Small Screen: ಒಂದೇ ಕಾರ್ಯಕ್ರಮದ ಜಡ್ಜ್ ಆಗಿ ಕಿಚ್ಚ,ದರ್ಶನ್,ಯಶ್..? ಯಾವ ಶೋವಿದು?
Team Udayavani, Apr 2, 2024, 11:59 AM IST
ಬೆಂಗಳೂರು: ಕಿರುತೆರೆಗಳಲ್ಲಿ ವಾರಕ್ಕೊಂದರಂತೆ ಹೊಸ ಹೊಸ ಕಾರ್ಯಕ್ರಮಗಳು ಶುರುವಾಗುತ್ತದೆ. ವೀಕ್ಷಕರಿಗೆ ಹೊಸತಾಗಿ ಏನಾದರೂ ನೀಡಬೇಕೆನ್ನುವ ನಿಟ್ಟಿನಲ್ಲಿ ವಾಹಿನಿಗಳು ಸದಾ ವಿಭಿನ್ನ ರೀತಿಯ ಪ್ರಯತ್ನಗಳನ್ನು ಮಾಡುತ್ತದೆ.
ಸದ್ಯ ಕನ್ನಡದ ಬಹುತೇಕ ಮನರಂಜನೆಯ ವಾಹಿನಿಗಳಲ್ಲಿ ರಿಯಾಲಿಟಿ ಶೋಗಳು ನಡೆಯುತ್ತಿದೆ. ಈ ರಿಯಾಲಿಟಿ ಶೋಗಳಿಗೆ ತಮ್ಮದೇ ಆದ ವೀಕ್ಷಕರ ವರ್ಗವಿರುತ್ತದೆ. ಸೆಲೆಬ್ರಿಟಿಗಳು ರಿಯಾಲಿಟಿ ಶೋಗಳನ್ನು ನಡೆಸಿಕೊಡುವುದು ಹೊಸದೇನಲ್ಲ. ಆದರೆ ಒಂದೇ ಕಾರ್ಯಕ್ರಮದಲ್ಲಿ ಜನಪ್ರಿಯ ಸೆಲೆಬ್ರಿಟಿಗಳನ್ನು ತೀರ್ಪುಗಾರರನ್ನಾಗಿ ತಂದು ಕೂರಿಸುವುದು ಸಾಧ್ಯವೇ?
ಇಂಥದ್ದೊಂದು ಸಾಹಸಕ್ಕೆ ಕೈಹಾಕಲು ಜೀ ಕನ್ನಡ ವಾಹಿನಿ ಸಿದ್ದವಾಗಿದೆ. ಧಾರಾವಾಹಿ, ರಿಯಾಲಟಿ ಶೋಗಳನ್ನು ನೀಡಿ ಕನ್ನಡಿಗರ ಮನಗೆದ್ದಿರುವ ಜೀ ಕನ್ನಡ ಸದಾ ಒಂದಲ್ಲ ಒಂದು ಹೊಸ ಶೋಗಳನ್ನು ತರುತ್ತಲೇ ಇರುತ್ತದೆ. ಇದೀಗ ದೊಡ್ಡ ಸಾಹಸಕ್ಕೆ ಕೈಹಾಕಲು ಮುಂದಾಗಿದೆ.
ಇತ್ತೀಚೆಗಷ್ಟೇ ಜೀ ಕನ್ನಡದಲ್ಲಿ ʼಮಹಾನಟಿʼ ಎನ್ನುವ ಕಾರ್ಯಕ್ರಮ ಶುರುವಾಗಿದೆ. ಇದರಲ್ಲಿ ರಮೇಶ್ ಅರವಿಂದ್, ಪ್ರೇಮಾ ತರುಣ್ ಸುಧೀರ್ ಹಾಗೂ ನಿಶ್ವಿಕಾ ನಾಯ್ಡು ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಇದೀಗ ಜೀ ಕನ್ನಡ ʼಕಾಮಿಡಿ ಕಿಲಾಡಿಗಳು ಪ್ರಿಮಿಯರ್ ಲೀಗ್ʼ ಎನ್ನುವ ಹಾಸ್ಯಮಯ ರಿಯಾಲಿಟಿ ಶೋವೊಂದನ್ನು ಶುರು ಮಾಡುವ ತಯಾರಿಯಲ್ಲಿದೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ವೀಕ್ಷಕರ ತಲೆಗೆ ತೀರ್ಪುಗಾರರ ವಿಚಾರದಲ್ಲಿ ಹುಳು ಬಿಟ್ಟಿದೆ.
ಕಿರುತೆರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಯಶ್, ಅಭಿನಯ ಚಕ್ರವರ್ತಿ ಸುದೀಪ್, ಚಾಲೇಜಿಂಗ್ ಸ್ಟಾರ್ ದರ್ಶನ್ ನಡೆಸಿಕೊಡುವ ಹೊಚ್ಛ ಹೊಸ ರಿಯಾಲಿಟಿ ಶೋ ಎಂದು ʼಕಾಮಿಡಿ ಕಿಲಾಡಿಗಳು ಪ್ರಿಮಿಯರ್ ಲೀಗ್ʼ ಕಾರ್ಯಕ್ರಮದ ಪ್ರೋಮೊ ರಿಲೀಸ್ ಮಾಡಲಾಗಿದೆ.
ಈ ಮೂವರು ವಜ್ರಗಳನ್ನು ಒಂದೇ ಶೋನಲ್ಲಿ ಜಡ್ಜ್ ಆಗಿ ನೋಡೋ ಆಸೆ ಎಲ್ಲರಿಗೂ ಇರುತ್ತೆ. ಆದರೆ ಕಾಲ ಕೂಡಿ ಬರಬೇಕಲ್ವಾ. ಆದ್ರೆ ನಾವು ಎಂತಹ ಜಡ್ಜ್ ಗಳನ್ನು ತರುತ್ತೇವೆ ಎಂದರೆ ನೀವೂ ಊಹೆನೂ ಮಾಡಿರಲಿಲ್ಲ ಎಂದು ಪ್ರೋಮೊದಲ್ಲಿ ಹೇಳಲಾಗಿದೆ.
ಈ ಪ್ರೋಮೊ ನೋಡಿದ ಬಳಿಕ ಈ ಮೂವರು ಸ್ಟಾರ್ ನಟರು ಜಡ್ಜ್ ಆಗಿ ಕಾಣಿಸಿಕೊಳ್ಳುವುದು ಸಾಧ್ಯವೇ? ಇದು ಏಪ್ರಿಲ್ ಪೂಲ್ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಯಶ್ ಪ್ಯಾನ್ ಇಂಡಿಯಾ ಸಿನಿಮಾ ʼಟಾಕ್ಸಿಕ್ʼ ನಲ್ಲಿ ಬ್ಯುಸಿಯಾಗಿದ್ದಾರೆ. ಕಿಚ್ಚ ʼಮ್ಯಾಕ್ಸ್ʼ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇನ್ನು ದರ್ಶನ್ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಇದು ವಾಹಿನಿ ಮಾಡಿದ ಏಪ್ರಿಲ್ ಪೂಲ್ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಯಾವುದಕ್ಕೂ ತೀರ್ಪುಗಾರರು ಯಾರು ಎನ್ನುವುದನ್ನು ಕಾದುನೋಡಬೇಕಿದೆ. ಶೀಘ್ರದಲ್ಲಿ ಶೋ ಆರಂಭಗೊಳ್ಳಲಿದೆ.
ಈ ಮೂರು ವಜ್ರಗಳ ಜೊತೆ ಶೋ ಮಾಡೋ ಆಸೆ ನಮಗೂ ಇದೆ! ಆದ್ರೆ…#ComingSoon #ZeeKannada #BayasidaBaagiluTegeyona pic.twitter.com/g1U6o1SCeS
— Zee Kannada (@ZeeKannada) April 1, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.