Minu Muneer: ನಟ ಜಯಸೂರ್ಯ, ಮುಕೇಶ್ ಸೇರಿ 6 ಮಂದಿಯ ವಿರುದ್ಧ ಕಿರುಕುಳದ ಆರೋಪ ಮಾಡಿದ ನಟಿ
Team Udayavani, Aug 26, 2024, 1:20 PM IST
ಕೊಚ್ಚಿ: ಹೇಮಾ ಸಮಿತಿ ವರದಿಯ (Hema Committee Report) ಬೆನ್ನಲ್ಲೇ ಮಾಲಿವುಡ್ ನಲ್ಲಿ ಮಹಿಳಾ ಕಲಾವಿದರ ಮೇಲೆ ನಡೆದಿದ್ದ ಒಂದೊಂದೇ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಈ ಹಿಂದೆ ತಮ್ಮ ಮೇಲಾದ ಕಿರುಕುಳ ಹಾಗೂ ದೌರ್ಜನ್ಯದ ಬಗ್ಗೆ ನಟಿಯರು ಬಹಿರಂಗವಾಗಿ ಹೇಳಿಕೆಯನ್ನು ನೀಡಿ, ಆರೋಪವನ್ನು ಮಾಡುತ್ತಿದ್ದಾರೆ.
ಮಲಯಾಳಂ ನಿರ್ದೇಶಕ ರಂಜಿತ್ (Malayalam director Ranjith), ಹಿರಿಯ ನಟ ಸಿದ್ದೀಕ್ (Actor Siddique) ಕಾಲಿವುಡ್ – ಮಾಲಿವುಡ್ ನಟ ರಿಯಾಜ್ ಖಾನ್ (Actor Riyaz Khan) ವಿರುದ್ಧ ಅಸಭ್ಯ ವರ್ತನೆ ಹಾಗೂ ಕಿರುಕುಳದ ಆರೋಪ ಕೇಳಿ ಬಂದಿದೆ.
ಇದೀಗ ನಟಿಯೊಬ್ಬರು ಮಾಲಿವುಡ್ ಸಿನಿಮಾರಂಗದಲ್ಲಿ ತಮಗಾದ ಕಿರುಕುಳದ ಬಗ್ಗೆ ಹೇಳಿದ್ದು, ಖ್ಯಾತ ನಟರು ಹಾಗೂ ತಂತ್ರಜ್ಞರ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಮಲಯಾಳಂ ನಟಿ ಮಿನು ಮುನೀರ್ (Minu Muneer) ತನ್ನ ಸಹ ನಟರು ಮತ್ತು ತಂತ್ರಜ್ಞರ ವಿರುದ್ಧ ಆರೋಪಗಳನ್ನು ಮಾಡಿದ್ದು, ಪ್ರಾಜೆಕ್ಟ್‌ಗಾಗಿ ಕೆಲಸ ಮಾಡುವಾಗ ಮೌಖಿಕ ಮತ್ತು ದೈಹಿಕ ನಿಂದನೆಯನ್ನು ಎದುರಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?:
“ನಾನು ಅನುಭವಿಸಿದ ದೈಹಿಕ ಮತ್ತು ಮೌಖಿಕ ನಿಂದನೆಯ ಘಟನೆಗಳ ಬಗ್ಗೆ ಬರೆಯುತ್ತಿದ್ದೇನೆ. ನಾನು ಇವರುಗಳ ಕೈಯಲ್ಲಿ ಬಳಲುತ್ತಿದ್ದೆ, ನಟ ಮುಕೇಶ್, ಮಣಿಯನ್ ಪಿಳ್ಳ ರಾಜು, ನಟ ಜಯಸೂರ್ಯ, ಚಂದ್ರಶೇಖರನ್, ಮಲಯಾಳಂ ಚಲನಚಿತ್ರೋದ್ಯಮದ ಪ್ರೊಡಕ್ಷನ್ ಕಂಟ್ರೋಲರ್ ನೋಬಲ್ ಮತ್ತು ವಿಚು” ಎನ್ನುವವರು ತಮಗೆ ದೈಹಿಕ ಹಾಗೂ ಮೌಖಿಕವಾಗಿ ನಿಂದಿಸಿ ಕಿರುಕುಳ ನೀಡಿದ್ದಾರೆ ಎಂದು ಅವರು ಫೋಟೋಗಳ ಸಮೇತ ಪೋಸ್ಟ್ ಹಾಕಿ ಆರೋಪಿಸಿದ್ದಾರೆ.
ಇದನ್ನೂ ಓದಿ: Mollywood: ನಟ ರಿಯಾಜ್ ಫೋನ್ ಮಾಡಿ ಲೈಂಗಿಕ ಆಸಕ್ತಿ ಬಗ್ಗೆ ಮಾತನಾಡಿದ್ದರು.. ನಟಿಯ ಆರೋಪ
“2013 ರಲ್ಲಿ ನಾನು ಪ್ರಾಜೆಕ್ಟ್‌ವೊಂದರಲ್ಲಿ ಕೆಲಸ ಮಾಡುವಾಗ ಈ ವ್ಯಕ್ತಿಗಳಿಂದ ದೈಹಿಕ ಮತ್ತು ಮೌಖಿಕ ನಿಂದನೆಗೆ ಒಳಗಾಗಿದ್ದೆ. ನಾನು ಸಹಕರಿಸಲು ಮತ್ತು ಕೆಲಸವನ್ನು ಮುಂದುವರಿಸಲು ಪ್ರಯತ್ನಿಸಿದೆ. ಆದರೆ ನಿಂದನೆಯನ್ನು ಸಹಿಸಲಾಗಲಿಲ್ಲ. ಪರಿಣಾಮವಾಗಿ ನಾನು ಮಲಯಾಳಂ ಚಲನಚಿತ್ರೋದ್ಯಮವನ್ನು ತೊರೆದು ಚೆನ್ನೈಗೆ ಸ್ಥಳಾಂತರಗೊಳ್ಳಬೇಕಾಯಿತು” ಎಂದು ಬರೆದುಕೊಂಡಿದ್ದಾರೆ.
“ನಾನು ಅನುಭವಿಸಿದ ಆಘಾತ ಮತ್ತು ನೋವಿಗೆ ನ್ಯಾಯವನ್ನು ಹುಡುಕುತ್ತಿದ್ದೇನೆ. ಅವರ ಹೇಯ ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ನಿಮ್ಮ ಸಹಾಯವನ್ನು ಕೋರುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಸದಸ್ಯತ್ವಕ್ಕಾಗಿ ಇಡವೆಲಾ ಬಾಬು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು ಎಂದು ಈ ಹಿಂದೆ ಮಿನು ಆರೋಪಿಸಿದ್ದರು.
‘ದೇ ಥಡಿಯಾ’ ಚಿತ್ರದ ಚಿತ್ರೀಕರಣದ ವೇಳೆ ನಟ ಜಯಸೂರ್ಯ (Jayasurya) ಅನುಚಿತವಾಗಿ ವರ್ತಿಸಿದ್ದರು. ಹಿರಿಯ ನಟ ಮಣಿಯನ್ ಪಿಳ್ಳ ರಾಜು (Maniyan pilla Raju) ರಾತ್ರಿ ನನ್ನ ಹೋಟೆಲ್ ಕೊಠಡಿಯ ಬಾಗಿಲು ತಟ್ಟಿ, ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು ಎಂದು ನಟಿ ಆರೋಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Kollywood: ಕಾರ್ತಿಕ್ ಸುಬ್ಬರಾಜ್ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್ ಆಗಿದೆ ಮಾಸ್
Tollywood: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್ ಬೌನ್ಸರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.