ದಳಪತಿ 50ನೇ ಹುಟ್ಟುಹಬ್ಬಕ್ಕೆ ʼGOAT’ ಆ್ಯಕ್ಷನ್ ಟೀಸರ್ ರಿಲೀಸ್; ಫ್ಯಾನ್ಸ್ ಥ್ರಿಲ್
Team Udayavani, Jun 22, 2024, 11:11 AM IST
ಚೆನ್ನೈ: ದಳಪತಿ ವಿಜಯ್ ಅವರಿಗಿಂದು 50ನೇ ಹುಟ್ಟುಹಬ್ಬದ ಸಂಭ್ರಮ. ಫ್ಯಾನ್ಸ್‌ಗಳು ತನ್ನ ನೆಚ್ಚಿನ ಸೂಪರ್ ಸ್ಟಾರ್ ಬರ್ತ್ ಡೇಯನ್ನು ಜೋರಾಗಿಯೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಫ್ಯಾನ್ಸ್ ಗಳಿಗಾಗಿ ವಿಜಯ್ ತನ್ನ ಮುಂದಿನ ಸಿನಿಮಾದ ಟೀಸರ್ ಬಿಟ್ಟು ಖುಷಿಪಡಿಸಿದ್ದಾರೆ.
ರಾಜಕೀಯ ಅಖಾಡದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕಾರಣದಿಂದ ವಿಜಯ್ ಅವರ ಮುಂದಿನ ಸಿನಿಮಾಗಳ ಮೇಲೆ ಕುತೂಹಲ ಹೆಚ್ಚಾಗಿದೆ. ವಿಜಯ್ ವೆಂಕಟ್ ಪ್ರಭು ನಿರ್ದೇಶನದ ʼ ಗೋಟ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಹಾಡುಗಳಿಂದ ಸಖತ್ ಕ್ರೇಜ್ ಹುಟ್ಟಿಸಿರುವ ಈ ಸಿನಿಮಾದ ಟೀಸರ್ ವಿಜಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ ರಿಲೀಸ್ ಆಗಿದೆ.
ಇದೊಂದು ಸೈನ್ಸ್ ಫೀಕ್ಷನ್ ಚಿತ್ರವಾಗಿದ್ದು, ದಳಪತಿ ವಿಜಯ್ ʼಗೋಟ್ʼ ನಲ್ಲಿ ಡಬಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೈಕ್ ನಲ್ಲಿ ಚೇಸಿಂಗ್ ಮಾಡುವ ಆ್ಯಕ್ಷನ್ ದೃಶ್ಯದ ಟೀಸರ್ ನ್ನು ರಿಲೀಸ್ ಮಾಡಲಾಗಿದೆ. ವಿಜಯ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಬೈಕ್ ನಲ್ಲಿ ಸಾಗುತ್ತಾ, ಚೇಸಿಂಗ್ ನಲ್ಲಿ ಗನ್ ಫೈಯರ್ ಮಾಡುವುದನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ಟೀಸರ್ ನೋಡುಗರ ಗಮನ ಸೆಳೆದಿದ್ದು, ಫ್ಯಾನ್ಸ್ ಗಳು ಸಖತ್ ಥ್ರಿಲ್ ಆಗಿದ್ದಾರೆ.
ಸಿನಿಮಾದಲ್ಲಿ ವಿಜಯ್ ಜೊತೆ ಮೀನಾಕ್ಷಿ ಚೌಧರಿ, ಯೋಗಿ ಬಾಬು, ಜಯರಾಮ್, ಪ್ರಭುದೇವ, ಲೈಲಾ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಬಹುನಿರೀಕ್ಷಿತ ʼಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ಚಿತ್ರ ಸೆ.5 ರಂದು ವರ್ಲ್ಡ್ ವೈಡ್ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.