Nayanthara: ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್ ಸ್ಟಾರ್?
Team Udayavani, Oct 28, 2024, 10:11 AM IST
ಚೆನ್ನೈ: ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ (Actress Nayanthara) ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ನಟನೆಯಿಂದ ಎಷ್ಟು ಖ್ಯಾತಿಗಳಿಸಿದ್ದರೋ, ಕೆಲ ವಿವಾದಗಳಿಂದಲೂ ಅವರು ಸುದ್ದಿಯಾಗಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ. ವರ್ಷಗಳು ಕಳೆದಂತೆ ಅವರ ಮುಖ ಬದಲಾದಂತೆ ಕಾಣುತ್ತಿದೆ. ಅವರು ಕಾಸ್ಮೆಟಿಕ್ ಸರ್ಜರಿ ಮಾಡಿಸಿದ್ದಾರೆ ಎಂದು ಅನೇಕರು ಹೇಳಿದ್ದಾರೆ.
ಇದೀಗ ನಟಿ ನಯನತಾರಾ ಅವರೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ʼಹಾಟರ್ಫ್ಲೈʼ ಜತೆ ಮಾತನಾಡಿರುವ ಅವರು, “ಪ್ರತಿ ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕೂ ಮುನ್ನ ನಾನು ಐಬ್ರೋ ಶೇಪ್ ಮಾಡಿಸುತ್ತೇನೆ. ಹೀಗಾಗಿ ನನ್ನ ಮುಖ ವಿಭಿನ್ನವಾಗಿ ಕಾಣುತ್ತದೆ. ಬಹುಶಃ ಅದಕ್ಕಾಗಿಯೇ ನನ್ನ ಮುಖವು ಬದಲಾದಂತೆ ಜನರಿಗೆ ಕಾಣುತ್ತದೆ” ಎಂದು ನಟಿ ಹೇಳಿದ್ದಾರೆ.
ಐಬ್ರೋ ಶೇಪ್ ಮಾಡಿಸಿದ್ದನ್ನು ನೋಡಿ ಜನ, ನಾನು ಮುಖಕ್ಕೆ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ ಎಂದು ‘ರಾಜಾ ರಾಣಿʼ ಬೆಡಗಿ ಹೇಳಿದ್ದಾರೆ.
ಬಹುಭಾಷಾ ನಟಿಯಾಗಿರುವ ನಯನಯಾರಾ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದು,ಮುಖದ ವೈಶಿಷ್ಟ್ಯಗಳನ್ನು ಹೆಚ್ಚಿಸಲು ಪ್ಲಾಸ್ಟಿಕ್ ಸರ್ಜರಿ ಮತ್ತು ತೆಳ್ಳಗೆ ಕಾಣಲು ಲಿಪೊಸಕ್ಷನ್ ಸರ್ಜರಿ ಮಾಡಿಸಿದ್ದಾರೆ ಎನ್ನುವ ವದಂತಿಗಳು ಈ ಹಿಂದೆಯೂ ಹರಿದಾಡಿತ್ತು. ಆದರೆ, ಇಲ್ಲಿಯವರೆಗೂ ನಟಿ ಈ ವದಂತಿಗಳ ಬಗ್ಗೆ ಮಾತನಾಡಿರಲಿಲ್ಲ.
ಸದ್ಯ ನಯನತಾರಾ ನಟ ಕೆವಿನ್ ಅವರೊಂದಿಗಿನ ಹೊಸ ಸಿನಿಮಾದಲ್ಲಿ ಹಾಗೂ ನಿವಿನ್ ಪಾಲಿಯ ಜತೆಗಿನ ʼಡಿಯರ್ ಸ್ಟೂಡೆಂಟ್ಸ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollywood: ಸೂರ್ಯ – ಕಾರ್ತಿಕ್ ಸುಬ್ಬರಾಜ್ ʼರೆಟ್ರೋʼ ರಿಲೀಸ್‌ಗೆ ಡೇಟ್ ಫಿಕ್ಸ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
Pushpa 2: ಕಾಲ್ತುಳಿತದ ಗಾಯಾಳು ಬಾಲಕನ ಭೇಟಿಯಾದ ಅಲ್ಲು ಅರ್ಜುನ್
MUST WATCH
ಹೊಸ ಸೇರ್ಪಡೆ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
Mangaluru: ಜ.11, 12ರಂದು ಮಂಗಳೂರು ಲಿಟ್ ಫೆಸ್ಟ್… ಕಲೆ, ಸಾಹಿತ್ಯ, ಜಾನಪದಗಳ ಸಂಗಮ
Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್
Maharashtra: ಒಂದೇ ವಾರದಲ್ಲಿ ತಲೆ ಬೋಳು.. 3 ಗ್ರಾಮಗಳ ಜನರಿಗೆ ತಲೆ ಕೂದಲು ಉದುರುವ ಸಮಸ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.