Oscars 2025: ಆಸ್ಕರ್‌ ರೇಸ್‌ನಲ್ಲಿ ʼಕಲ್ಕಿ 2898 ಎಡಿʼ?: ಪೋಸ್ಟ್‌ ವೈರಲ್‌


Team Udayavani, Oct 17, 2024, 12:18 PM IST

8

ಹೈದರಾಬಾದ್:‌ ವಿಶ್ವದಾದ್ಯಂತ ಕಮಾಲ್‌ ಮಾಡಿದ ಪ್ರಭಾಸ್ (Prabhas) ʼಕಲ್ಕಿ 2898 ಎಡಿʼ (Kalki 2898 AD)‌ ಥಿಯೇಟರ್‌ ಬಳಿಕ  ಓಟಿಟಿಯಲ್ಲೂ ಸದ್ದು ಮಾಡಿದೆ. ಸಿನಿಮಾದ ಎರಡನೇ ಭಾಗಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ.

ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ʼಕಲ್ಕಿʼ ಹತ್ತಾರು ದಾಖಲೆಗಳನ್ನು ಬ್ರೇಕ್‌ ಮಾಡಿದೆ. ಸಿನಿಮಾದ ಯಶಸ್ಸು ವರ್ಲ್ಡ್‌ ವೈಡ್‌ ನಲ್ಲಿ ಸದ್ದು ಮಾಡಿದೆ.

ಪೌರಾಣಿಕ ಕಥೆಯಲ್ಲಿ ಆ್ಯಕ್ಷನ್ ಅಂಶಗಳನ್ನು ಸೇರಿಸಿ ಸಿನಿಮಾವನ್ನು ಮಾಡಲಾಗಿದೆ. ಅಭಿನಯ, ಚಿತ್ರಕಥೆ ಹಾಗೂ ವಿಎಫ್ ಎಕ್ಸ್‌ ವಿಚಾರದಲ್ಲಿ ʼಕಲ್ಕಿʼ ಪ್ರೇಕ್ಷಕರನ್ನು ರಂಜಿಸಿದೆ.

ಓಟಿಟಿಯಲ್ಲೂ ಭರ್ಜರಿ ಪ್ರದರ್ಶನ ಕಂಡ ಬಳಿಕ ಇದೀಗ, ʼಕಲ್ಕಿ 2898 ಎಡಿʼ ಆಸ್ಕರ್‌ಗೆ (Oscars 2025) ಶಾರ್ಟ್‌ ಲಿಸ್ಟ್‌ ಆಗಿದೆ ಎನ್ನುವ ಪೋಸ್ಟ್‌ ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅತ್ಯುತ್ತಮ ವಿಷುವಲ್ ಎಫೆಕ್ಟ್ಸ್ ವಿಭಾಗದಲ್ಲಿ ʼಕಲ್ಕಿ 2898 ಎಡಿʼ2025ರ ಆಸ್ಕರ್ ಗೆ ನಾಮಿನೇಟ್‌ ಆಗಿದೆ ಎಂದು ʼಎಕ್ಸ್‌ʼ ಪೋಸ್ಟ್‌ವೊಂದರಲ್ಲಿ ಹೇಳಲಾಗಿದೆ. ಈ ಪೋಸ್ಟ್‌ ಎಲ್ಲೆಡೆ ಹರಿದಾಡಿದ್ದು, ಕೆಲ ಪ್ರೇಕ್ಷಕರು ಇದನ್ನೇ ಸತ್ಯವೆಂದು ನಂಬಿದ್ದಾರೆ.

‘ಕಲ್ಕಿ 2898 AD’ ಅತ್ಯುತ್ತಮ ವಿಷುವಲ್ ಎಫೆಕ್ಟ್ಸ್ ವಿಭಾಗದ 26 ಸಂಭಾವ್ಯ ನಾಮಿನೇಷನ್‌ ಪಟ್ಟಿಯಲ್ಲೂ ಇಲ್ಲ. ಈ ವಿಭಾಗದ ಶಾರ್ಟ್‌ ಲಿಸ್ಟ್ ನಲ್ಲಿ 20 ಸಿನಿಮಾಗಳಿರುತ್ತವೆ. ಅದರಲ್ಲಿ ಐದನ್ನು ಮಾತ್ರ ಅಂತಿಮ ನಾಮನಿರ್ದೇಶನಕ್ಕೆ ಕಳುಹಿಸಲಾಗುತ್ತದೆ. ಶಾರ್ಟ್‌ ಲಿಸ್ಟ್ ನ್ನು ಡಿಸೆಂಬರ್ 17 ರಂದು ಪ್ರಕಟಿಸಲಾಗುತ್ತದೆ ಎಂದು ʼದಿ ಹಾಲಿವುಡ್‌ ರಿಪೋರ್ಟರ್‌ʼ ವರದಿ ತಿಳಿಸಿದೆ.

ಅಂದಹಾಗೆ 97ನೇ ಅಕಾಡೆಮಿ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶಕ್ಕಾಗಿ ‘ಕಲ್ಕಿ 2898 AD’ ಸಿನಿಮಾವನ್ನು ಸಲ್ಲಿಸಲಾಗಿತ್ತು. ಆದರೆ ಅಂತಿಮವಾಗಿ ಕಿರಣ್ ರಾವ್ ಅವರ ‘ಲಾಪತಾ ಲೇಡೀಸ್’ ಸಿನಿಮಾ ಅಧಿಕೃತವಾಗಿ ಆಸ್ಕರ್‌ ಪ್ರಶಸ್ತಿ ರೇಸ್‌ಗೆ ಎಂಟ್ರಿ ಆಗಿದೆ.

ನಾಗ್‌ ಅಶ್ವಿನ್‌ ನಿರ್ದೇಶನದ ʼಕಲ್ಕಿʼ ಸಿನಿಮಾದಲ್ಲಿ ಪ್ರಭಾಸ್‌, ಅಮಿತಾಭ್‌, ಕಮಲ್‌ ಹಾಸನ್‌, ದೀಪಿಕಾ ಪಡುಕೋಣೆ ಮುಂತಾದವರು ನಟಿಸಿದ್ದಾರೆ.

ಸದ್ಯ ಪ್ರಭಾಸ್‌ ಅವರ ʼರಾಜಾ ಸಾಬ್‌ʼ, ʼಸ್ಪಿರಿಟ್‌ʼ ಹಾಗೂ ʼಸಲಾರ್‌ -2ʼ ಸಿನಿಮಾಗಳು ಬರಲಿದ್ದು, ಈ ಸಿನಿಮಾಗಳು ಮುಂದಿನ ವರ್ಷವೇ ತೆರೆಕಾಣುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

10

Kanguva: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ʼಕಂಗುವʼ ಫುಲ್‌ ಮೂವಿ ಲೀಕ್

9

Kasturi Shankar: ನಟಿ ಕಸ್ತೂರಿ ಶಂಕರ್‌ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ  

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.