Actress: ಲೈವ್‌ನಲ್ಲೇ ಕಣ್ಣಿರಿಟ್ಟು ರಾಜಕಾರಣಿಯ ʼಕಾಮದಾಟʼದ ರಹಸ್ಯ ಬಿಚ್ಚಿಟ್ಟ ಖ್ಯಾತ ನಟಿ

ಹಣ ಅಧಿಕಾರ ಬಳಸಿ ನನ್ನನ್ನು ಅಪಹರಣ ಮಾಡಿ ಜೈಲಿಗಟ್ಟಿದರು.., ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡಿದ ನಟಿಯ ಆರೋಪ

Team Udayavani, Aug 29, 2024, 1:57 PM IST

088

ಹೈದರಾಬಾದ್:‌ ಮಾಲಿವುಡ್‌(Mollywood) ಸಿನಿಮಾರಂಗದಲ್ಲಿ ಹೇಮಾ ಸಮಿತಿ ವರದಿ(Hema Committee Report) ಬಂದ ಬಳಿಕ ಒಂದೊಂದೇ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿದೆ.

ಇದೀಗ ಆಂಧ್ರಪ್ರದೇಶದ ರಾಜಕಾರಣಿಯೊಬ್ಬರ ಮೇಲೆ ಮುಂಬೈ ನಟಿಯೊಬ್ಬರು ಮಾಡಿರುವ ಲೈಂಗಿಕ ಹಾಗೂ ಮಾನಸಿಕ ಹಿಂಸೆಯ ಆರೋಪ ರಾಜಕೀಯ ಹಾಗೂ ಟಾಲಿವುಡ್ ಸಿನಿಮಾರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಗುಜರಾತ್‌ ಮೂಲದ ಕಾದಂಬರಿ ಜೇತ್ವಾನಿ (Actress Kadambari Jetwani) ಬಣ್ಣದ ಲೋಕ್ಕೆ ಕಾಲಿಡುವ ಮುನ್ನ ಮುಂಬೈನಲ್ಲಿ ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದರು. 2012ರಲ್ಲಿ ಬಂದ ʼಸಡ್ಡಾ ಅಡ್ಡಾʼ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ 2015ರಲ್ಲಿ ಬಂದ ‘ಯೂಜಾ’ ಎನ್ನುವ ತೆಲುಗು ಚಿತ್ರಕ್ಕೆ ನಾಯಕಿಯಾಹಿ ಆಯ್ಕೆ ಆಗಿದ್ದರು.

ಹೀಗೆ ಬಣ್ಣದ ಲೋಕದಲ್ಲಿ ತನ್ನ ಮೋಹಕ ಅಂದದಿಂದ ಗಮನ ಸೆಳೆದಿದ್ದ ಕಾದಂಬರಿ ಜೇತ್ವಾನಿ ತೆಲುಗಿನ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಇತ್ತೀಚೆಗೆ ಲೈವ್‌ನಲ್ಲಿ ಮಾತನಾಡುತ್ತಾ ಕಣ್ಣೀರಿಟ್ಟು, ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ(Jagan Mohan Reddy ) ಅವರ ವೈಎಸ್‌ಆರ್‌ಸಿಪಿ(YSCRP) ಪಕ್ಷದ ನಾಯಕನೊಬ್ಬನ ಮೇಲೆ ಮೇಲೆ ಮಾಡಿರುವ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಆಂಧ್ರದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಯಾರ ಮೇಲೆ ಆರೋಪ?: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಹಣ ಹಾಗೂ ಅಧಿಕಾರದ ದುರ್ಬಳಕೆ ಮಾಡಿಕೊಂಡ ನನ್ನ ಹಾಗೂ ನನ್ನ ಕುಟುಂಬದ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

ವಿಜಯವಾಡ ಜಿಪಂ ಮಾಜಿ ಅಧ್ಯಕ್ಷ ಕುಕ್ಕಲ ನಾಗೇಶ್ವರ ರಾವ್ ಅವರ ಮಗ ವೈಎಸ್‌ಆರ್‌ಸಿಪಿ ನಾಯಕ ಕುಕ್ಕಲ ವಿದ್ಯಾಸಾಗರ್‌ (Kukkala Vidya Sagar) ಎಂಬಾತ ಪ್ರತಿದಿನ ನನಗೆ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದ. ವಾಟ್ಸಾಪ್ ನಲ್ಲಿ ಕರೆ ಮಾಡಿ ಬೆತ್ತಲೆಯಾಗಿ ನಿಂತು ಸೆಲ್ಫಿ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದ. ಅಂದಿನ ಆಂಧ್ರ ಸರ್ಕಾರದ ಪ್ರಬಲ ನಾಯಕರು, ಉನ್ನತ ಪೊಲೀಸ್ ಅಧಿಕಾರಿಗಳ ಗ್ಯಾಂಗ್ ಹಣ ಹಾಗೂ ಅಧಿಕಾರವನ್ನು ಬಳಸಿಕೊಂಡು ನನಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಆಂಧ್ರ ಸರ್ಕಾರದ ಆದೇಶದ ಮೇರೆಗೆ ಅದೊಂದು ದಿನ ಮುಂಬೈನಲ್ಲಿನ ನನ್ನ ಮನೆಗೆ ಆಂಧ್ರ ಪೊಲೀಸರು ದಾಳಿ ಮಾಡಿದ್ದರು. ನನ್ನನ್ನು ಅಪಹರಿಸಿ, ನನ್ನ ತಂದೆ – ತಾಯಿಯನ್ನು ಜೈಲಿಗಟ್ಟಿದ್ದರು. ಜೈಲಿನಲ್ಲಿ ನೀಡಿದ ಚಿತ್ರಹಿಂಸೆಯಿಂದಾಗಿ ನನ್ನ ತಂದೆಗೆ ಕಿವಿ ಕೇಳಿಸದಂತೆ ಆಯಿತು. ನನ್ನ ತಾಯಿಗೆ ಹೃದಯದ ಸಮಸ್ಯೆಯಾಯಿತು ಎಂದು ಅವರು ಆರೋಪಿಸಿದ್ದಾರೆ.

ಆರು ತಿಂಗಳಿಂದ ಯಾರೊಂದಿಗೂ ಮಾತನಾಡಲಿಲ್ಲ. ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈನಲ್ಲಿ ನನ್ನನ್ನು ಅಪಹರಿಸಿ ವಿಜಯವಾಡಕ್ಕೆ ಕರೆತರಲಾಯಿತು. ನನ್ನ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನನ್ನ ಪೋಷಕರ ಫೋನ್ ವಶಪಡಿಸಿಕೊಳ್ಳಲಾಗಿದೆ. ಅವರು ನನ್ನ ಸಂಬಂಧಿಕರಿಗೆ ಬೆದರಿಕೆ ಹಾಕಿದರು ಎಂದು ಅವರು ಹೇಳಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ನನ್ನ ಮೇಲೆ ದೂರು ದಾಖಲಿಸಿ ಸುಮಾರು 45 ದಿನಗಳ ಕಾಲ ನನ್ನನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ. ಈ ಕಾಲದಲ್ಲಿಯೂ ಮಹಿಳೆಗೆ ಈ ರೀತಿಯಾದರೆ ಮಹಿಳೆಯರಿಗೆ ಸ್ವಾತಂತ್ರ್ಯ ಎಲ್ಲಿದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ವಿದ್ಯಾ ಸಾಗರ್‌ ಪರಿಚಯವಾದದ್ದು ಹೇಗೆ?: ನನ್ನ ಮೇಲೆ ಸುಳ್ಳ ಆರೋಪ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ನನ್ನನ್ನು ಜೈಲಿಗಟ್ಟಿದ ಈತ ನನ್ನ ಸ್ನೇಹಿತವೆಂದು ಹೇಳಿಕೊಂಡು 2009ರಿಂದ ಪರಿಚಯವಾಗಿದ್ದ. ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾ, ಒಳ್ಳೆಯದನ್ನು ಬಯಸುತ್ತಾ ನನ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಈತ ನನ್ನ ಜೀವನದಲ್ಲಿ ಹೇಗೆಲ್ಲಾ ಮಾಡುತ್ತಾನೆ ಅಂಥ ನಾನು ಕಲ್ಪನೆಯೂ ಮಾಡಿಕೊಂಡಿರಲಿಲ್ಲ. ಅವನ ಒಳ್ಳೆಯತನದ ಹಿಂದೆ ಒಂದು ಕೆಟ್ಟ ಉದ್ದೇಶವಿತ್ತು ಎಂದು ನಟಿ ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾದ ಬಳಿಕ ನಾನು ಜೈಲಿನಿಂದ ಹೊರಬಂದಿದ್ದೇನೆ. ಅವರು ನಮ್ಮ ಜೀವನಕ್ಕೆ ದೇವರಂತೆ ಬಂದರು ಎಂದು ಅವರು ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಸದ್ಯ ನಟಿಯ ಈ ಆರೋಪ ಆಂಧ್ರ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದು, ಆರೋಪಿ ವಿದ್ಯಾ ಸಾಗರ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.