲಿದ್ದಾರೆ ಎನ್ನುವುದರ ಬಗ್ಗೆ ಗೊಂದಲ ಉಂಟಾಗಿದೆ.
ಹಿಂದಿ ಬಿಗ್ ಬಾಸ್ ಹಾಗೂ ಓಟಿಟಿ ಸೀಸನ್ ನ್ನು ಹೆಚ್ಚಾಗಿ ಇದುವರೆಗೆ ಸಲ್ಮಾನ್ ಖಾನ್ ಅವರೇ ನಡೆಸಿಕೊಟ್ಟಿದ್ದಾರೆ. ಈ ಬಾರಿ ಸಲ್ಮಾನ್ ಖಾನ್ ಕಾರ್ಯಕ್ರಮವನ್ನು ನಡೆಸಿಕೊಡುವುದು ಅನುಮಾನ ಎನ್ನಲಾಗುತ್ತಿದೆ.
ಸಲ್ಮಾನ್ ಖಾನ್ ಅವರ ಸಿನಿಮಾದ ಚಿತ್ರೀಕರಣದ ಶೆಡ್ಯೂಲ್ ಈಗಾಗಲೇ ನಿಗದಿಯಾಗಿದ್ದು, ಈ ನಡುವೆ ಬಿಗ್ ಬಾಸ್ ಗಾಗಿ ಡೇಟ್ ಹೊಂದಿಸುವುದು ಕಷ್ಟವೆಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಈ ಕಾರಣದಿಂದ ಕಾರ್ಯಕ್ರಮದ ನಿರ್ಮಾಪಕರು ಅನಿಲ್ ಕಪೂರ್, ಕರಣ್ ಜೋಹರ್ ಮತ್ತು ಸಂಜಯ್ ದತ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ವರದಿ ತಿಳಿಸಿದೆ.
ಹೇಗಾದರೂ ಸಲ್ಮಾನ್ ಅವರನ್ನೇ ʼಬಿಗ್ ಬಾಸ್ ಓಟಿಟಿ-3ʼ ಗೆ ಕರೆತರುವ ಪ್ರಯತ್ನವನ್ನು ಆಯೋಜಕರು ಮಾಡುತ್ತಿದ್ದಾರೆ ಎನ್ನಲಾಗಿದೆ.
ಕರಣ್ ಅವರು ಬಹುಶಃ ಚಿತ್ರೀಕರಣದಲ್ಲಿ ನಿರತರಾಗಿರುವ ಕಾರಣದಿಂದ ಇದುವರೆಗೆ ಕಾರ್ಯಕ್ರಮದ ನಿರ್ಮಾಪಕರನ್ನು ಭೇಟಿ ಆಗಿಲ್ಲ ಎನ್ನಲಾಗಿದ್ದು, ಅನಿಲ್ ಅವರೊಂದಿಗೆ ಇನ್ನಷ್ಟೇ ಮಾತುಕತೆ ನಡೆಯಬೇಕಿದೆ. ಇನ್ನುಸಂಜಯ್ ದತ್ ಅವರನ್ನು ಶೀಘ್ರದಲ್ಲೇ ಭೇಟಿ ಆಗಲಿದ್ದಾರೆ ಎಂದು ವರದಿ ತಿಳಿಸಿದೆ.
ಬಿಗ್ ಬಾಸ್ ಓಟಿಟಿ ಸೀಸನ್ -1 ರಲ್ಲಿ ದಿವ್ಯಾ ಅಗರ್ವಾಲ್ ವಿಜೇತರಾಗಿದ್ದರು. ನಿಶಾಂತ್ ಭಟ್ ಎರಡನೇ ಸ್ಥಾನ ಪಡೆದಿದ್ದರು. ಎರಡನೇ ಸೀಸನ್ ನಲ್ಲಿ ಯೂಟ್ಯೂಬರ್ ಎಲ್ವಿಶ್ ಯಾದವ್ ವಿಜೇತರಾಗಿದ್ದರು. ಅಭಿಷೇಕ್ ಮಲ್ಹಾನ್ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದಿದ್ದರು.
ಟಾಪ್ ನ್ಯೂಸ್
![Parliament; Pushing in front of Parliament House; Two MPs injured, allegations against Rahul Gandhi](https://www.udayavani.com/wp-content/uploads/2024/12/rahul-mp-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್](https://www.udayavani.com/wp-content/uploads/2024/12/4-37-150x90.jpg)
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
![BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು](https://www.udayavani.com/wp-content/uploads/2024/12/bigg-2-150x96.jpg)
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
![BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು](https://www.udayavani.com/wp-content/uploads/2024/12/gold-1-150x97.jpg)
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
![BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು](https://www.udayavani.com/wp-content/uploads/2024/12/1111-150x90.jpg)
BBK11: ಗೆಲ್ಲಲೇ ಬೇಕಾದ ಟಾಸ್ಕ್‌ನಲ್ಲಿ ಎಡವಿದ ಚೈತ್ರಾ.. ನನ್ನಿಂದ ಆಗಲ್ಲವೆಂದು ಕಣ್ಣೀರು
![BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ](https://www.udayavani.com/wp-content/uploads/2024/12/bigg-1-150x71.jpg)
BBK11: ಚೈತ್ರಾಳನ್ನು ದೂಡಿದ ರಜತ್.. ಮೈ ಮುಟ್ಟಿದ್ದಕ್ಕೆ ಫೈಯರ್ ಬ್ರ್ಯಾಂಡ್ ಗರಂ
MUST WATCH
ಹೊಸ ಸೇರ್ಪಡೆ
![Parliament; Pushing in front of Parliament House; Two MPs injured, allegations against Rahul Gandhi](https://www.udayavani.com/wp-content/uploads/2024/12/rahul-mp-150x87.jpg)
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
![BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್](https://www.udayavani.com/wp-content/uploads/2024/12/4-37-150x90.jpg)
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
![ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು](https://www.udayavani.com/wp-content/uploads/2024/12/hospital-150x89.jpg)
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
![1](https://www.udayavani.com/wp-content/uploads/2024/12/1-37-150x80.jpg)
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
![Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್](https://www.udayavani.com/wp-content/uploads/2024/12/3-35-150x90.jpg)
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.