
Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..ಕಮೆಂಟ್ ಮಾಡಿದವರಿಗೆ ಎಂಜಾಯ್ ಮಾಡಿ ಎಂದ ನಟಿ
ಬಿಗ್ ಬಾಸ್ ಮಾಜಿ ಸ್ಪರ್ಧಿಯ ಖಾಸಗಿ ವಿಡಿಯೋ ಲೀಕ್..
Team Udayavani, Oct 13, 2024, 6:37 PM IST

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರದ್ದು (South Indian actress) ಎಂದು ಹೇಳಲಾಗುತ್ತಿರುವ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಾಲಿವುಡ್ (Mollywood) ಹಾಗೂ ಕಾಲಿವುಡ್‌ನಲ್ಲಿ (Kollywood) ನಟಿಯಾಗಿ ಗುರುತಿಸಿಕೊಂಡಿರುವ ಓವಿಯಾ ಹೆಲೆನ್ (Oviya Helen) ಅವರದ್ದು ಎನ್ನಲಾಗುತ್ತಿರುವ ಎಂಎಂಎಸ್ ವಿಡಿಯೋವೊಂದು ʼಎಕ್ಸ್ʼ ಹಾಗೂ ಇತರೆ ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಿದೆ.
ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿರುವ ಈ ವಿಡಿಯೋ ನಟಿ ಓವಿಯಾ ಅವರದ್ದು ಎಂದು ಅನೇಕರು ಇದನ್ನು ವೈರಲ್ ಮಾಡಿದ್ದಾರೆ. ಆದರೆ ಇದರ ಮೂಲ ಮಾತ್ರ ಅಸ್ಪಷ್ಟವಾಗಿದೆ. 17 ಸೆಕೆಂಡಿನ ಈ ವಿಡಿಯೋ ನಟಿಯ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಲೀಕ್ ಆಗಿರುವ ವಿಡಿಯೋ ನೋಡಿದ ಅನೇಕರು ಇದೊಂದು ಡೀಪ್ ಫೇಕ್ ವಿಡಿಯೋವೆಂದು ಕಮೆಂಟ್ ಮಾಡಿ, ನಟಿಯ ಬೆಂಬಲಕ್ಕೆ ನಿಂತಿದ್ದಾರೆ.
ನಟಿಯಿಂದ ಖಡಕ್ ರಿಪ್ಲೈ:
ವಿಡಿಯೋ ಲೀಕ್ ಆಗಿದೆ ಎನ್ನುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವ ನಟಿ ಓವಿಯಾ ತನ್ನ ಫೋಟೋ ಕೆಳಗೆ ಕಮೆಂಟ್ ಮಾಡಿರುವವರಿಗೆ ಖಡಕ್ ಆಗಿಯೇ ರಿಪ್ಲೈ ಮಾಡಿದ್ದಾರೆ. ಏನೇ ಕಮೆಂಟ್ ಬಂದರೂ ಅದಕ್ಕೆ ಧೈರ್ಯವಾಗಿಯೇ ರಿಪ್ಲೈ ಕೊಟ್ಟಿದ್ದಾರೆ.
ಓವಿಯಾ ಅವರ ಫೋಟೋ ಕೆಳಗೆ ಕಮೆಂಟ್ ಮಾಡಿರುವ ಒಬ್ಬಾತ “17 ಸೆಕೆಂಡ್ ಗಳ ವೀಡಿಯೋ ಇಲ್ಲಿದೆ ಮೇಡಂ” ಎಂದು ಮನ್ಷನ್ ಮಾಡಿದ್ದಾನೆ. ಇದಕ್ಕೆ ರಿಪ್ಲೈ ಕೊಟ್ಟಿರುವ ನಟಿ “ಎಂಜಾಯ್ ಮಾಡಿ” ಎಂದಿದ್ದಾರೆ.
ಇನ್ನೊಬ್ಬ ಬಳಕೆದಾರ ವಿಡಿಯೋ ಸ್ವಲ್ಪ ಉದ್ದವಿರಬೇಕಿತ್ತು ಎಂದು ಕಮೆಂಟ್ ಮಾಡಿದ್ದಾನೆ. ಇದಕ್ಕೆ ನಟಿ “ಮುಂದಿನ ಸಲಿ ನೋಡೋಣ” ಎಂದು ರಿಪ್ಲೈ ಕೊಟ್ಟು ಕಮೆಂಟಿಗರ ಬಾಯಿ ಮುಚ್ಚಿಸಿದ್ದಾರೆ.
ಯಾರು ಈ ಓವಿಯಾ ಹೆಲೆನ್? : ದಕ್ಷಿಣ ಭಾರತದ ಸಿನಿಮಾ ನಟಿ ಓವಿಯಾ ಹೆಲೆನ್ ಮೂಲತಃ ತಮಿಳು ಚಿತ್ರರಂಗಕ್ಕೆ ಸೇರಿದವರು. ಇವರ ಮೂಲ ಹೆಸರು ಹೆಲ್ಸನ್ ನೆಲ್ಸನ್.. ಅವರು 2009 ರಿಂದ ತಮಿಳು ಚಿತ್ರರಂಗದಲ್ಲಿ ನಟಿಯಾಗಿ ಸಕ್ರಿಯರಾಗಿದ್ದಾರೆ.
2007ರಲ್ಲಿ ಬಂದ ʼಕಾಂಗರೂʼ ಮಲಯಾಳಂ ಸಿನಿಮಾದಲ್ಲಿ ನಟಿಯಾಗಿ ಎಂಟ್ರಿ ಕೊಟ್ಟ ಅವರು, ಆ ಬಳಿಕ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡರು. ʼನಲ್ಲೈ ನಮದೆʼ (ತಮಿಳು) ʼಪುಟ್ಟುಮುಖಂಗಲ್ʼ (ಮಲಯಾಳಂ) , ‘ಕಿರಾತಕʼ (ಕನ್ನಡ), ʼಮರೀನಾʼ (ಮಲಯಾಳಂ) ʼಪುಲ್ಲಿವಾಲ್ʼ (ತಮಿಳು) , ʼಕಾಂಚನಾ -3 ʼ ʼಬೂಮರ್ ಅಂಕಲ್ʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಾಲಿವುಡ್ ನ 2015ರಲ್ಲಿ ಬಂದ ʼಯೇ ಇಷ್ಕ್ ಸರ್ಫಿರಾʼ ಸಿನಿಮಾದಲ್ಲೂ ಅವರು ನಟಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ..: ಸಿನಿಮಾರಂಗ ಹೊರತುಪಡಿಸಿದರೆ ಓವಿಯಾ 2017ರಲ್ಲಿ ಬಂದ ಬಿಗ್ ಬಾಸ್ ತಮಿಳು -1 (Bigg Boss Tamil) ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಬಿಗ್ ಬಾಸ್ ತಮಿಳು -2 ನಲ್ಲಿ ಅತಿಥಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
MUST WATCH
ಹೊಸ ಸೇರ್ಪಡೆ

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.