Thalapathy 69: ದಳಪತಿ ವಿಜಯ್ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ
Team Udayavani, Oct 2, 2024, 3:20 PM IST
ಚೆನ್ನೈ: ದಳಪತಿ ವಿಜಯ್(Thalapathy Vijay) ಅವರ ʼಗೋಟ್ʼ (Goat Movie) ಸಿನಿಮಾ ಥಿಯೇಟರ್‌ನಲ್ಲಿ ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಂಡ ಬಳಿಕ ಓಟಿಟಿ ರಿಲೀಸ್‌ಗೆ ಸಿದ್ದವಾಗಿದೆ.
ʼಗೋಟ್ʼ ಹವಾ ಕಡಿಮೆ ಆಗುತ್ತಿದ್ದಂತೆ ದಳಪತಿ ವಿಜಯ್ ಅವರ ಕೊನೆಯ ಸಿನಿಮಾವೆಂದೇ ಹೇಳಲಾಗುತ್ತಿರುವ ‘Thalapathy 69’ ಸಿನಿಮಾದ ಬಗ್ಗೆ ಟ್ರೆಂಡ್ ಶುರುವಾಗಿದೆ.
ʼThalapathy 69’ ಸಿನಿಮಾವನ್ನು ಹೆಚ್. ವಿನೋದ್ (H. Vinoth) ಅವರು ನಿರ್ದೇಶನ ಮಾಡಲಿದ್ದು, ಇತ್ತೀಗಷ್ಟೇ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು.
ಇದನ್ನೂ ಓದಿ: BBK11: ಬಿಗ್‌ಬಾಸ್ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಕಾಮಿಡಿಯನ್ ಧನರಾಜ್; ಅಂಥದ್ದೇನಾಯ್ತು
ಪ್ರಜಾಪ್ರಭುತ್ವದ ಜ್ಯೋತಿ ಹೊತ್ತವರು 2025ಕ್ಕೆ ಆಗಮಿಸುತ್ತಿದ್ದಾರೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿತ್ತು.
ಶೂಟಿಂಗ್ ಆರಂಭಕ್ಕೂ ಮುನ್ನ ಸಖತ್ ಕ್ರೇಜ್ ಹುಟ್ಟಿಸಿರುವ ʼThalapathy 69’ ಸಿನಿಮಾದಲ್ಲಿ ನಟಿಸುವ ಪಾತ್ರವರ್ಗವನ್ನು ಚಿತ್ರತಂಡ ಒಂದೊಂದಾಗಿ ರಿವೀಲ್ ಮಾಡುತ್ತಿದೆ.
ಈಗಾಗಲೇ ಸೌತ್ ಸಿನಿಮಾದಲ್ಲಿ ತನ್ನ ಹೆಜ್ಜೆಯನ್ನಿಟ್ಟಿರುವ ಬಾಲಿವುಡ್ ನಟ ಬಾಬಿ ಡಿಯೋಲ್ (Bobby Deol) ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಧಿಕೃತವಾಗಿದೆ. ಇದೀಗ ಸಿನಿಮಾದ ನಾಯಕಿಯನ್ನು ಚಿತ್ರತಂಡ ಪರಿಚಯಿಸಿದೆ.
Bringing the stunning duo back to the big screen once again ♥️
We know you’ve already cracked it, but officially…😁
Welcome onboard @hegdepooja 🔥#Thalapathy69CastReveal#Thalapathy @actorvijay sir #HVinoth @thedeol @anirudhofficial @Jagadishbliss @LohithNK01 #Thalapathy69 pic.twitter.com/nzrtMdcw2l
— KVN Productions (@KvnProductions) October 2, 2024
ಕರಾವಳಿ ಚೆಲುವೆ, ಸೌತ್ ಸಿನಿಮಾರಂಗದ ಬ್ಯುಸಿ ನಟಿಯರಲ್ಲಿ ಒಬ್ಬರಾಗಿರುವ ಪೂಜಾ ಹೆಗ್ಡೆ(Pooja Hegde) ʼThalapathy 69’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಳಪತಿ ಅವರ 69ನೇ ಸಿನಿಮಾಕ್ಕೆ ಬಂಡವಾಳ ಹಾಕಲಿರುವ ‘ಕೆವಿಎನ್ ಪ್ರೊಡಕ್ಷನ್ಸ್’ (Kvn Productions) ಪೂಜಾ ಹೆಗ್ಡೆ ಅವರ ಪೋಸ್ಟರ್ ಹಂಚಿಕೊಂಡು ಪಾತ್ರವರ್ಗವನ್ನು ರಿವೀಲ್ ಮಾಡಿದೆ.
ಪೂಜಾ ಹೆಗ್ಡೆ ಅವರು ಈ ಹಿಂದೆ ವಿಜಯ್ ಅವರೊಂದಿಗೆ ʼಬೀಸ್ಟ್ʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇಬ್ಬರ ಅನ್ ಸ್ಕ್ರೀನ್ ಜೋಡಿಯನ್ನು ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ಅನಿರುದ್ಧ್ ರವಿಚಂದರ್ ಸಿನಿಮಾಕ್ಕೆ ಮ್ಯೂಸಿಕ್ ನೀಡಲಿದ್ದಾರೆ. ದಳಪತಿ ವಿಜಯ್ ಅವರ ರಾಜಕೀಯ ಜೀವನಕ್ಕೆ ಹತ್ತಿರವಾಗುವ ಸಿನಿಮಾವಿದು ಎನ್ನಲಾಗಿದೆ.
ಸಿನಿಮಾದಲ್ಲಿ ಎನ್ನಲಾಗಿದೆ. ವಿಜಯ್, ಬಾಬಿ, ಪೂಜಾ ಜತೆ ಮೋಹನ್ ಲಾಲ್ ಮತ್ತು ಮಮಿತಾ ಬೈಜು ಮುಂತಾದವರು ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
2025ರ ಅಕ್ಟೋಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಸದ್ಯ ಪೂಜಾ ಹೆಗ್ಡೆ ಸೂರ್ಯ – ಕಾರ್ತಿಕ್ ಸುಬ್ಬರಾಜ್ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.