Video: ಮತ್ತೆ ವಿವಾದದಲ್ಲಿ ಬಾಲಯ್ಯ: ನಟಿ ಅಂಜಲಿ ಹಿಂಭಾಗ ಮುಟ್ಟಿದ ವಿಡಿಯೋ ವೈರಲ್
Team Udayavani, Jun 1, 2024, 12:04 PM IST
ಹೈದರಾಬಾದ್: ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುವ ತೆಲುಗು ನಟ ಬಾಲಕೃಷ್ಣ ಇತ್ತೀಚೆಗೆ ನಟಿಯೊಬ್ಬರನ್ನು ವೇದಿಕೆಯಲ್ಲಿ ದೂಡಿದ ಘಟನೆಗೆ ಚಿತ್ರರಂಗದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ವಿಶ್ವಕ್ ಸೇನ್ ಅಭಿನಯಿಸಿರುವ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಟ ಬಾಲಕೃಷ್ಣಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಚಿತ್ರದಲ್ಲಿ ಅಂಜಲಿ ಹಾಗೂ ನೇಹಾ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.
ವೇದಿಕೆ ಮೇಲೆ ಮುಖ್ಯ ಅತಿಥಿಯಾಗಿ ಆಗಮಿಸಿದ ವೇಳೆ ಬಾಲಕೃಷ್ಣ ನಟಿ ಅಂಜಲಿ ಅವರನ್ನು ಒಮ್ಮೆಗೆ ದೂಡಿದ್ದರು. ಇದರಿಂದ ಒಂದು ಕ್ಷಣಕ್ಕೆ ಒಳಗಾದ ನಟಿ ಅದನ್ನು ತೋರಿಸದೆ ನಕ್ಕು ಸುಮ್ಮನಾಗಿದ್ದರು.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಕೃಷ್ಣ ಅವರು ದರ್ಪ ಮೆರೆದಿದ್ದಾರೆ ಅಂಥ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಇದಾದ ಬಳಿಕ ನಟಿ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದರು. “ನಾವು ಬಹಳ ಸಮಯದಿಂದ ಪರಸ್ಪರ ಉತ್ತಮ ಸ್ನೇಹದ ಜೊತೆ ಗೌರವವನ್ನು ಹೊಂದಿದ್ದೇವೆ” ಎಂದು ಹೈ-ಫೈವ್ ಮಾಡುವ ವಿಡಿಯೋವನ್ನು ಹಂಚಿಕೊಂಡು ವಿವಾದಕ್ಕೆ ತೆರೆ ಎಳೆದಿದ್ದಾರೆ.
ಈ ವಿವಾದ ತಣ್ಣಗೆ ಆಗುತ್ತಿದೆ ಎನ್ನುವಾಗಲೇ ಇದೀಗ ಅದೇ ಕಾರ್ಯಕ್ರಮದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ನಟ ವಿಶ್ವಕ್ ಸೇನ್ ನಟಿ ಅಂಜಲಿ ಅವರನ್ನು ಮಾತನಾಡಲು ವೇದಿಕೆಗೆ ಕರೆದಿದ್ದಾರೆ. ಈ ವೇಳೆ ನಟಿ ಅಂಜಲಿ ಬಾಲಕೃಷ್ಣ ಅವರ ಪಕ್ಕದಲ್ಲಿ ಕೂತಿದ್ದರು. ಅಂಜಲಿ ಎದ್ದು ಹೊರಟಾಗ ಆಕೆಯ ಹಿಂಭಾಗಕ್ಕೆ ಬಾಲಕೃಷ್ಣ ಮೆಲ್ಲಗೆ ತಟ್ಟಿದ್ದಾರೆ. ಒಂದು ಕ್ಷಣ ಇದರಿಂದ ಮುಜುಗರಕ್ಕೆ ಒಳಗಾದ ಅಂಜಲಿ ಅದನ್ನು ತೋರ್ಪಡಿಸದೆ ವೇದಿಕೆಯತ್ತ ನಡೆದಿದ್ದಾರೆ.
ಸದ್ಯ ವಿಡಿಯೋ ಕೂಡ ವೈರಲ್ ಆಗಿದ್ದು, ಹಿರಿಯ ಬಾಲಯ್ಯ ಅವರ ವರ್ತನೆಗೆ ಅನೇಕರು ಕಿಡಿಕಾಡಿದ್ದಾರೆ.
Serious ga Balayya istham ela untadu anedi
But matter ni cover chesi inka peddadi chesthunaru
Ss rajamouli vochi cg chesada @vamsi84
?#Anjali#GangsOfGodavari
pic.twitter.com/Lp99HWnziN— 𝗞𝗜𝗥𝗔𝗡 ɴᴛʀ (@cultNTRfan9999) May 31, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.